Advertisement
ನೀರಿಗೆ ಕೊರತೆಯಿಲ್ಲ, ಆದರೆ ಬಳಸಲು ಯೋಗ್ಯವಲ್ಲತೊಟ್ಟಂ ನಿವಾಸಿಗಳಿಗೆ ನೀರಿಗೇನೂ ಬರವಿಲ್ಲ. ಮನೆಯಂಗಳದಲ್ಲೇ ಇರುವ ಬಾವಿಯಲ್ಲಿ ವರ್ಷಪೂರ್ತಿ ನೀರು ದೊರಕುತ್ತದೆಯಾದರೂ ಅದನ್ನು ಬಳಸುವುದು ಹೇಗೆ ಎಂಬ ಪ್ರಶ್ನೆ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ. ಪಂಚಾಯತ್ ಹೋಗಿ ಪುರಸಭೆ ಬಂದರೂ ನಮ್ಮ ನೀರಿನ ಬವಣೆ ಮಾತ್ರಾ ಬಗೆಹರಿದಿಲ್ಲವಲ್ಲಾ ? ಎಂಬ ಕೊರಗು ತೊಟ್ಟಂ ವಾರ್ಡ್‌ನ ಜನರದ್ದಾಗಿದೆ.
ಮೂಳೂರು ತೊಟ್ಟಂ ವಾರ್ಡ್‌ನ ಮಹಾಲಕೀÒ$¾ ನಗರ ಕಾಲೊನಿ, ವೀರ ಮಾರುತಿ ಕಾಲೊನಿ ಮತ್ತು ಫಿಶರೀಸ್ ಶಾಲೆಯ ಬಳಿ ಮತ್ತು ವಾರ್ಡ್‌ಗೆ ತಾಗಿಕೊಂಡಿರುವ ಕರಾವಳಿ ಪ್ರದೇಶದ ಬಹುತೇಕ ಬಾವಿಗಳಲ್ಲಿ ಎಣ್ಣೆ ಮಿಶ್ರಿತ ಕೆಂಪು ನೀರು ದೊರಕುತ್ತಿದ್ದು, ಪರ್ಯಾಯ ವ್ಯವಸ್ಥೆಗಳಿಲ್ಲದ ಕಾರಣ ಜನ ಕೆಂಪು ನೀರನ್ನೇ ದಿನಬಳಕೆಗಾಗಿ ಬಳಸಿಕೊಳ್ಳ ಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಇಲ್ಲಿನ ಎಸ್.ಸಿ. ಕಾಲೊನಿಯಲ್ಲಿ ಟ್ಯಾಂಕ್‌ನ ಕೊರತೆಯಿಂದಾಗಿ ನೀರಿನ ಮಸಸ್ಯೆ ಉಲ½ಣಿಸಿದೆ. ಪುರಸಭಾ ಸದಸ್ಯೆಯ ಮನೆಯಲ್ಲೂ ಕೆಂಪು ನೀರು ಬಳಕೆ
ಮೂಳೂರು ತೊಟ್ಟಂ ವಾರ್ಡ್‌ನ ಬಹುತೇಕ ಮನೆಯಯವರು ಕುಡಿಯುವ ನೀರನ್ನು ತಮ್ಮ ಪರಿಚಿತರ ಮನೆಗಳಿಂದ ತರುತ್ತಿದ್ದರೆ, ಕೆಲವು ಮನೆಯವರು ಮನೆಯಲ್ಲೇ ನೀರು ಶುದೀªಕರಣ ಘಟಕವನ್ನು ಅಳವಡಿಸಿಕೊಂಡು ನೀರನ್ನು ಉಪಯೋಗಿಸುತ್ತಿದ್ದಾರೆ. ಕಾಪು ಪುರಸಭೆಯ 13ನೇ ತೊಟ್ಟಂ ವಾರ್ಡ್‌ನ ಸದಸ್ಯೆ ಶಾಂಭವಿ ಕುಲಾಲ್ ಅವರ ಮನೆಯ ಬಾವಿಯಲ್ಲೂ ಕೆಂಪು ನೀರೇ ಸಿಗುತ್ತಿದ್ದು, ಅವರು ಕೂಡಾ ಇಲ್ಲಿನ ಸಮಸ್ಯೆ ಬಗೆಹರಿಸಲಾಗದೇ ಕೆಂಪು ನೀರನ್ನೇ ಬಳಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
Related Articles
Advertisement
ವಾರದೊಳಗೆ ಕೆಲಸ ಪ್ರಾರಂಭದ ನಿರೀಕ್ಷೆಮೂಳೂರು ತೊಟ್ಟಂ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲೂ ಪೈಪ್‌ಲೈನ್ ಹಾದು ಹೋಗಿದೆ. ಕೆಂಪು ನೀರು ಬರುತ್ತಿರುವ ಮನೆಯವರು ಅರ್ಜಿ ಕೊಟ್ಟರೆ ಅವರ ಮನೆಗೆ ಪೈಪ್‌ಲೈನ್ ಜೋಡಿಸಲಾಗುವುದು. ಪೈಪ್‌ಲೈನ್ ವಿಸ್ತರಣೆಗಾಗಿ 4 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಅದರೊಂದಿಗೆ 4.50 ಲಕ್ಷ ರೂ. ವೆಚ್ಚದ ಕುಡಿಯುವ ಶುದೀªಕರಣ ಘಟಕ ಅಳವಡಿಕೆಗೆ ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ. ಒಂದು ವಾರದೊಳಗೆ ಕೆಲಸ ಪ್ರಾರಂಭವಾಗುವ ನಿರೀಕ್ಷೆಯಿದೆ.
