Advertisement

ಮೇ 1ರಿಂದ ಬಡವರಿಗೆ ಗ್ಯಾಸ್‌ ಸಿಲಿಂಡರ್‌: ಖಾದರ್‌

02:04 AM Apr 19, 2017 | Karthik A |

ಚಿತ್ರದುರ್ಗ: ಅಡುಗೆ ಅನಿಲ ಸಂಪರ್ಕ ಇಲ್ಲದ ಬಡವರಿಗೆ ಮೇ 1ರಿಂದ ಹೊಸದಾಗಿ ಅಡುಗೆ ಅನಿಲ ಸಂಪರ್ಕ ನೀಡಲಾಗುವುದು ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ. ಅಡುಗೆ ಅನಿಲ ಸಂಪರ್ಕ ನೀಡಲು ಸಾಫ್ಟ್‌ವೇರ್‌ ಸಿದ್ಧಪಡಿಸಲಾಗಿದೆ. ಗ್ರಾ. ಪಂ. ಮೂಲಕ ಆಧಾರ್‌ ಸಹಿತ ಬಯೋಮೆಟ್ರಿಕ್‌ ಅರ್ಜಿ ನೀಡ ಬೇಕು. ಅನಂತರ ಉಜ್ವಲ ಯೋಜನೆಯಡಿ ಅಡುಗೆ ಅನಿಲಕ್ಕಾಗಿ ಹೆಸರು ನೋಂದಾಯಿಸಿರುವುದನ್ನು ಪರಿಶೀಲಿಸಿ ಹೊಸ ಗ್ಯಾಸ್‌ ಸಂಪರ್ಕ ನೀಡಲಾಗುವುದು ಎಂದರು.

Advertisement

ಅನ್ನಭಾಗ್ಯ ಯೋಜನೆ ವಿಸ್ತರಣೆ: ಅನ್ನಭಾಗ್ಯ ಯೋಜನೆಯನ್ನು ಇನ್ನು ಮುಂದೆ ವೃದ್ಧಾಶ್ರಮ, ಅನಾಥಾಶ್ರಮ, ವಿವಿಧ ಸೇವಾ ಸಂಸ್ಥೆಗಳಿಗೂ ವಿಸ್ತರಿಸಲಾಗುವುದು. ಒಬ್ಬರಿಗೆ 15 ಕೆಜಿ ಅಕ್ಕಿಯಂತೆ ಒಮ್ಮೆಲೇ ಆರು ತಿಂಗಳಿಗಾಗುವಷ್ಟು ಅಕ್ಕಿ ವಿತರಿಸಲಾಗುವುದು. ಸಂಬಂಧಪಟ್ಟವರು ಆಹಾರ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಅಡುಗೆ ಅನಿಲ ಸಂಪರ್ಕ ಹೊಂದಿರುವವರಿಗೆ 1 ಲೀಟರ್‌, ಅಡುಗೆ ಅನಿಲ ಇಲ್ಲದವರಿಗೆ 3 ಲೀಟರ್‌ ಸೀಮೆಎಣ್ಣೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಬಡ ಕುಟುಂಬಗಳಿಗೆ ರೀಚಾರ್ಚ್‌ ಮಾಡುವಂತಹ 2 ಎಲ್‌ಇಡಿ ಬಲ್ಬ್ಗಳನ್ನು ವಿತರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next