Advertisement

ಕಲರ್‌ ಫುಲ್‌ ಇವೆಂಟ್‌ನಲ್ಲಿ ‘ಗರುಡ’ ಪಯಣ; ಈ ವಾರ ತೆರೆಗೆ

02:13 PM May 19, 2022 | Team Udayavani |

ಸಿದ್ಧಾರ್ಥ್ ಮಹೇಶ್‌ ನಾಯಕನಾಗಿ ಅಭಿನಯಿಸಿರುವ ಗರುಡ ಚಿತ್ರ ಮೇ 20ರಂದು ರಾಜ್ಯಾದ್ಯಂತ ತೆರೆಗೆ ಕಾಣಲು ಸಜ್ಜಾಗಿದೆ. ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದ್ದು , ಈ ಸಮಯದಲ್ಲಿ ಚಿತ್ರತಂಡ ಅದ್ಧೂರಿಯಾಗಿ ಚಿತ್ರದ ಪ್ರಿ ರಿಲೀಸ್‌ ಇವೆಂಟ್‌ ಕಾರ್ಯಕ್ರಮ ನಡೆಸಿದೆ.

Advertisement

ಪ್ರಿ ರಿಲೀಸ್‌ ಇವೆಂಟ್‌ನಲ್ಲಿ ಮಾತನಾಡಿದ ನಿರ್ದೇಶಕ ಧನಕುಮಾರ ಕೆ, “ಇಂದು ನಾನು ಇಲ್ಲಿಯವರೆಗೆ ಬರಲು 24 ವರ್ಷಗಳೇ ಆದವು. ಅದೆಷ್ಟೋ ನಿರ್ದೇಶಕರು, ನಿರ್ಮಾಪಕರು, ಕಲಾವಿದರ ಬಳಿ ಸಾಕಷ್ಟು ಕಲಿತು ಅವರ ಸಹಕಾರದಿಂದ ಇಷ್ಟರಮಟ್ಟಿಗೆ ಬಂದು ನಿಂತಿದ್ದೇನೆ. ಇದೇ 20 ರಂದು ನಮ್ಮ ಶ್ರಮ, ಕನಸು ಸಂತೋಷ ಎಲ್ಲವೂ ಅದ ಗರುಡ ತೆರೆಕಾಣಲಿದೆ’ ಎಂದರು.

ಚಿತ್ರದ ಸಂಗೀತ ನಿರ್ದೇಶಕ ರಘು ದೀಕ್ಷಿತ್‌, “ಈ ಮೊದಲು ಜಾನಪದ ಹಾಗೂ ಪ್ರೀತಿ-ಪ್ರೇಮದ ಹಾಡುಗಳನ್ನು ಮಾಡಿದ್ದ ನನಗೆ, ಒಂದು ಕಮರ್ಷಿಯಲ್‌ ಚಿತ್ರಕ್ಕೆ ಸಂಗೀತ ನೀಡಲು ಅವಕಾಶ ಸಿಕ್ಕಿದ್ದು ಇದೆ ಮೊದಲು. ಈ ಚಿತ್ರದ ಸಂಗೀತ ಸಂಯೋಜನೆ ಸಮಯದಲ್ಲಿ ಸಾಕಷ್ಟು ವಿಷಯಗಳನ್ನು ಸಹ ಕಲಿತೆ. ವಿಶೇಷ ಅಂದರೆ ಸಂಗೀತದ ಜೊತೆಗೆ ಚಿತ್ರದಲ್ಲಿ ಭದ್ರತೆ ಸಲಹೆಗಾರನಾಗಿ ಸಣ್ಣ ಪಾತ್ರವನ್ನು ಮಾಡಿದ್ದೇನೆ’ ಎಂದರು ಕಾರ್ಯಕ್ರಮದಲ್ಲಿ ವಿನೋದ್‌ ಪ್ರಭಾಕರ್‌ ಅಥಿತಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು.

ಇದನ್ನೂ ಓದಿ:ಶಿವನಿಗೆ ದೇಗುಲ ರಚನೆಯ ಅಗತ್ಯವಿಲ್ಲ, ಅವನು ಪ್ರತಿ ಕಣದಲ್ಲೂ ನೆಲೆಸಿದ್ದಾನೆ: ಕಂಗನಾ ರಣಾವತ್

ಚಿತ್ರದ ನಾಯಕರು ಸಿದ್ಧಾರ್ಥ ಮಹೇಶ್‌, ಶ್ರೀನಗರ್‌ ಕಿಟ್ಟಿ, ನಾಯಕಿಯರಾದ ಆಶಿಕಾ ರಂಗನಾಥ್‌, ಐಂದ್ರಿತಾ ರೇ, ಪ್ರಿ ರಿಲೀಸ್‌ ಇವೆಂಟ್‌ಗೆ ಮೆರಗು ಹೆಚ್ಚಿಸಿದರು.

Advertisement

ಚಿತ್ರದಲ್ಲಿ ಸಿದ್ಧಾರ್ಥ್ ಮಹೇಶ್‌ ಜೊತೆ ಶ್ರೀನಗರ ಕಿಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಾಮ್ನಾ ಜೇಠ್ಮಲಾನಿ, ಆಶಿಕಾ ರಂಗನಾಥ್‌, ಐಂದ್ರಿತಾ ರೇ, ರಮೇಶ್‌ ಭಟ್‌, ರಂಗಾಯಣ ರಘು, ಆದಿ ಲೊಕೇಶ್‌, ರಾಜೇಶ್‌ ನಟರಂಗ, ರವಿ ಶಂಕರ್‌ ಗೌಡ, ಗಿರಿ, ಸುಜಯ್‌ ಶಾಸ್ತ್ರಿ, ಸುನೇತ್ರಾ ಪಂಡಿತ್‌, ಮೈಕೋ ನಾಗರಾಜ್‌, ಜಹಾಂಗೀರ್‌, ಮುಂತಾದ ಕಲಾವಿದರು ತಾರಾ ಬಳಗದಲ್ಲಿದ್ದಾರೆ.

“ಆರೆಂಜ್‌ ಪಿಕ್ಸೆಲ್‌ ಫಿಲ್ಮಂ ಫ್ಯಾಕ್ಟರಿ’ ಅಡಿಯಲ್ಲಿ ಬಿ ಕೆ ರಾಜ ರೆಡ್ಡಿ, ಕಿಶೋರ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next