Advertisement

ಖ್ಯಾತ ಉದ್ಯಮಿ ಗೌತಮ್‌ ಅದಾನಿ ಈಗ ಭಾರತದ ನಂ.1 ಶ್ರೀಮಂತ

11:35 AM Sep 22, 2022 | Team Udayavani |

ನವದೆಹಲಿ: ಭಾರತದ ಖ್ಯಾತ ಉದ್ಯಮಿ, ಅದಾನಿ ಸಮೂಹದ ಅಧ್ಯಕ್ಷ ಗೌತಮ್‌ ಅದಾನಿ; ಇದೀಗ ದೇಶದ ಶ್ರೀಮಂತ ಉದ್ಯಮಿ. ಹೀಗೆಂದು ಹುರುನ್‌ ಇಂಡಿಯಾ ವರದಿಯಲ್ಲಿ ಹೇಳಲಾಗಿದೆ.

Advertisement

ಈ ಸಂಸ್ಥೆಯ 2022ರ ಶ್ರೀಮಂತರ ಪಟ್ಟಿಯಲ್ಲಿ ಗೌತಮ್‌ಗೆ ಅಗ್ರಸ್ಥಾನ ಲಭಿಸಿದೆ. ಇವರೆದುರಿಗೆ ಸವಾಲೊಡ್ಡಿದ್ದ ಭಾರತದ ಎಲ್ಲ ಉದ್ಯಮಿಗಳು ನಂತರದ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಪ್ರಸ್ತುತ ಅವರ ಸಂಪತ್ತಿನ ಮೌಲ್ಯ 10,94,400 ಕೋಟಿ ರೂ. ಕಳೆದ ಒಂದು ವರ್ಷದಲ್ಲಿ ಅವರ ಸಂಪತ್ತು ಶೇ.116ರಷ್ಟು ಹೆಚ್ಚಾಗಿದೆ. ಅಂದರೆ ದುಪ್ಪಟ್ಟಿಗಿಂತ ಜಾಸ್ತಿ! ಇದಕ್ಕೆ ಕಾರಣ ಬೇರೆಬೇರೆ ಕಂಪನಿಗಳನ್ನು ಕೊಂಡಿದ್ದು, ಹೊಸಹೊಸ ಉದ್ಯಮಗಳಿಗೆ ಕೈಹಾಕಿದ್ದು, ಹಂತಹಂತದ ಬೆಳವಣಿಗೆಗೆ ಮುಂದಾಗಿದ್ದು.

ಸರಿಯಾಗಿ ಹೇಳಬೇಕಾದರೆ ಕಳೆದ ಒಂದು ವರ್ಷದಲ್ಲಿ ಅದಾನಿ ಅವರು 5,88,400 ಕೋಟಿ ರೂ. ಸಂಪತ್ತನ್ನು ಗಳಿಸಿದ್ದಾರೆ. 2021ರಲ್ಲಿ ಅವರು ದಿನವೊಂದಕ್ಕೆ ಸರಾಸರಿ 1,612 ಕೋಟಿ ರೂ. ಸಂಪಾದಿಸಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸರಸ್ನೇಹಿ ತೈಲೋದ್ಯಮದಲ್ಲಿ 70 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡುವ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next