Advertisement

ಗೌಡನಹಳ್ಳಿ: ಬಾಲ್ಯ ವಿವಾಹ ತಡೆಗಟ್ಟಿದ ಅಧಿಕಾರಿಗಳು

03:32 PM Mar 18, 2017 | |

ಚಿಂಚೋಳಿ: ತಾಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ಗುಜರಾತ ರಾಜ್ಯದ ಯುವಕನೊಂದಿಗೆ ಶುಕ್ರವಾರ ಬಾಲ್ಯ ವಿವಾಹ ನಡೆಯುತ್ತಿರುವ ವಿಷಯ ಗೊತ್ತಾದ ನಂತರ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ವಿವಾಹ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಬಾಲ್ಯವಿವಾಹವನ್ನು ತಡೆಗಟ್ಟಿಯುವಲ್ಲಿ ಯಶಸ್ವಿಯಾಗಿದ್ದಾರೆ. 

Advertisement

ತೆಲಂಗಾಣ ರಾಜ್ಯದ ತಾಂಡೂರ ತಾಲೂಕಿನ ರುದ್ರವಾರಂ ಗ್ರಾಮದ 16 ವರ್ಷದ ಬಾಲಕಿ ಯೊಂದಿಗೆ ಗುಜರಾತ ರಾಜ್ಯದ ಧರ್ಮೇಶ ಎಂಬಾತನೊಂದಿಗೆ ವಿವಾಹ ನಡೆಯುತ್ತಿರುವ ವಿಷಯ ತಿಳಿದ ತಕ್ಷಣ ಗೌಡನಹಳ್ಳಿ ಗ್ರಾಮಕ್ಕೆ ಸಿಡಿಪಿಒ ಜಗನ್ನಾಥ ಗಾಧ, ಸಹಾಯಕ ಸಿಡಿಪಿಒ ಭೀಮಸೇನ ರಾಠೊಡ,

ಮೇಲ್ವಿಚಾರಕಿ ಸರೋಜ ಚಿಮ್ಮನಚೋಡ ಭೇಟಿ ನೀಡಿ ಪಾಲಕರ ಮನವೊಲಿಸಿ ಮದುವೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗುಜರಾತ ಮೂಲದ ಮಧು ಮಗ  ಧರ್ಮೇಶ, ಸ್ನೇಹಿತರಾದ ಮಾರುತಿ, ದಿನೇಶ, ಪುರುಷೋತ್ತಮ, ರಾಣಾ ಹಾಗೂ ಮಧ್ಯವರ್ತಿ ಮಹಿಳೆಯರಾದ ಮಲ್ಲಮ್ಮ

, ಶ್ರೀದೇವಿ ಹಾಗೂ ನರಸಿಂಹಲೂ ಎನ್ನುವರನ್ನು ಬಂಧಿಸಲಾಗಿದೆ. ಚಿಂಚೋಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಜಿಲ್ಲಾ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪಿಎಸ್‌ಐ ಶರಣಬಸಪ್ಪ ಕೋಡ್ಲಾ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next