Advertisement

ಕೋವಿಡ್ ಲಸಿಕೆಯ 2ನೇ, ಮುನ್ನೆಚ್ಚರಿಕಾ ಡೋಸ್ ನಡುವಿನ ಅಂತರ 6 ತಿಂಗಳಿಗೆ ಇಳಿಕೆ 

11:43 PM Jul 06, 2022 | Team Udayavani |

ನವದೆಹಲಿ: ಕೊರೊನಾ ಲಸಿಕೆಯ 2ನೇ ಡೋಸ್‌ ಹಾಗೂ ಮುನ್ನೆಚ್ಚರಿಕಾ ಡೋಸ್‌ ನಡುವಿನ ಅಂತರವನ್ನು 9 ತಿಂಗಳು ಗಳಿಂದ 6 ತಿಂಗಳುಗಳಿಗೆ ಇಳಿಸಲಾಗಿದೆ.

Advertisement

ಈ ಕುರಿತಾಗಿ ಕೇಂದ್ರ ಆರೋಗ್ಯ ಸಚಿವಾ ಲಯ ಎಲ್ಲ ರಾಜ್ಯಗಳಿಗೆ ಬುಧವಾರ ಪತ್ರ ಬರೆದಿದೆ. ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಶಿಫಾರಸಿನ ಆಧಾರದಲ್ಲಿ ಡೋಸ್‌ ನಡುವಿನ ಅಂತರ ಇಳಿಸಲಾಗಿದೆ.

18-59 ವರ್ಷದ ವಯಸ್ಸಿನವ‌ರು 2ನೇ ಡೋಸ್‌ ಲಸಿಕೆ ಪಡೆದ 6 ತಿಂಗಳು ಬಳಿಕ ಖಾಸಗಿ ಲಸಿಕಾ ಕೇಂದ್ರ ದಲ್ಲಿ ಲಸಿಕೆ ಪಡೆಯಬಹುದು. 60 ವರ್ಷ ಮೇಲ್ಪಟ್ಟವರು, ವೈದ್ಯಕೀಯ ಸಿಬ್ಬಂದಿ, ಮುಖ್ಯಭೂಮಿಕೆ ಕೆಲಸಗಾರರು ಸರ್ಕಾರಿ ಲಸಿಕಾ ಕೇಂದ್ರದಲ್ಲಿ ಮುನ್ನೆಚ್ಚರಿಕಾ ಡೋಸ್‌ ಅನ್ನು ಪಡೆಯಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next