ಗೌರಿಬಿದನೂರು: ಇಲಿಗಳ ಕಾಟದಿಂದ ಹೈರಾಣಾದ ಇಲ್ಲಿನ ವೃತ್ತ ನಿರೀಕ್ಷಕ ಕಚೇರಿ ಸಿಬ್ಬಂದಿ ಠಾಣೆಯಲ್ಲಿ ಬೆಕ್ಕು ಸಾಕಾಣಿಕೆ ಮಾಡಿ, ದಾಖಲೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರ ಹೊರವಲಯದ ಗ್ರಾಮಾಂತರ ಪೊಲೀಸ್ ಠಾಣೆ ಕಟ್ಟಡದಲ್ಲೇ ವೃತ್ತ ನಿರೀಕ್ಷಕರ ಕಚೇರಿಯೂ ಇದ್ದು, ಇವರು ಬೆಕ್ಕನ್ನು ಸಾಕಿದ್ದಾರೆ.
ಇಲಿಗಳ ಕಾಟ ಹೆಚ್ಚಾಗಿ, ಠಾಣೆಯಲ್ಲಿನ ಕಡತಗಳು, ಹಣ, ಸಮವಸ್ತ್ರ, ಮಹತ್ವದ ದಾಖಲೆಗಳನ್ನು ತಿಂದು ಹಾಕುತ್ತಿದ್ದವು. ಅಲ್ಲದೆ, ಸೆಲ್, ಇನ್ಸ್‌ಪೆಕ್ಟರ್, ಸಿಬ್ಬಂದಿ ಕೊಠಡಿ, ಕಪಾಟು ಗಳಲ್ಲಿ ಇಲಿಗಳು ಸೇರಿಕೊಂಡು, ಆಗಾಗ ಸದ್ದು ಮಾಡುತ್ತಿ ದ್ದವು. ಇದರಿಂದ ಪೊಲೀಸರು ಸಾಕಷ್ಟು ಕಿರಿಕಿರಿ ಅನು ಭವಿಸು ವಂತಾಗಿತ್ತು. ಇಲಿ ಗಳಿಂದ ದಾಖಲೆ ಕಾಪಾಡಿ ಕೊಳ್ಳುವುದೇ ತಲೆತೋವಾಗಿತ್ತು. ಇದಕ್ಕೆ ಸೂಕ್ತ ಉಪಾಯ ಮಾಡಿದ ವೃತ್ತ ನಿರೀಕ್ಷಕರ ಕಚೇರಿಯ ಸಿಬ್ಬಂದಿ ಗಂಗರಾಜು, ತಿಂಗಳ ಹಿಂದೆ ಬೆಕ್ಕಿನ ಮರಿ ತಂದು, ತನ್ನ ಸ್ನೇಹಿತರ ಸಹಾಯದಿಂದ ಅದಕ್ಕೆ ಹಾಲು, ಆಹಾರ ಹಾಕಿ ಸಾಕುತ್ತಿದ್ದಾರೆ. ಈಗಾಗಲೇ ಬೆಕ್ಕಿನ ಮರಿ ದೊಡ್ಡದಾಗಿದ್ದು, ಇಲಿಗಳನ್ನು ಹಿಡಿಯಲು ಶುರು ಮಾಡಿದೆ.
ಈಗಾಗಲೇ ಎರಡು ಮೂರು ಇಲಿಗಳ ಬೇಟೆಯನ್ನೂ ಆಡಿದೆ. ಬೆಕ್ಕಿನ ಧ್ವನಿ ಕೇಳಿ ಇಲಿಗಳು ಪರಾರಿಯಾಗುತ್ತಿದ್ದು, ಎರಡು ತಿಂಗಳಿಂದ ಕಚೇರಿಯ ಯಾವುದೇ ಕಡತ, ಸಮವಸ್ತ್ರ ಆಗಲಿ ನಾಶವಾಗುತ್ತಿಲ್ಲ, ಪ್ರತಿದಿನ ಬೆಕ್ಕಿಗೆ ಹಾಲನ್ನು ಸ್ನೇಹಿತರ ಸಹಾಯದಿಂದ ನೀಡಲಾಗುತ್ತಿದೆ ಎಂದು ಗಂಗರಾಜು ತಿಳಿಸಿದ್ದಾರೆ.