Advertisement

ಭಾರತದ ಪ್ರಗತಿಯ ಚಾಲಕ ಗತಿಶಕ್ತಿ

12:19 AM Oct 13, 2021 | Team Udayavani |

ಬಹುತೇಕ ದೇಶಗಳ ಪರಿವರ್ತನೆಯಲ್ಲಿ ಮೂಲಸೌಕರ್ಯ ಮಹತ್ವದ ಪಾತ್ರ ವಹಿಸಿದೆ. ಅಮೆರಿಕಾದಲ್ಲಿ ಅಧ್ಯಕ್ಷ ರೂಸ್‌ವೆಲ್ಟ್ ಅವರಿಂದ ಆರಂಭವಾದ ಹೊಸ ಒಪ್ಪಂದವು ಮಹಾ ಆರ್ಥಿಕ ಕುಸಿತದ ಅನಂತರ ದೇಶವನ್ನು ಮೇಲಕ್ಕೆತ್ತಿತು. 2ನೇ ಮಹಾ ಯುದ್ಧದ ಅನಂತರ ಜಪಾನ್‌ನಲ್ಲಿ ಸಾರಿಗೆ ಆಧಾರಿತ ಅಭಿವೃದ್ಧಿ ನಿರ್ಣಾಯಕ ವಾಯಿತು. 1960-1990ರ ನಡುವೆ, ದಕ್ಷಿಣ ಕೊರಿಯಾ ವಾರ್ಷಿಕ ಸರಾಸರಿ ಶೇ.10 ದರದಲ್ಲಿ ಪ್ರಗತಿ ಕಂಡಿತು. 1980- 2010ರ ನಡುವೆ ಚೀನ ಸಹ ಇದೇ ರೀತಿಯ ವೇಗದಲ್ಲಿ ಬೆಳವ ಣಿಗೆ ಸಾಧಿಸಿತು. ಇದರ ಪರಿಣಾಮವಾಗಿ ಈ ದೇಶಗಳಲ್ಲಿ ಒಂದು ತಲೆಮಾರಿನೊಳಗೆ ಸಾಮಾಜಿಕ-ಆರ್ಥಿಕ ಪರಿವರ್ತನೆ ಯಾಯಿತು. ಈ ದೇಶಗಳ ಯಶಸ್ಸಿನಲ್ಲಿ ನಿರ್ಣಾಯಕ ಶಕ್ತಿಯು ಬಹು-ಮಾದರಿ ಸಾರಿಗೆ ಜಾಲವಾಗಿದ್ದು, ಇದು ರಫ್ತು ಸ್ಪರ್ಧಾತ್ಮ ಕತೆಯನ್ನು ಹೆಚ್ಚಿಸುವ ಲಾಜಿಸ್ಟಿಕ್ಸ್‌ ವೆಚ್ಚವನ್ನು ಗಮನಾರ್ಹವಾಗಿ ತಗ್ಗಿಸಿತು. ಭಾರತವು ಇದೇ ರೀತಿಯ ಆರ್ಥಿಕ ಪರಿವರ್ತನೆಗೆ ನಾಂದಿ ಹಾಡಲು ರಫ್ತು ಪ್ರಮುಖವಾಗಿದೆ. ಆದಾಗ್ಯೂ ನಮ್ಮ ದೇಶದ ಸಂಭಾವ್ಯ ಬೆಳವಣಿಗೆಯ ದರವನ್ನು ಹೆಚ್ಚಿಸುವಲ್ಲಿ ನಮ್ಮ ಮೂಲಸೌಕರ್ಯವು ಒಂದು ತೊಡಕಾಗಿದೆ.

