Advertisement

ಮಹಾನಗರ ಪಾಲಿಕೆಗೆ ಮತ್ತೆ “ಕಸ’ವಿಸಿ

11:05 AM Jan 10, 2020 | Suhan S |

ಬೆಂಗಳೂರು: ನಗರದಲ್ಲಿ ಸೃಷ್ಟಿಯಾಗಿರುವ ಕಸದ ಸಮಸ್ಯೆ ಪರಿಹರಿಸಲು ಈಗ ಭರ್ತಿಯಾಗಿರುವ ಮಿಟ್ಟಗಾನಹಳ್ಳಿಯ ತಾತ್ಕಾಲಿಕ ಕ್ವಾರಿಯಲ್ಲಿ ಉಳಿದಿರುವ ಖಾಲಿ ಜಾಗದಲ್ಲಿ ಸುರಿಯಲಾಗುತ್ತಿದೆ. ಇಲ್ಲಿ ಎರಡರಿಂದ ಮೂರು ದಿನ ಕಸ ಹಾಕುವುದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡು ಗುರುವಾರ ಸಂಜೆಯಿಂದ ಕಸ ವಿಲೇವಾರಿ ಆರಂಭಿಸಲಾಗಿದೆ. ಗುರುವಾರ ನಗರದಲ್ಲಿ ಸಂಗ್ರಹಿಸಲಾಗಿರುವ ಕಸ ಮತ್ತೆ ರಾತ್ರಿ ಇಡೀ ವಿಲೇವಾರಿಗೆ ಸೂಚನೆ ನೀಡಲಾಗಿದೆ.  ಶುಕ್ರವಾರ ಬೆಳಗ್ಗೆ ವೇಳೆ ನಗರದಲ್ಲಿ ಗುರುವಾರ ಸಂಗ್ರಹವಾಗಿರುವ ಕಸ ವಿಲೇವಾರಿ ಆಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಮಿಟ್ಟಗಾನಹಳ್ಳಿಯ ತಾತ್ಕಾಲಿಕ ಕ್ವಾರಿ ಭರ್ತಿಯಾಗಿದ್ದರಿಂದ ಬುಧವಾರ ನಗರದಿಂದ ಕಸ ಸಾಗಿಸಿದ್ದ 350ಕ್ಕೂ ಹೆಚ್ಚು ಕಾಂಪ್ಯಾಕ್ಟರ್‌ ಗಳು ಕ್ವಾರಿ ಬಳಿ ಸಾಲುಗಟ್ಟಿ ನಿಂತುಕೊಂಡಿದ್ದವು. ಹೀಗಾಗಿ, ಗುರುವಾರ ಬೆಳಗ್ಗೆಯೇ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ರಂದೀಪ್‌ ಅವರ ನೇತೃತ್ವದ ತಂಡ ಕ್ವಾರಿಗಳ ಬಗ್ಗೆ ಪರಿಶೀಲಿಸಿತು. ಮಿಟ್ಟಗಾನಹಳ್ಳಿ ಬಳಿಕ 8 ಎಕರೆ ಪ್ರದೇಶದ ಕ್ವಾರಿಯಲ್ಲಿ ಕಸ ಸುರಿಯಲು ವೈಜ್ಞಾನಿಕ ನಿರ್ವಹಣೆ ಟೆಂಡರ್‌ ಪ್ರಕ್ರಿಯೆ ಪೂರ್ಣ ಗೊಳ್ಳುವವರೆಗೆ ನಗರ ಕಸ ಹಾಕುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ಗುರುವಾರ ಮಿಟ್ಟ ಗಾನಹಳ್ಳಿಯ ಬಳಿಯೇ 20-30 ದಿನ ಕಸ ವಿಲೇವಾರಿಗೆ ಒಂದು ಎಕರೆ ಕ್ವಾರಿ ಗುರುತಿಸಿದ್ದಾರೆ. ಎರಡು ದಿನದಲ್ಲಿ ಕಸ ವೈಜ್ಞಾನಿಕ ಭರ್ತಿ ಬೇಕಾದ ಸಿದ್ಧತೆ ಮಾಡಿಕೊಂಡು ನಂತರ ಅಲ್ಲಿಗೆ ಕಸ ಹಾಕುವುದಕ್ಕೆ ತೀರ್ಮಾನಿಸಿದ್ದಾರೆ. ಅಲ್ಲಿಯ ವರೆಗೆ ಸದ್ಯ ಭರ್ತಿಯಾಗಿರುವ ಕ್ವಾರಿಯಲ್ಲಿಯೇ ಕಸ ಹಾಕುವುದಕ್ಕೆ ನಿರ್ಧರಿಸಿದ್ದಾರೆ.

ಬಾಗಲೂರು ಮತ್ತು ಬೆಳ್ಳಳ್ಳಿ ಕ್ವಾರಿ ಭರ್ತಿ ಯಾಗಿದ್ದರಿಂದ ಮಿಟ್ಟಗಾನಹಳ್ಳಿ ಬಳಿ ತಾತ್ಕಾಲಿಕವಾಗಿ ಕಸ ಸುರಿಯುವುದಕ್ಕೆ ಬಿಬಿಎಂಪಿ ಖಾಸಗಿ ಜಾಗ ಪಡೆದುಕೊಂಡಿತು. ಆದರೆ, ಆ ಕ್ವಾರಿಯೂ ಇದೀಗ ಅವಧಿಗೂ ಮುನ್ನವೇ ಭರ್ತಿಯಾಗಿದೆ. ಹೀಗಾಗಿ ನಗರದಿಂದ ಬುಧವಾರ ಕಸ ತುಂಬಿಕೊಂಡು ಹೋದ ಲಾರಿಗಳು ರಸ್ತೆಯಲ್ಲಿ ನಿಲ್ಲುವಂತಾಗಿತ್ತು.  ಮಿಟ್ಟಗಾನಹಳ್ಳಿಯ ಸುಮಾರು ಎಂಟುಎಕರೆಯ ಕ್ವಾರಿ. ಕಳೆದ ಜೂನ್‌ನಲ್ಲಿ ಮಿಟ್ಟಗಾನ ಹಳ್ಳಿಯ ಕ್ವಾರಿಗೆ ಕಸ ಹಾಕುವುದಕ್ಕೆ ನಗರಾಭಿ ವೃದ್ದಿ ಇಲಾಖೆಯಿಂದ ಬಿಬಿಎಂಪಿ ಅನುಮತಿ ಪಡೆದಿತ್ತು. ಆದರೆ, ಮಿಟ್ಟಗಾನಹಳ್ಳಿ ಕಸ ಸುರಿಯಲು ವೈಜ್ಞಾನಿಕ ನಿರ್ವಹಣೆಗೆ ಬಿಬಿಎಂಪಿ ಆಹ್ವಾನಿಸಿದ್ದ ಟೆಂಡರ್‌ ಅನ್ನು ಕಳೆದ ಡಿ.27 ರಂದು ನಗರಾಭಿವೃದ್ಧಿ ಇಲಾಖೆ ರದ್ದು ಪಡಿಸಿತ್ತು. ಇದೀಗ ನಗರದ ಕಸ ಎಲ್ಲಿ ಹಾಕಬೇಕು ಎಂಬುದು ತಿಳಿಯದೇ ಬಿಬಿಎಂಪಿ ಪರ್ಯಾಯ ಸ್ಥಳ ಹುಡುಕಲು ಪರದಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next