ಮುಂಬಯಿ: ಗಾಣಿಗ ಸಮಾಜ ಮುಂಬಯಿ ಇದರ ಇಪ್ಪತ್ತನೇ ವಾರ್ಷಿಕೋತ್ಸÕವ ಸಮಾರೋಪ ಸಮಾರಂಭವು ಜೂ. 11 ರಂದು ಸಾಂತಾಕ್ರೂಜ್ ಪೂರ್ವ ಬಿಲ್ಲವರ ಭವನದ ನಾರಾಯಣ ಗುರು ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಸಂಸ್ಥೆಯ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೈಗಾರಿಕೋದ್ಯಮಿ ಸಂದೇಶ್ ಕುಮಾರ್ ಪುಣೆ ಅವರಿಗೆ “ಗಾಣಿಗ ಉದ್ಯೋಗ ರತ್ನ’ ಬಿರುದು ಪ್ರದಾನಿಸಿ, ಮೈಸೂರು ಪೇಟ ತೊಡಿಸಿ, ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಸೋಮ ಕ್ಷತ್ರಿಯ ಗಾಣಿಗ ಸಮಾಜ ಬಾಕೂìರು ಇದರ ಅಧ್ಯಕ್ಷ ಕುತ್ಪಾಡಿ ಗೋಪಾಲ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾ ಸೋಮ ಕ್ಷತ್ರಿಯ ವೈಷ್ಣವ ಸಮಾಜ ಬೆಂಗಳೂರು ಮಾಜಿ ಕಾರ್ಯದರ್ಶಿ ಪ್ರತಾಪ್‌ಚಂದ್ರ ಕುತ್ಪಾಡಿ, ಸಂಪರ್ಕ ಸುಧಾ ಮಾಸಿಕದ ಮಾಜಿ ಕಾರ್ಯದರ್ಶಿ ಉದಯ ಕುಮಾರ್, ವಿದ್ಯಾದಾಯಿನಿ ಸಭಾ ಇದರ ಜೆ. ಎಂ. ಕೋಟ್ಯಾನ್, ಉಪಾಧ್ಯಕ್ಷ ಭಾಸ್ಕರ ಎಂ. ಗಾಣಿಗ, ಕೋಶಾಧಿಕಾರಿ ಜಯಂತ್ ಪಿ. ಗಾಣಿಗ, ಮಹಿಳಾಧ್ಯಕ್ಷೆ ತಾರಾ ಎನ್. ಭಟ್ಕಳ್, ಯುವ ವಿಭಾಗಧ್ಯಕ್ಷ ಗಣೇಶ್ ಆರ್. ಕುತ್ಪಾಡಿ ಉಪಸ್ಥಿತರಿದ್ದರು.
ವೀಣಾ ದಿನೇಶ್ ಗಾಣಿಗ, ನ್ಯಾಯವಾದಿ ಯು. ಬಾಲಚಂದ್ರ ಕಟಪಾಡಿ, ಜೊತೆ ಕಾರ್ಯದರ್ಶಿ ಬಿ. ಜಗದೀಶ್ ಗಾಣಿಗ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗೋಪಾಲಕೃಷ್ಣ ಗೋವಿಂದ ಗಾಣಿಗ, ರಮೇಶ್ ಎನ್. ಗಾಣಿಗ, ಸದಾನಂದ ಕಲ್ಯಾಣು³ರ, ನಾಗರತ್ನ ಜಗನ್ನಾಥ್, ಆರತಿ ದಿನೇಶ್ ಗಾಣಿಗ, ಮಾಜಿ ಕಾರ್ಯದರ್ಶಿ ಬಿ. ವಿ. ರಾವ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್. ಗಾಣಿಗ ಅವರು ಸಹಕರಿಸಿದರು. ಸದಸ್ಯ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್