Advertisement

ಮೂಲಸೌಕರ್ಯ ಏಕೆ ಮುಖ್ಯವಾಗುತ್ತದೆ? ಅರ್ಥಶಾಸ್ತ್ರದ ಭಾಷೆಯಲ್ಲಿ ಹೇಳುವುದಾದರೆ, ಮೂಲಸೌಕರ್ಯ ವೆಚ್ಚದ ಮೂಲಕ ಉಂಟಾಗುವ ಬಹು ಪಟ್ಟು ಪರಿಣಾಮಗಳು ಆರ್ಥಿ ಕತೆಗೆ ಸೇರುತ್ತವೆ. ಇದರರ್ಥ ಯೋಜನೆಯು ತತ್‌ಕ್ಷಣವೇ ಕಾರ್ಮಿಕರ, ನಿರ್ಮಾಣ ಸಾಮಗ್ರಿಗಳ ಹೆಚ್ಚಿನ ಬೇಡಿಕೆಯ ಮೂಲಕ ಕೊಡುಗೆ ನೀಡುವುದು ಮಾತ್ರವಲ್ಲದೆ, ಎರಡನೇ ಹಂತದಲ್ಲಿ ಸುಧಾರಿತ ಸಂಪರ್ಕವನ್ನು ಒದಗಿಸುತ್ತದೆ. ಸರಕುಗಳು ಮತ್ತು ಜನರ ಚಲನೆ ವೇಗವಾಗುತ್ತದೆ. ಲಾಜಿಸ್ಟಿಕ್ಸ್‌ ವೆಚ್ಚ ಕಡಿಮೆ ಯಾಗುತ್ತದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆಯ ಅಧ್ಯಯನಗಳು 2.5-3.5 ಪಟ್ಟು ಹೆಚ್ಚಳವನ್ನು ಅಂದಾಜಿಸಿವೆ. ಇದರ ಅರ್ಥ, ಮೂಲಸೌಕರ್ಯಗಳನ್ನು ಸೃಷ್ಟಿಸಲು ಸರಕಾರ ಖರ್ಚು ಮಾಡುವ ಪ್ರತೀ ರೂಪಾಯಿಗೆ, 2.5-3.5 ರೂಪಾಯಿ ಮೌಲ್ಯದ ಜಿಡಿಪಿ ಗಳಿಕೆಯಾಗುತ್ತದೆ. ಇದಲ್ಲದೆ ಆರ್ಥಿಕ ಕುಸಿತದ ಸಮಯದಲ್ಲಿ, ಈ ಪಟ್ಟು ಆರ್ಥಿಕ ವಿಸ್ತರಣೆಯ ಸಮಯದಲ್ಲಿ ಒಂದಕ್ಕಿಂತ ದೊಡ್ಡದಾಗಿರುತ್ತದೆ. ಸಮಯ ಮತ್ತು ಸರಿಯಾದ ಗುರಿಯನ್ನು ಹೊಂದಿದ್ದಲ್ಲಿ ಸಾರ್ವಜನಿಕ ಹೂಡಿಕೆಯು ನಿಜವಾಗಿಯೂ “ಕ್ರೌಡ್‌- ಔಟ್‌’ ಬದಲಿಗೆ “ಕ್ರೌಡ್‌-ಇನ್‌’ ಖಾಸಗಿ ಹೂಡಿಕೆಯನ್ನು ಸೂಚಿಸುತ್ತದೆ.
ಅದೇ ಸಂದರ್ಭದಲ್ಲಿ, ಒಂದು ದೇಶದ ಮೂಲಸೌಕರ್ಯ ಯೋಜನೆಯು ಸರಕು ಮತ್ತು ಜನರು ವಿವಿಧ ಸಾರಿಗೆ ವಿಧಾನಗಳ ಮೂಲಕ ಸರಾಗವಾಗಿ ಮತ್ತು ಪರಿಣಾಮಕಾರಿಯಾಗಿ ಚಲಿಸಲು ಕಾರಣವಾಗಬೇಕು. ಆದಾಗ್ಯೂ ಇದಕ್ಕೆ ಸಂಘಟಿತ ವಿಧಾನದ ಅಗತ್ಯವಿದೆ.

