Advertisement

ಚಿತ್ರ ವಿಮರ್ಶೆ: ಫ್ಯಾಮಿಲಿ ಡ್ರಾಮಾದಲ್ಲಿ ‘ಗರುಡ’ ಪುರಾಣ

02:28 PM May 21, 2022 | Team Udayavani |

ಆತ ಮೇಲ್ನೋಟಕ್ಕೆ ಸೈಲೆಂಟ್‌ ಹುಡುಗ. ಗೋವಾದಲ್ಲಿ ತಾನಾಯಿತು, ತನ್ನ ಹೋಟೆಲ್‌ ಆಯಿತು ಎಂದುಕೊಂಡಿದ್ದ ಆತನಿಗೊಂದು ಫ್ಲ್ಯಾಶ್‌ಬ್ಯಾಕ್‌ ಇದೆ. ಅದ ಕ್ಕೆ ಕಾರಣ ಸೈಲೆಂಟ್‌ ಹುಡುಗನ ಹಿಂದಿರುವ ವೈಲೆಂಟ್‌ ಸ್ಟೋರಿ. ಅಷ್ಟಕ್ಕೂ ಆ ವೈಲೆಂಟ್‌ ಸ್ಟೋರಿ ಏನು ಎಂಬ ಕುತೂಹಲ ನಿಮಗಿದ್ದರೆ ನೀವು “ಗರುಡ’ ನೋಡಬಹುದು.

Advertisement

“ಗರುಡ’ ಒಂದು ಔಟ್‌ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ. ಫ್ಯಾಮಿಲಿ ಹಾಗೂ ಮಾಸ್‌ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಕಾರಣ, ಇಲ್ಲಿ ಕಥೆಗಿಂತ ಸನ್ನಿವೇಶಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಹುತೇಕ ಸಿನಿಮಾಗಳಂತೆ ಇಲ್ಲೂ ಕಥೆ ಟ್ರ್ಯಾಕ್‌ಗೆ ಬರೋದು ದ್ವಿತೀಯಾರ್ಧದಲ್ಲಿ. ಅಲ್ಲಿವರೆಗೆ ಪ್ರೇಕ್ಷಕರಿಗೆ ಗೋವಾ ದರ್ಶನ ಮಾಡಿಸಿದ್ದಾರೆ. ಇಲ್ಲಿ ನಿಮಗೆ ಗ್ಲಾಮರ್‌, ಫ‌ನ್‌, ಕಾಮಿಡಿ… ಎಲ್ಲದರ ದರ್ಶನವಾಗುತ್ತದೆ.

ಇಂಟರ್‌ನ್ಯಾಶನಲ್‌ ಮಾಫಿಯಾವೊಂದರ ಸುತ್ತ ಸಾಗುವ ಕಥೆಯಲ್ಲಿ ಒಂದು ಸುಂದರ ಕುಟುಂಬದ ಕತೆಯನ್ನು ಸೇರಿಸಲಾಗಿದೆ. ಒಂದಷ್ಟು ದೃಶ್ಯಗಳು ಪ್ರೇಕ್ಷಕರ ಊಹೆಗೆ ತಕ್ಕಂತೆ ಸಾಗಿದರೂ, ಅಲ್ಲಲ್ಲಿ ಬರುವ ಟ್ವಿಸ್ಟ್‌-ಟರ್ನ್ಗಳು ಸಿನಿಮಾವನ್ನು ನೋಡಿಸಿಕೊಂಡು ಹೋಗುವಂತೆ ಮಾಡಿವೆ. ಅದರಲ್ಲೂ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಟ್ವಿಸ್ಟ್‌ ಹಾಗೂ ಹೈವೋಲ್ಟೇಜ್‌ ಫೈಟ್ಸ್‌ ಚಿತ್ರದ ಪ್ಲಸ್‌ ಪಾಯಿಂಟ್‌. ಇನ್ನು, ಚಿತ್ರದಲ್ಲಿ ಬರುವ ಒಂದಷ್ಟು ಕಾಮಿಡಿ ಟ್ರ್ಯಾಕ್‌ಗಳನ್ನು ಟ್ರಿಮ್‌ ಮಾಡಿದ್ದರೆ ಚಿತ್ರದ ವೇಗ ಹೆಚ್ಚುತ್ತಿತ್ತು.

ಇದನ್ನೂ ಓದಿ:ಕಟ್ಟಿಂಗ್ ಶಾಪ್ ಚಿತ್ರವಿಮರ್ಶೆ: ಅಡ್ಡ ಕತ್ತರಿಯಲ್ಲಿ ‘ಸಂಕಲನ’ಕಾರನ ಜೀವನ ಚಿತ್ರಣ

ನಾಯಕ ಸಿದ್ಧಾರ್ಥ್ ಮಹೇಶ್‌ ಆ್ಯಕ್ಷನ್‌ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ಅದರಾಚೆ ಸೆಂಟಿಮೆಂಟ್‌ ಹಾಗೂ ಇತರ ದೃಶ್ಯಗಳಲ್ಲಿ ಸಿದ್ಧಾರ್ಥ್ ಇನ್ನಷ್ಟು ಪಳಗಬೇಕು. ನಾಯಕಿಯರಾದ ಐಂದ್ರಿತಾ ರೇ ಹಾಗೂ ಆಶಿಕಾ ರಂಗನಾಥ್‌ ಇದ್ದಷ್ಟು ಹೊತ್ತು ಚೆಂದ. ಉಳಿದಂತೆ ಪೊಲೀಸ್‌ ಆಫಿಸರ್‌ ಆಗಿ ಶ್ರೀನಗರ ಕಿಟ್ಟಿ, ಡಾನ್‌ ಆಗಿ ಆದಿ ಲೋಕೇಶ್‌, ರಂಗಾಯಣ ರಘು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

Advertisement

ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next