ತನಿಖಾಧಿಕಾರಿ ಅನುಚೇತ್ ತಿಳಿಸಿದರು.
Advertisement
ಸದ್ಯ ಆರೋಪಿಗಳ ವಿರುದ್ಧ ಐಪಿಸಿ 302, 114, 118, 120 (ಬಿ), 35 ಐಪಿಸಿ ಹಾಗೂ ಆಮ್ಸ್ì ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ಸಂಘಟಿತ ರೀತಿಯಲ್ಲಿ ಅಪರಾಧ ಕೃತ್ಯ ಎಸಗಿದ್ದಾರೆ. ಹೀಗಾಗಿ, ಎಲ್ಲ ಆರೋಪಿಗಳ ವಿರುದಟಛಿ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದರಿಂದ ಪೊಲೀಸರಿಗೆ 90 ದಿನಕ್ಕೆ ಸಲ್ಲಿಸುವ ಚಾರ್ಜ್‌ಶೀಟ್‌ನ್ನು 180 ದಿನದೊಳಗೆ ಸಲ್ಲಿಸಲು ಸಮಯ ಇರುತ್ತದೆ.ಆರೋಪಿಗಳನ್ನು 14 ದಿನಗಳ ಬದಲಿಗೆ 30 ದಿನದವರೆಗೆ ಪೊಲೀಸ್ ವಶಕ್ಕೆ ಪಡೆಯಲು ಅವಕಾಶ ಇರುತ್ತದೆ. ಜತೆಗೆ, ಆರೋಪಿಗಳಿಗೆ ಕನಿಷ್ಠ 5
ವರ್ಷದಿಂದ ಗರಿಷ್ಠ ಜೀವಾವಧಿ ಅಥವಾ ಗಲ್ಲುಶಿಕ್ಷೆ ವಿಧಿಸಬಹುದು. ಒಂದು ಲಕ್ಷದಿಂದ 5 ಲಕ್ಷ ದಂಡ ವಿಧಿಸಬಹುದು. ಈ ಹಿನ್ನೆಲೆಯಲ್ಲಿ ಕೋಕಾ ಕಾಯ್ದೆ
ಹಾಕಿದ್ದು, ಇನ್ಮುಂದೆ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.