ಉದಾಹರಣೆಗೆ, ರಸ್ತೆ ಸಾರಿಗೆಗಳು ರೈಲ್ವೇ ಮಾರ್ಗಗ ಳಿಗೆ ಪೂರಕವಾಗುತ್ತವೆ, ರೈಲ್ವೇ ಬಂದರುಗಳಿಗೆ ಪೂರಕವಾಗಿರುತ್ತದೆ. ಒಳನಾಡುಗಳಿಂದ ಬಂದರುಗಳಿಗೆ ಸರಕುಗಳನ್ನು ಪರಿಣಾಮ ಕಾರಿಯಾಗಿ ಸಾಗಿಸುತ್ತದೆ. ಇದು ಭಾರತದಾದ್ಯಂತ ಬಹು ನಗರ, ಕೈಗಾರಿಕ ಕೇಂದ್ರಗಳ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ. ಇದರಿಂದ ಭಾರತದಾದ್ಯಂತ ಅನೇಕ ಕೈಗಾರಿಕಾ ಸಮೂಹಗಳು ತಲೆ ಎತ್ತುವುದರಿಂದ ಈ ನಗರ ಕೇಂದ್ರಗಳು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಕಾರಣವಾಗುತ್ತವೆ.

ಭಾರತವು ಇದನ್ನು ಸಾಧಿಸಲು ಪ್ರಯತ್ನಿಸಿದರೂ, ತಡೆರಹಿತ, ಬಹು-ಮಾದರಿ ಸಾರಿಗೆ ಜಾಲವು ಇನ್ನೂ ಸಾಧ್ಯವಾಗಿಲ್ಲ. ಉದಾಹರಣೆಗೆ, ರಸ್ತೆಗಳು ಸಾರಿಗೆಯ ಬಹುಪಾಲು ಹೊಂದಿವೆ. ಭಾರತದಲ್ಲಿ ಶೇ.64ರಷ್ಟು ಸರಕುಗಳನ್ನು ರಸ್ತೆಗಳ ಮೂಲಕ ಸಾಗಿಸಲಾಗುತ್ತದೆ. ರಸ್ತೆ ಸಾರಿಗೆಯಲ್ಲಿ ಡೀಸೆಲ್‌ ಹೆಚ್ಚಾಗಿ ಬಳಸುವುದರಿಂದ ತೈಲ ಬೆಲೆಯಲ್ಲಿ ಏರಿಕೆಯಾದರೆ, ಹೆಚ್ಚಿನ ಸಾರಿಗೆ ವೆಚ್ಚಗಳು ಮತ್ತು ಇಂಧನವು ಜಿಎಸ್ಟಿ ವ್ಯಾಪ್ತಿಯಲ್ಲಿ ಇಲ್ಲದಿರುವುದರಿಂದ ಎಲ್ಲ ಹಂತಗಳಲ್ಲಿ ಬೆಲೆಗಳು ಹೆಚ್ಚಾಗುತ್ತವೆ. ಜಿಎಸ್‌ಟಿ, ಫಾಸ್ಟ್‌ಟ್ಯಾಗ್‌ ಮತ್ತು ಇತರ ಉಪಕ್ರಮಗಳ ಅನಂತ ರವೂ, ರೈಲ್ವೆಯು ಪರಿಣಾಮಕಾರಿ ಸಾಗಣೆ ವಿಧಾನವಾಗಿದೆ. ಅನೇಕ ಆರ್ಥಿಕ ವಲಯಗಳು, ಕೈಗಾರಿಕ ಪಾರ್ಕ್‌ಗಳು, ಲಾಜಿಸ್ಟಿಕ್ಸ್‌ ಹಬ್‌ಗಳು ಮತ್ತು ಬಂದರುಗಳನ್ನು ಯೋಜಿಸಲಾಗಿತ್ತಾ ದರೂ, ಅವುಗಳಿಗೆ ಸಮರ್ಥ ಮಲ್ಟಿ-ಮಾಡೆಲ್‌ ಸಂಪರ್ಕ ವ್ಯವ ಸ್ಥೆಯ ಅಭಾವ ಮತ್ತು ಅವುಗಳ ಸಣ್ಣ ಗಾತ್ರದ ಕಾರಣದಿಂದಾಗಿ ಸಂಕಷ್ಟಕ್ಕೀಡಾದವು. ಪ್ರತಿಯೊಂದು ಇಲಾಖೆಯು ತಮ್ಮಷ್ಟಕ್ಕೆ ತಾವೇ ಕೆಲಸ ಮಾಡುತ್ತಿದ್ದರಿಂದ ಹೊಂದಾಣಿಕೆಯಿಲ್ಲದ ನಿರ್ಧಾ ರ ಗಳಿಂದಾಗಿ ಅಸ ಮಂಜಸ ಕೈಗಾರಿಕ ಜಾಲವನ್ನು ನಿರ್ಮಿಸಲಾಗಿದೆ. ಪರಿಹರಿಸಬೇಕಾದ ಸಮಸ್ಯೆಗಳಲ್ಲಿ ಹಲವಾರು ಅಂಶಗಳು ಪರಸ್ಪರ ಸಂಪರ್ಕವನ್ನೇ ಕಳೆದುಕೊಂಡಿವೆ. ಉತ್ಪಾದನೆಯಲ್ಲಿ ಪ್ರಮಾಣದ ಕೊರತೆ ಮತ್ತು ಅಸಮರ್ಥ ಲಾಜಿಸ್ಟಿಕ್ಸ್‌ ಜಾಲ ನಮ್ಮ ಜಾಗತಿಕ ಸ್ಪರ್ಧಾತ್ಮಕತೆಗೆ ಅಡ್ಡಿಯಾಯಿತು.

