Advertisement

ನಿಖೀಲ್‌ ಕುಮಾರ್‌ ರೈಡರ್‌ಗೆ ಎಂಟ್ರಿಯಾದ “ಕೆಜಿಎಫ್’ಗರುಡ

09:48 AM Feb 20, 2021 | Team Udayavani |

ನಿಖೀಲ್‌ ಕುಮಾರ್‌ ಅಭಿನಯದ ಮುಂಬರುವ ಚಿತ್ರ “ರೈಡರ್‌’ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೀಗ ಚಿತ್ರತಂಡದ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ.

Advertisement

ಅದೇನೆಂದರೆ, “ರೈಡರ್‌’ ಚಿತ್ರದಲ್ಲಿ ನಿಖೀಲ್‌ ಕುಮಾರ್‌ ಎದುರು ಅಬ್ಬರಿಸಲು “ಕೆಜಿಎಫ್’ ಖ್ಯಾತಿಯ ಗರುಡ ಉರೂಫ್ ರಾಮಚಂದ್ರರಾಜು (ರಾಮ್‌) ರೆಡಿಯಾಗಿದ್ದಾರೆ.

“ಲಹರಿ ಮ್ಯೂಸಿಕ್‌’ ಸಂಸ್ಥೆ “ರೈಡರ್‌’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಇತ್ತೀಚೆಗೆ “ರೈಡರ್‌’ ಚಿತ್ರದಲ್ಲಿ ಗರುಡ ರಾಮ್‌ ಅವರ ಲುಕ್‌ ಅನ್ನು ಚಿತ್ರರಂಗ ರಿವೀಲ್‌ ಮಾಡಿದೆ. “ರೈಡರ್‌’ ಚಿತ್ರಕ್ಕೆ ತೆಲುಗು ನಿರ್ದೇಶಕ ವಿಜಯ್‌ಕುಮಾರ್‌ ಕೊಂಡ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದು, ಈಗಾಗಲೇ ಸದ್ದಿಲ್ಲದೆ ಚಿತ್ರತಂಡ ಅರ್ಧದಷ್ಟು ಚಿತ್ರೀಕರಣವನ್ನುಪೂರ್ಣಗೊಳಿಸಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next