ನವದೆಹಲಿ: ಗುಜರಾತ್ ಮೂಲದ ಉದ್ಯಮಿ ಗೌತಮ್ ಶಾಂತಿಲಾಲ್ ಅದಾನಿ ಜಗತ್ತಿನ ಎರಡನೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಪೋರ್ಬ್ಸ್ ತಿಳಿಸಿದೆ.
ಇದನ್ನೂ ಓದಿ:ಚೀತಾಗಳು ಮೊದಲು ವಾತಾವರಣಕ್ಕೆ ಹೊಂದಿಕೊಳ್ಳಬೇಕು: ಮಧ್ಯಪ್ರದೇಶ ಸಿಎಂ ಚೌಹಾಣ್
ಅಮೆಜಾನ್ ಮುಖ್ಯಸ್ಥ, ಉದ್ಯಮಿ ಜೆಫ್ ಬೆಜೋಸ್ ಮತ್ತು ಲೂಯಿಸ್ ವಿಟ್ಟಾನ್ಸ್ ನ ಬರ್ನಾಡ್ ಅರ್ನೌಲ್ಟ್ ಅವರನ್ನು ಗೌತಮ್ ಅದಾನಿ ಹಿಂದಿಕ್ಕಿದ್ದು, ಪ್ರಸ್ತುತ ಗೌತಮ್ ಅದಾನಿ ಆಸ್ತಿಯ ಒಟ್ಟು ಮೌಲ್ಯ 154.7 ಬಿಲಿಯನ್ ಡಾಲರ್ ಆಗಿದೆ ಎಂದು ಪೋರ್ಬ್ಸ್ ವಿವರಿಸಿದೆ.
ಎಲಾನ್ ಮಸ್ಕ್ ಜಗತ್ತಿನ ಅತೀ ದೊಡ್ಡ ನಂಬರ್ ವನ್ ಶ್ರೀಮಂತ ಸ್ಥಾನವನ್ನು ಉಳಿಸಿಕೊಂಡಿದ್ದು, ಅವರ ಆಸ್ತಿಯ ಒಟ್ಟು ಮೌಲ್ಯ 273.5 ಬಿಲಿಯನ್ ಡಾಲರ್ ನಷ್ಟಿದೆ. ಕಳೆದ ತಿಂಗಳು ಕೂಡಾ ಪೋರ್ಬ್ಸ್ ಬಿಡುಗಡೆ ಮಾಡಿದ್ದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅದಾನಿ ಅರ್ನೌಲ್ಟ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನ ಪಡೆದಿದ್ದರು. ಆದರೆ ಎಲಾನ್ ಮಸ್ಕ್ ಮತ್ತು ಬೆಜೋಸ್ ಕ್ರಮವಾಗಿ ಒಂದನೇ ಮತ್ತು ಎರಡನೇ ಸ್ಥಾನದಲ್ಲಿದ್ದರು.
ಅರ್ನೌಲ್ಟ್ ಆಸ್ತಿಯ ಒಟ್ಟು ಮೌಲ್ಯ 153.5 ಬಿಲಿಯನ್ ಡಾಲರ್ ಆಗಿದ್ದು, ಅಮೆಜಾನ್ ನ ಜೆಫ್ ಬೆಜೋಸ್ ಅವರ ಆಸ್ತಿ ಒಟ್ಟು ಮೊತ್ತ 149. 7 ಬಿಲಿಯನ್ ಡಾಲರ್ ನಷ್ಟಿರುವುದಾಗಿ ಪೋರ್ಬ್ಸ್ ಸಮೀಕ್ಷಾ ವರದಿ ತಿಳಿಸಿದೆ.