ಇದನ್ನೂ ಓದಿ:ಐಟಿ ದಾಳಿಗೆ ಸಿದ್ದರಾಮಯ್ಯ ಕಾರಣ: ಎಚ್‌ಡಿಕೆ

Advertisement

ಸಮರ್ಥ, ತಡೆರಹಿತ, ಬಹು-ಮಾದರಿ ಸಾರಿಗೆ ಜಾಲವನ್ನು ಸಾಧಿಸುವುದು ಸುಲಭದ ಕೆಲಸವೇನೂ ಅಲ್ಲ. ಇದಕ್ಕೆ ಪ್ರತ್ಯೇಕ ಸರಕಾರಿ ಇಲಾಖೆಗಳು ನಿಕಟ ಸಮನ್ವಯ ಮತ್ತು ಸಹಯೋಗ ದೊಂದಿಗೆ ಕೆಲಸ ಮಾಡಬೇಕಾಗುತ್ತದೆ, ಇದಕ್ಕೊಂದು ವ್ಯಾಪಕ ವಾದ ಮಾಸ್ಟರ್‌ ಪ್ಲಾನ್‌ ಬೇಕಾಗುತ್ತದೆ. ಪ್ರಧಾನಮಂತ್ರಿ ಯವರು ತಮ್ಮ 2021ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ರಾಷ್ಟ್ರೀಯ ಮಾಸ್ಟರ್‌ ಪ್ಲಾನ್‌ “ಗತಿಶಕ್ತಿ’ ನಮ್ಮ ಕೋಟ್ಯಂತರ ಜನರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತದೆ ಎಂದು ಒತ್ತಿ ಹೇಳಿದರು.

ಗತಿಶಕ್ತಿ ಕಾರ್ಯಕ್ರಮವು ಇಲಾಖಾವಾದದ ಅಹಂಕಾರಗಳನ್ನು ಮುರಿದು, ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಒಂದು ಮಾದರಿ ಬದಲಾವಣೆಯನ್ನು ತರುತ್ತದೆ. ಪ್ರಸ್ತಾವಿತ ಯೋಜನೆಯಲ್ಲಿ, ಅಸ್ತಿತ್ವದಲ್ಲಿರುವ ಮತ್ತು ಉದ್ದೇಶಿತ ಎಲ್ಲ ಆರ್ಥಿಕ ವಲಯಗಳನ್ನು ಮಲ್ಟಿಮಾಡಲ್‌ ಸಂಪರ್ಕ ಮೂಲಸೌಕರ್ಯದೊಂದಿಗೆ ಒಂದೇ ವೇದಿಕೆಯಲ್ಲಿ ಮ್ಯಾಪ್‌ ಮಾಡಲಾಗಿದೆ. ಒಟ್ಟಾರೆಯಾಗಿ ಯೋಜನೆ ಯಡಿ, ಭವಿಷ್ಯದಲ್ಲಿ ವಿವಿಧ ಸಚಿವಾಲಯಗಳ ವೈಯಕ್ತಿಕ ಯೋಜನೆಗಳನ್ನು ಪರಿಶೀಲಿ ಸಲಾಗುತ್ತದೆ ಮತ್ತು ಮಂಜೂರು ಮಾಡಲಾಗುತ್ತದೆ, ಇದು ಪ್ರಯತ್ನಗಳ ಸಮನ್ವಯಕ್ಕೆ ಕಾರಣವಾಗುತ್ತದೆ. ಗತಿಶಕ್ತಿಯು ಭಾರತದಲ್ಲಿ ವಿಶ್ವದರ್ಜೆಯ, ತಡೆರಹಿತ ಬಹು-ಮಾದರಿ ಸಾರಿಗೆ ಜಾಲವನ್ನು ಸೃಷ್ಟಿಸಲು ಸಮನ್ವಯವನ್ನು ಸಾಧಿಸುತ್ತದೆ.

