ನವದೆಹಲಿ: ಖ್ಯಾತ ಉದ್ಯಮಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಮೈಕ್ರೋ ಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನೇ ಹಿಂದಿಕ್ಕುವ ಮೂಲಕ ಜಗತ್ತಿನ 4ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆಂದು ವರದಿ ತಿಳಿಸಿದೆ.
ಇದನ್ನೂ ಓದಿ:ಬರ್ಬರವಾಗಿ ಹತ್ಯೆಗೈದು ಯುವತಿಯ ರುಂಡದೊಂದಿಗೆ ಠಾಣೆಗೆ ಆಗಮಿಸಿದ ಪಾಗಲ್ ಪ್ರೇಮಿ
ಫೋರ್ಬ್ಸ್ ಬಿಡುಗಡೆ ಮಾಡಿರುವ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅದಾನಿ ಸ್ಥಾನ ಪಡೆದಿದ್ದು, ಗೌತಮ್ ಅದಾನಿಯ ಒಟ್ಟು ಆಸ್ತಿ ಮೊತ್ತ 115.4 ಬಿಲಿಯನ್ ಡಾಲರ್ ನಷ್ಟಿದೆ. ಈ ಹಿನ್ನೆಲೆಯಲ್ಲಿ ಅದಾನಿ ಈಗ ಜಗತ್ತಿನ ನಾಲ್ಕನೇ ಅತೀ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದಾಗಿ ತಿಳಿಸಿದೆ.
ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಆಸ್ತಿ ಮೌಲ್ಯ 104.2 ಬಿಲಿಯನ್ನ ಡಾಲರ್ ನಷ್ಟಿರುವುದಾಗಿ ತಿಳಿಸಿದೆ. ಕಳೆದ ವರ್ಷ ಏಪ್ರಿಲ್ 4ರಂದು ಬಿಡುಗಡೆಯಾಗಿದ್ದ ಪಟ್ಟಿಯಲ್ಲಿ ಅದಾನಿ 100 ಬಿಲಿಯನ್ ಡಾಲರ್ ಕ್ಲಬ್ ಸೇರಿದ್ದು, ಇದೀಗ ವಿಶ್ವದ ಟಾಪ್ 5 ಶ್ರೀಮಂತರ ಪಟ್ಟಿಯಲ್ಲಿ ಅದಾನಿ 4ನೇ ಸ್ಥಾನ ಪಡೆದಿರುವುದಾಗಿ ಫೋರ್ಬ್ಸ್ ವಿವರಿಸಿದೆ.
ಅಷ್ಟೇ ಅಲ್ಲ ಅದಾನಿ ಗ್ರೂಪ್ ಮುಖ್ಯಸ್ಥರಾಗಿರುವ ಗೌತಮ್ ಅದಾನಿ ಭಾರತದಲ್ಲಷ್ಟೇ ಅಲ್ಲ ಏಷ್ಯಾದಲ್ಲಿಯೂ ಶ್ರಿಮಂತ ವ್ಯಕ್ತಿಯಾಗಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿತ ಕಂಡಿರುವುದಾಗಿಇ ವರದಿ ತಿಳಿಸಿದೆ.
ಟೆಸ್ಲಾ ಮಸ್ಕ್ ನಂಬರ್ ವನ್:
ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಆಸ್ತಿ ಒಟ್ಟು ಮೊತ್ತ 234.4 ಬಿಲಿಯನ್ ಡಾಲರ್ ನಷ್ಟಿದ್ದು, ಜಗತ್ತಿನ ನಂಬರ್ ವನ್ ಶ್ರೀಮಂತರ ಪಟ್ಟಿಯಲ್ಲಿದ್ದಾರೆ. ಬೆರ್ನಾರ್ಡ್ ಅರ್ನೌಲ್ಟ್ ಸಿಇಒ ಲೂಯಿಸ್ ವಿಟ್ಟಾನ್ ಆಸ್ತಿಯ ಒಟ್ಟು ಮೌಲ್ಯ 155.7 ಬಿಲಿಯನ್ ಡಾಲರ್ ನಷ್ಟಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಅದೇ ರೀತಿ ಅಮೆಜಾನ್ ಮುಖ್ಯಸ್ಥ ಜೆಫ್ ಬಿಜೋಸ್ 143.9 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದು, ಮೂರನೇ ಸ್ಥಾನದಲ್ಲಿರುವುದಾಗಿ ಫೋರ್ಬ್ಸ್ ವರದಿ ತಿಳಿಸಿದೆ.