ಬಂಟ್ವಾಳ: ಮಂಗಳೂರು-ಬೆಂಗಳೂರು ಹೆದ್ದಾರಿಯ ಸೂರಿಕುಮೇರು ಬಳಿ ಹೆದ್ದಾರಿ ಮಗುಚಿ ಬಿದ್ದಿದ್ದ ಟ್ಯಾಂಕರನ್ನು ಬೆಳಗ್ಗಿನಿಂದ ಮಧ್ಯಾಹ್ನದವರೆಗಿನ ಕಾರ್ಯಾಚರಣೆಯ ಬಳಿಕ ಸಹಜ ಸ್ಥಿತಿಗೆ ತರಲಾಗಿದ್ದು, ಬಳಿಕ ವಾಹನ ಸಂಚಾರ ಆರಂಭಗೊಂಡಿತ್ತು.
ಬಂಟ್ವಾಳ ಸಂಚಾರಿ ಠಾಣಾ ಪಿಎಸ್ಐ ರಾಜೇಶ್ ಕೆ.ವಿ.ಹಾಗೂ ವಿಟ್ಲ ಠಾಣಾ ಪಿಎಸ್ಐ ವಿನೋದ್ ರೆಡ್ಡಿ ನೇತೃತ್ವದಲ್ಲಿ ಹೆದ್ದಾರಿಯಲ್ಲಿ ವಾಹನ ನಿಯಂತ್ರಣ ಕಾರ್ಯ ನಡೆದಿತ್ತು.
ಹೆದ್ದಾರಿ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವಾಹನಗಳು ಕಲ್ಲಡ್ಕ- ವಿಟ್ಲ- ಪುತ್ತೂರು- ಉಪ್ಪಿನಂಗಡಿ ಮಾರ್ಗವಾಗಿ ಹಾಗೂ ಬಿ.ಸಿ.ರೋಡು- ಗುರುವಾಯನಕೆರೆ- ಉಪ್ಪಿನಂಗಡಿ ಮಾರ್ಗವಾಗಿ ಸಂಚರಿಸಿದವು.
ಇದನ್ನೂ ಓದಿ: ಗ್ಯಾಸ್ ಟ್ಯಾಂಕರ್ ಪಲ್ಟಿ: ವಾಹನ ಸಂಚಾರ ಅಸ್ತವ್ಯಸ್ತ; ವಿದ್ಯಾರ್ಥಿಗಳು, ಉದ್ಯೋಗಿಗಳ ಪರದಾಟ
ಇದನ್ನೂ ಓದಿ:ಸೂರಿಕುಮೇರು: ಗ್ಯಾಸ್ ಟ್ಯಾಂಕರ್ ಪಲ್ಟಿ; ಸುತ್ತಮುತ್ತಲಿನಲ್ಲಿ ಬೆಂಕಿ ಬಳಸದಂತೆ ಮನವಿ