ರಾಷ್ಟ್ರೀಯ ಮಾಸ್ಟರ್‌ ಪ್ಲಾನ್‌ ಆಧುನಿಕ ತಂತ್ರಜ್ಞಾನ ಮತ್ತು ಮೂಲಭೂತ ಸೌಕರ್ಯಗಳ ಸಂಘಟಿತ ಯೋಜನೆಗಾಗಿ ಇತ್ತೀಚಿನ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಸಾಕ್ಷ್ಯ ಆಧರಿತ ನಿರ್ಧಾರ ತೆಗೆದುಕೊಳ್ಳಲು 200ಕ್ಕೂ ಹೆಚ್ಚು ಲೇಯರ್‌ಗಳ ಜಿಐಎಸ್‌ ಆಧರಿತ ಎಂಟರ್‌ಪ್ರ„ಸ್‌ ರಿಸೋರ್ಸ್‌ ಪ್ಲಾನಿಂಗ್‌ ಸಿಸ್ಟಮ್‌ ಇದಕ್ಕೊಂದು ಉದಾಹರಣೆ ಯಾಗಿದೆ. ಮೇಲ್ವಿಚಾರಣೆಗಾಗಿ ಉಪಗ್ರಹ ಚಿತ್ರಗಳ ಬಳಕೆ ಮತ್ತೂಂದು ಉದಾಹರಣೆ. ಸಕಾಲಿಕ ಅನುಮತಿ ಮತ್ತು ಸಂಭಾವ್ಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಯೋಜನೆಯ ಮೇಲ್ವಿಚಾರಣೆಯಲ್ಲಿ ಡಿಜಿಟಲೀಕರಣವು ದೊಡ್ಡ ಪಾತ್ರವನ್ನು ವಹಿಸುತ್ತದೆ.

ಸಮರ್ಥ ಲಾಜಿಸ್ಟಿಕ್ಸ್‌ ನೆಟ್‌ವರ್ಕ್‌ ಒಂದು ಅಗತ್ಯವಾಗಿದೆ. ಉತ್ಪಾದನೆಯಲ್ಲಿ ಹೆಚ್ಚಳ ಇನ್ನೊಂದು. ಕೈಗಾರಿಕ ಪಾರ್ಕ್‌ಗಳು ಮತ್ತು ಲಾಜಿಸ್ಟಿಕ್ಸ್‌ ಪಾರ್ಕ್‌ಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾ ಗಿರಲು ಬೃಹತ್ತಾಗಿ ಬೆಳೆಯಬೇಕು. ಹಿಂದಿನ ಡಿಎಂಐಡಿಸಿ, ಈಗಿನ ರಾಷ್ಟ್ರೀಯ ಕೈಗಾರಿಕ ಕಾರಿಡಾರ್‌ ಅಭಿವೃದ್ಧಿ ನಿಗಮ(ಎನ್‌ಐಸಿಡಿಸಿ) ಈ ಕೈಗಾರಿಕ ಕಾರಿಡಾರ್‌ಗಳನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರಗಳೊಂದಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡುತ್ತಿದೆ. ಉದ್ಯೋಗಗಳು ಮತ್ತು ಬೆಳವಣಿಗೆಯ ಗರಿಷ್ಠ ಲಾಭವನ್ನು ಪಡೆಯುವ ರಾಷ್ಟ್ರೀಯ ಯೋಜನೆಗೆ ಅನು ಗುಣವಾಗಿ ಕೈಗಾರಿಕೀಕರಣಕ್ಕಾಗಿ ಭೂಮಿಯನ್ನು ಗುರುತಿಸುವಲ್ಲಿ ರಾಜ್ಯ ಸರಕಾರಗಳು ಮುಂದಾಗಬೇಕು.

