Advertisement

ಅಮೆರಿಕದ ಭಾರತ ರಾಯಭಾರಿಯಾಗಿ ಗಾರ್ಸೆಟ್ಟಿ

12:26 AM Mar 10, 2023 | Team Udayavani |

ವಾಷಿಂಗ್ಟನ್‌: ಲಾಸ್‌ ಏಂಜಲೀಸ್‌ ಮಾಜಿ ಮೇಯರ್‌ ಎರಿಕ್‌ ಗಾರ್ಸೆಟ್ಟಿ ಅವರು ಅಮೆರಿಕದ ಭಾರತ ರಾಯಭಾರಿಯಾಗಿ ನಾಮನಿರ್ದೇಶನಗೊಳ್ಳುವ ನಿಟ್ಟಿನಲ್ಲಿ ಇದ್ದ ಪ್ರಮುಖ ತಡೆ ನಿವಾರಣೆಯಾಗಿದೆ.

Advertisement

ಅಮೆರಿಕ ಸಂಸತ್‌ನಲ್ಲಿ ಈ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಿಕ್‌ ಅವರಿಗೆ ಬಹುಮತ ಬಂದಿದೆ. ಭಾರತಕ್ಕೆ ಅಮೆರಿಕ ರಾಯಭಾರಿ ಸ್ಥಾನಕ್ಕೆ ಎರಿಕ್‌ ಅವರ ಹೆಸರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ 2021ರ ಜುಲೈರಂದೇ ಶಿಫಾರಸು ಮಾಡಿದ್ದರು. ಆದರೆ ಅಮೆರಿಕ ಸಂಸತ್‌ನಲ್ಲಿ ಇದರ ಪ್ರಕ್ರಿಯೆ ಬಾಕಿ ಉಳಿದಿತ್ತು. ಬುಧವಾರ ನಡೆದ ಮತದಾನದಲ್ಲಿ ಎರಿಕ್‌ ಪರವಾಗಿ 13 ಮತಗಳು ಬಂದಿದ್ದು, ಅವರ ವಿರುದ್ಧವಾಗಿ 8 ಮತಗಳು ಬಂದಿವೆ. ಹೀಗಾಗಿ ಶೀಘ್ರದಲ್ಲೇ ಎರಿಕ್‌ ಭಾರತದ ಅಮೆರಿಕ ರಾಯಭಾರಿ ಸ್ಥಾನವನ್ನು ಆಲಂಕರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next