-ರಾಯಪ್ಪ ಮುಖ್ಯಾಧಿಕಾರಿ, ಕಾಪು ಪುರಸಭೆ ಪೈಪ್‌ಲೈನ್ ಜೋಡಣೆಯಾಗಿಲ್ಲ
ಮೂಳೂರು ವೀರ ಮಾರುತಿ ಕಾಲೊನಿಯಲ್ಲಿ ಮನೆ ಕಟ್ಟಿ 8 ವರ್ಷ ಕಳೆದಿದೆ. ಅಂದಿನಿಂದ ಇಂದಿನವರೆಗೂ ನಮ್ಮ ಬಾವಿಯಲ್ಲಿ ಕೆಂಪು ನೀರೇ ದೊರಕುತ್ತಿದೆ. ನೀರನ್ನು ಸಿಂಟೆಕ್ಸ್‌ನಲ್ಲಿ ತುಂಬಿಸಿಟ್ಟರೆ ಹಲವು ಗಂಟೆಗಳ ಬಳಿಕ ತಿಳಿ ಬಣ್ಣಕ್ಕೆ ತಿರುಗುತ್ತದೆ. ನಮಗೆ ಪುರಸಭೆಯ ಪೈಪ್‌ಲೈನ್ ಬೇಕೆಂಬ ಬೇಡಿಕೆಯನ್ನು ಜನಪ್ರತಿನಿಧಿಗಳ ಮೂಲಕವಾಗಿ ಪುರಸಭೆಗೆ ಪ್ರಸ್ತಾವನೆ ಇಟ್ಟಿದ್ದೇವೆ. ಆದರೆ ಇದುವರೆಗೂ ಪೈಪ್‌ಲೈನ್ ಜೋಡಣೆಯಾಗಿಲ್ಲ. ಈ ಭಾಗದ ಎಲ್ಲಾ ಮನೆಗಳ ಜನರಿಗೂ ಕೆಂಪು ನೀರೇ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಮಳೆಗಾಲದಲ್ಲಂತೂ ಈ ಸಮಸ್ಯೆ ಉಲ½ಣಗೊಳ್ಳುತ್ತದೆ. ಪುರಸಭೆ ಶೀಘ್ರ ಸ್ಪಂಧಿಸಬೇಕಿದೆ.
-ಸದಾಶಿವ ಸಾಲ್ಯಾನ್ ವೀರಮಾರುತಿ ಕಾಲನಿ, ಮೂಳೂರು ಅನುಷ್ಟಾನ ವಿಳಂಭವಾಗುತ್ತಿದೆ
ತೊಟ್ಟಂ ವಾರ್ಡ್‌ನ್ನು ಕಾಡುತ್ತಿರುವ ಕೆಂಪು ನೀರಿನ ಸಮಸ್ಯೆಯ ಬಗ್ಗೆ ಪ್ರತೀ ಸಾಮಾನ್ಯ ಸಭೆಯಲ್ಲೂ ವಿಷಯ ಪ್ರಸ್ತಾಪಿಸುತ್ತಾ ಬಂದಿದ್ದೇನೆ. ಪುರಸಭೆ ಕೂಡಾ ಅದಕ್ಕೆ ಪೂರಕವಾಗಿ ಸ್ಪಂಧಿಸುವ ಪ್ರಯತ್ನ ಮಾಡುತ್ತಿದೆ.
ಮೂಳೂರು ಫಿಶರೀಸ್ ಶಾಲೆಯ ಬಳಿಯ ಟ್ಯಾಂಕ್‌ನಿಂದ ನೀರು ಪೂರೈಸಲು ಯೋಜನೆ ರೂಪಿಸಲಾಗಿದ್ದು, ಪೈಪ್‌ಲೈನ್‌ಗಾಗಿ ಪುರಸಭೆ 4.90 ಲಕ್ಷ ರೂ.
ಅನುದಾನವನ್ನು ಮೀಸಲಿಟ್ಟಿದೆ. ಆದರೆ ಜಾಗದ ಕೊರತೆಯಿಂದ ಯೋಜನೆ ಅನುಷ್ಟಾನಕ್ಕೆ ವಿಳಂಭವಾಗುತ್ತಿದೆ. ಸ್ಥಳೀಯರೊಂದಿಗೆ
ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.
ಶಾಂಭವಿ ಕುಲಾಲ್ ಸದಸ್ಯರು, ಕಾಪು ಪುರಸಭೆ ವಾರ್ಡ್‌ನವರ ಬೇಡಿಕೆಯೇನು ?
– ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವುದು
– ಅನಿಲ ಮಿಶ್ರಿತ ಕೆಂಪು ನೀರಿನ ಮೂಲ ಹುಡುಕುವುದು
– ಟ್ಯಾಂಕರ್ ಮೂಲಕ ನೀರು ಪೂರೈಕೆ
– ಪೈಪ್‌ಲೈನ್ ಜೋಡಣೆಗೆ ಅವಶ್ಯಕ ಕ್ರಮ ತೆಗೆದುಕೊಳ್ಳುವುದು
– ಮನೆಮನೆಗೆ ಪೈಪ್‌ಲೈನ್ ಜೋಡಣೆ – ರಾಕೇಶ್ ಕುಂಜೂರು