ಅದೇ ಸಮಯದಲ್ಲಿ ನಾವು ಪ್ರಸ್ತುತ ವಾಸ್ತವಗಳನ್ನು ಪರಿಗಣಿಸಿ ಕೈಗಾರಿಕ ಕಾರಿಡಾರ್‌ಗಳಿಗೆ ಈ ಉಪಕ್ರಮ ಗಳನ್ನು ಖಚಿತಪಡಿಸಿ ಕೊಳ್ಳಬೇಕು. ಹವಾಮಾನದಲ್ಲಿ ಬದಲಾವಣೆಯಾಗುತ್ತಿದೆ. ಎಲ್ಲ ಯೋಜನೆಗಳು ಅಳವಡಿಕೆ ಮತ್ತು ತಗ್ಗಿಸುವಿಕೆಯ ತಂತ್ರಗಳನ್ನು ಒಳ ಗೊಂಡಿ ರಬೇಕು. 2030ಕ್ಕಿಂತ ಮುಂಚೆ ನಿವ್ವಳ ಶೂನ್ಯ ಇಂಗಾಲ ಸೂಸುವಿಕೆಯನ್ನು ಸಾಧಿಸುವ ಬದ್ಧತೆಯನ್ನು ಹೊಂದಿ ರುವ ಭಾರತೀಯ ರೈಲ್ವೆಯು ರೈಲ್ವೇಗಳನ್ನು ಹಸಿರೀಕರಣಗೊಳಿ ಸುವಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. 2014ರಿಂದ ರೈಲ್ವೇ ವಿದ್ಯುದ್ದೀಕರಣವು 10 ಪಟ್ಟು ಹೆಚ್ಚಾಗಿದೆ.

ಭಾರತವು ಉತ್ಪಾದನ ಶಕ್ತಿ ಕೇಂದ್ರವಾಗಿ ಪರಿವರ್ತನೆಯಾಗಲು ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ. ನಿರಂತರವಾಗಿ ವ್ಯಾಪಾರದ ಸರಳಗೊಳಿಸುವಿಕೆಯು ಆರ್ಥಿಕ ಸುಧಾರಣೆ ಗಳೊಂದಿಗೆ ಔಪಚಾ ರಿಕತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಬ್ಯಾಂಕ್‌ ಬ್ಯಾಲೆನ್ಸ್‌ ಶೀಟ್‌ಗಳನ್ನು ಸ್ವತ್ಛಗೊಳಿಸು ವುದರಿಂದ ಸಾಲದ ಲಭ್ಯತೆ ಹೆಚ್ಚುತ್ತದೆ. ದೊಡ್ಡ ಪ್ರಮಾಣದಲ್ಲಿ ಭೂಮಿಯ ಲಭ್ಯತೆಯು ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೂಲಸೌಕರ್ಯದಲ್ಲಿ ಸಾರ್ವಜನಿಕ ಹೂಡಿಕೆಯು ತಡೆರಹಿತ ಬಹು-ಮಾದರಿ ಮೂಲಸೌಕರ್ಯ ಜಾಲವನ್ನು ನಿರ್ಮಿಸುವ ಮೂಲಕ ಲಾಜಿಸ್ಟಿಕವೆಚ್ಚವನ್ನು ಕಡಿಮೆ ಮಾಡುತ್ತದೆ, ಆದಾಗ್ಯೂ ಇದನ್ನು ಕಾರ್ಯಗತಗೊಳಿಸಲು ವಿವಿಧ ಸರಕಾರಿ ಹಂತಗಳು ಮತ್ತು ಇಲಾಖೆಗಳಾದ್ಯಂತ ಸಮನ್ವಯದ ಅಗತ್ಯವಿರುತ್ತದೆ. ಗತಿಶಕ್ತಿ ಯೋಜನೆ ಇದನ್ನು ಸಾಧಿಸುವ ಗುರಿ ಹೊಂದಿದೆ. ವಿಶ್ವ ದರ್ಜೆಯ, ತಡೆರಹಿತ ಬಹು-ಮಾದರಿ ಸಾರಿಗೆ ಜಾಲವನ್ನು ನಿರ್ಮಿಸಲು ಸಮನ್ವಯದ ನಿರ್ಧಾರ ತೆಗೆದುಕೊಳ್ಳಲು ಇದು ನೆರವಾಗುತ್ತದೆ. ಇದನ್ನನುಸರಿಸಿ ಭಾರತವು ಪರಿವರ್ತನೆಯಾಗುತ್ತದೆ.
(ಲೇಖಕರ ಅಭಿಪ್ರಾಯಗಳು ವೈಯಕ್ತಿಕವಾದುವು)

