Advertisement
ಈ ಮಧ್ಯೆ ಹಂತಕರ ಪತ್ತೆಗಾಗಿ ಪೊಲೀಸ್ ಇಲಾಖೆ ಇತಿಹಾಸದಲ್ಲೇ ಅತೀ ಹೆಚ್ಚು ಸಿಬ್ಬಂದಿಯ ವಿಶೇಷ ತನಿಖಾ ತಂಡ ರಚಿಸಲಾಯಿತು. ಸತತ ಎರಡೂವರೆ ತಿಂಗಳ ಕಾಲ ಹಗಲು-ರಾತ್ರಿ ಎನ್ನದೆ ಕಾರ್ಯಾಚರಣೆ ನಡೆಸಿದ ಒಬ್ಬರು ಐಜಿಪಿ, ಇಬ್ಬರು ಡಿಸಿಪಿ ನೇತೃತ್ವದ ಸುಮಾರು 150ಕ್ಕೂ ಅಧಿಕ ಸಿಬ್ಬಂದಿ ರಾಜ್ಯ ಸೇರಿದಂತೆ ನೆರೆರಾಜ್ಯಗಳಲ್ಲಿಯೂ ಹುಡುಕಾಟ ನಡೆಸಿದರೂ ಹಂತಕರ ಒಂದು ಸಣ್ಣ ಸುಳಿವು ಸಹ ಪತ್ತೆಯಾಗಲಿಲ್ಲ.
Related Articles
Advertisement
ಎಫ್ಎಸ್‌ಎಲ್ ವರದಿಯನ್ವಯ ಕಂಟ್ರಿಮೆಡ್ ಪಿಸ್ತೂಲ್ ಮಾರಾಟ ಮಾಡುವ ಉತ್ತರ ಪ್ರದೇಶ, ಬಿಹಾರ, ಆಂಧ್ರಪ್ರದೇಶ, ಕರ್ನಾಟಕದ ವಿಜಯಪುರ, ಕಲಬುರಗಿಯಲ್ಲಿಯೂ ಕಾರ್ಯಾಚರಣೆ ನಡೆಸಿದರೂ ಹೇಳಿಕೊಳ್ಳುವಂತಹ ಸುಳಿವು ಪತ್ತೆಯಾಗಲಿಲ್ಲ. ಗೌರಿ ಲಂಕೇಶ್ ಆಪ್ತರು ಸೇರಿದಂತೆ 250ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಿದರು.
ಎಸ್‌ಐಟಿ ಮೂಲಗಳ ಪ್ರಕಾರ, ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಇನ್ನು ಪ್ರಕಟಿಸಿದ ಮೊಬೈಲ್‌ಗೆ ಬರುವ ಕರೆಗಳಿಂದ ಹೆಚ್ಚಿನ ಪ್ರಯೋಜನವೇನು ಆಗಿಲ್ಲ. ಆದರೂ ಅವರು ಹೇಳುವ ರೀತಿಯಲ್ಲಿಯೂ ತನಿಖೆ ನಡೆಸಿದರೂ ಉಪಯೋಗವಾಗಲಿಲ್ಲ. ಕಾನೂನು ಸುವ್ಯವಸ್ಥೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಎಸ್‌ಐಟಿ ಜತೆಗೆ ದೈನಂದಿನ ಕೆಲಸಗಳನ್ನು ಸಹ ಮಾಡುತ್ತಿದ್ದೇವೆ. ಹತ್ಯೆ ಪ್ರಕರಣದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ನಿರೀಕ್ಷಿತ ಮಟ್ಟದ ಮಾಹಿತಿ ಇಲ್ಲ: ಅನಂತರ ಅ.14ರಂದು ಎಸ್‌ಐಟಿ ಸ್ಥಳೀಯರು, ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ ಇಬ್ಬರು ಶಂಕಿತರ ಮೂರು ರೇಖಾಚಿತ್ರಗಳನ್ನು ಬಿಡುಗಡೆ ಮಾಡಿ ಸಾರ್ವಜನಿಕರ ಮೋರೆ ಹೋದರು. 12 ಮತ್ತು 4 ಸೆಕೆಂಡ್‌ಗಳ 2 ಸಿಸಿಟಿವಿ ದೃಶ್ಯಾವಳಿಗನ್ನು ಸಹ ಬಿಡುಗಡೆ ಮಾಡಿತು. ಇದಕ್ಕಾಗಿ ಪ್ರತ್ಯೇಕ ಈ-ಮೇಲ್, ವಾಟ್ಸ್‌ಆ್ಯಪ್, ಸ್ಥಿರ ದೂರವಾಣಿಯನ್ನು ಸಿದ್ಧಪಡಿಸಲಾಯಿತು.
ಆದರೆ, ತನಿಖಾ ತಂಡ ನಿರೀಕ್ಷಿಸಿದ ಮಟ್ಟಕ್ಕೆ ಸಾರ್ವಜನಿಕರಿಂದ ಸ್ಪಂದನೆ ಸಿಗಲಿಲ್ಲ. ಆದರೆ, ಕೆಲವರು ಕರೆ ಮಾಡಿ ಗೌರಿಲಂಕೇಶ್ ವಿರುದ್ಧ ಹರಿಹಾಯುತ್ತಿದ್ದ, ಹೇಳಿಕೆ ನೀಡುತ್ತಿದ್ದ ವ್ಯಕ್ತಿಗಳು, ನಕ್ಸಲ್ ಬಗ್ಗೆಯೇ ಹೇಳುತ್ತಾರೆಯೇ ಹೊರತು ಹೆಚ್ಚಿನ ಲಾಭವೇನು ಸಿಗಲಿಲ್ಲ. ಆದರೆ, ಸರ್ಕಾರ ಮತ್ತು ಗೃಹ ಸಚಿವರು ತನಿಖಾ ತಂಡಕ್ಕೆ ಸುಳಿವಿದೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ತನಿಖೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ.
* ಮೋಹನ್ ಭದ್ರಾವತಿ