Advertisement

‘ನಮ್ಮದು ಪ್ರೀತಿಯ ರಾಜಕಾರಣ’

04:45 PM May 30, 2018 | |

ವೇಣೂರು : ಸಮಾಜಸೇವೆಗೆ ಬೇರೆ ಬೇರೆ ಕ್ಷೇತ್ರಗಳಿರಬಹುದು. ಆದರೆ ರಾಜಕೀಯ ಕ್ಷೇತ್ರದಲ್ಲೂ ಸಮಾಜಸೇವೆ ಮಾಡಬಹುದು ಎಂಬುವುದನ್ನು ಆರ್‌ ಎಸ್‌ಎಸ್‌ ಕಲಿಸಿಕೊಟ್ಟಿದೆ. ಆ ಮೂಲಕ ಬೆಳ್ತಂಗಡಿ ತಾ|ನ 81 ಗ್ರಾಮಗಳ ಜನತೆ ಪ್ರೀತಿ, ವಾತ್ಸಲ್ಯದ ಜತೆಗೆ ರಾಜಕೀಯದ ಮೂಲಕ ಸಮಾಜಸೇವೆಗೆ ಆಶೀರ್ವಾದ ನೀಡಿದ್ದಾರೆ. ನಮ್ಮದು ಪ್ರೀತಿಯ ರಾಜಕಾರಣ ಆಗಿದೆ ಎಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್‌ ಪೂಂಜ ಹೇಳಿದರು.

Advertisement

ಶಾಸಕರ ತವರೂರಾದ ಗರ್ಡಾಡಿ ಬಿಜೆಪಿ ಗ್ರಾಮ ಸಮಿತಿ ಆಶ್ರಯದಲ್ಲಿ ನಂದಿಬೆಟ್ಟದ ಶ್ರೀ ನಂದಿಕೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ನೂತನ ಶಾಸಕರ ಅಭಿನಂದನ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ಬೆಳ್ತಂಗಡಿ ಬಿಜೆಪಿ ಮಂಡಲ ಪ್ರ. ಕಾರ್ಯದರ್ಶಿ ಸೀತಾರಾಮ ಬೆಳಾಲು ಮಾತನಾಡಿ, 2019ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಾಗಿದೆ. ಈ ವಿಧಾನ ಸಭಾ ಚುನಾವಣೆಯ ಫಲಿತಾಂಶ ಅದಕ್ಕೆ ನಾಂದಿ ಆಗಿದೆ ಎಂದರು.

ಸದಾನಂದ ಪೂಜಾರಿ ಉಂಗಿಲಬೈಲು ಮಾತನಾಡಿ, ಸಂಘನಾತ್ಮಕ ಶಕ್ತಿ ಇರುವ ಹರೀಶ್‌ ಪೂಂಜ ಅವರು ಮುಂದಿನ 25 ವರ್ಷಗಳ ಅವ ಧಿಗೆ ಅವರೇ ಶಾಸಕ ರಾಗಿರುತ್ತಾರೆ. ಅವರಿಗೆ ಯಾವುದೇ ಕಪ್ಪುಚುಕ್ಕೆ ಬಾರದ ರೀತಿಯಲ್ಲಿ ಕಾರ್ಯಕರ್ತರು ವರ್ತಿಸಬೇಕು ಎಂದರು.

ಹಿರಿಯರಾದ ಈಶ್ವರ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಶಂಕರ ಶೆಟ್ಟಿ, ಬಿಜೆಪಿ ಶಕ್ತಿಕೇಂದ್ರದ ಸಂಚಾಲಕ ಸುಧಾಕರ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ರಾಜೇಶ್‌ ಆಚಾರ್ಯ, ಪ್ರಮುಖರಾದ ಶಂಕರ ಶೆಟ್ಟಿ ಪಾರ, ಸುನಂದ ವಿ. ಶೆಟ್ಟಿ, ಕೃಷ್ಣಪ್ಪ, ಅಂತೋನಿ ಫೆರ್ನಾಂಡಿಸ್‌, ಮೋಹನ ಗೌಡ, ಬಾಬು ಮತ್ತಿತರರಿದ್ದರು. ವಸಂತ ಬಿ. ಬಂಗೇರ ಸ್ವಾಗತಿಸಿದರು. ಹರೀಶ್‌ ಕೋಟ್ಯಾನ್‌ ವಂದಿಸಿದರು. ಸುಜಯ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement

ಆವಶ್ಯಕತೆ ಈಡೇರಿಸುವ ಕೆಲಸ
ಜನತೆಯ ಪ್ರೀತಿ, ವಿಶ್ವಾಸಕ್ಕೆ ರಾಜ್ಯದ 224 ಕ್ಷೇತ್ರದಲ್ಲಿ ಬೆಳ್ತಂಗಡಿ ಕ್ಷೇತ್ರ ಮಾದರಿ ಆಗಿದೆ. ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಆವಶ್ಯಕತೆಗಳನ್ನು ಈಡೇರಿಸುವ ಕೆಲಸ ಮಾಡುತ್ತೇನೆ.
 -ಹರೀಶ್‌ ಪೂಂಜ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next