Advertisement

ಗ್ಯಾಸ್‌ ಪೈಪ್‌ಲೈನ್‌ ಸ್ಪೋಟಗೊಂಡು ಇಬ್ಬರು ಕಾರ್ಮಿಕರ ಸಾವು

12:50 PM Feb 05, 2023 | Team Udayavani |

ಒಡಿಶಾ:ಒಡಿಶಾದ ನಯಾಗರ್‌ ಜಿಲ್ಲೆಯಲ್ಲಿ ಶನಿವಾರ ನಡೆದ ಗ್ಯಾಸ್‌ ಪೈಪ್‌ಲೈನ್‌ ಸ್ಪೋಟದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಒಡಿಶಾದ ನಯಾಗರ್‌ನ ಸುಲನತಿ ಎಂಬ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಅಸುನೀಗಿದ್ದಾರೆ.

ಶನಿವಾರ ಮದ್ಯಾಹ್ನ ಕೆಲವು ಮಹಾರಾಷ್ಟ್ರ ಮೂಲದ ಕಾರ್ಮಿಕರು ಪೈಪ್‌ಲೈನ್‌ ದುರಸ್ತಿಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಇಬ್ಬರು ಕಾರ್ಮಿಕರು ಕೆಲಸ ಮಾಡುತ್ತಾ ಪೈಪ್‌ಲೈನ್‌ ಒಳಗೆ ಹೊಕ್ಕಿದ್ದಾರೆ. ಈ ವೇಳೆ ಗ್ಯಾಸ್‌ಪೈಪ್‌ ಸ್ಫೋಟಗೊಂಡಿದೆ. ಈ ವೇಳೆ ಇತರೆ ಮೂವರು ಕಾರ್ಮಿಕರು ಪೈಪ್‌ಲೈನ್‌ನ ಹೊರಬದಿಯಲ್ಲಿ ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದರು.

ಘಟನೆಯಲ್ಲಿ ಒಟ್ಟು ಐದು ಮಂದಿ ಕಾರ್ಮಿಕರು ಗಂಭೀರ ಗಾಯಗೊಂಡು ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಸಾವನ್ನಪ್ಪಿದವರನ್ನು ಮಹಾರಾಷ್ಟ್ರದ ವಿಜಯ್‌ ಗಂಗೂಲಿ ಮತ್ತು ಸೋನು ಎಂದು ಗುರುತಿಸಲಾಗಿದೆ.

ಘಟನೆ ನಡೆದ ತಕ್ಷಣವೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಘಟನೆಯ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next