ಇಂದು ಗತಿಶಕ್ತಿಗೆ ಚಾಲನೆ
ದೇಶದಲ್ಲಿ ಅನುಷ್ಠಾನದ ಹಂತದಲ್ಲಿರುವ ವಿವಿಧ ಮೂಲ ಸೌಕರ್ಯ ಯೋಜನೆಗಳಿಗೆ ಶೀಘ್ರಗತಿಯ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿಯವರು ಗತಿಶಕ್ತಿ ಯೋಜನೆಗೆ ಬುಧವಾರ ಚಾಲನೆ ನೀಡಲಿದ್ದಾರೆ. ಗತಿಶಕ್ತಿ ಎಂಬ ಪದದ ಅರ್ಥ ವೇಗ. ಕೇಂದ್ರ ಸರಕಾರದ ಮಟ್ಟದಿಂದ ಅಗೀಕೃತಗೊಂಡ ಯೋಜನೆ ಅತ್ಯಂತ ತಳಮಟ್ಟದ ಆಡಳಿತದಲ್ಲೂ ಜಾರಿಯಾಗಲಿದೆ.

ಯಾವ ಕ್ಷೇತ್ರಗಳು?
ವಿಶೇಷ ಆರ್ಥಿಕ ವಲಯ, ಮೂಲ ಸೌಕರ್ಯ ಯೋಜನೆಗಳುರಾಷ್ಟ್ರೀಯ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ರೈಲ್ವೇ ಯೋಜನೆ ಗಳು, ಅನಿಲ ಪೈಪ್‌ಲೈನ್‌ಎಲೆಕ್ಟ್ರಾನಿಕ್ಸ್‌ ಮತ್ತು ಔಷಧೋದ್ಯಮ, ಆಹಾರ ಸಂಸ್ಕರಣೆ, ರಕ್ಷಣ ಉತ್ಪಾದನೆ,

ಉನ್ನತಾಧಿಕಾರದ ಸಮಿತಿ
ಗತಿಶಕ್ತಿ ಮಾಸ್ಟರ್‌ ಪ್ಲಾನ್‌ ವ್ಯಾಪ್ತಿಯಲ್ಲಿ ಅನುಷ್ಠಾನವಾಗಲಿರುವ ಯೋಜನೆಗಳ ಮೇನೆ ನಿಗಾ ಇರಿಸಲು ರೈಲ್ವೇ ಮಂಡಳಿ ಅಧ್ಯಕ್ಷ, ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳು, ಬಂದರು, ನೌಕಾಯಾನ, ಜಲಸಾರಿಗೆ, ನಾಗರಿಕ ವಿಮಾನಯಾನ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಇಂಧನ, ದೂರಸಂಪರ್ಕ, ಕಲ್ಲಿದ್ದಲು, ಗಣಿ, ರಾಸಾಯನಿಕ ಮತ್ತು ರಸಗೊಬ್ಬರ, ಉಕ್ಕು, ವಿತ್ತ ಸಚಿವಾಲಯದ ಖರ್ಚು ವೆಚ್ಚಗಳ ವಿಭಾಗದ ಕಾರ್ಯದರ್ಶಿಗಳು, ವಾಣಿಜ್ಯ ವಿಭಾಗದ ಲಾಜಿಸ್ಟಿಕ್ಸ್‌ ವಿಭಾಗದ ಕಾರ್ಯದರ್ಶಿ.

– ಅಮಿತಾಬ್‌ ಕಾಂತ್‌
ನೀತಿ ಆಯೋಗದ ಸಿಇಓ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next