ಹೊಸದಲ್ಲಿ: ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ನಾಯಕ ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಸಿಸಿಐ ವಿರುದ್ಧ ಆಕ್ರಮಣಕಾರಿ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ತನ್ನನ್ನು ಏಕದಿನ ತಂಡದ ನಾಯಕತ್ವದಿಂದ ಕೈಬಿಡುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಂಡಳಿಯವರ್ಯಾರೂ ಸಂಪರ್ಕಿಸಿಯೇ ಇರಲಿಲ್ಲ ಎಂದಿದ್ದರು.
ಇದರಿಂದ ಬಿಸಿಸಿಐ ಮತ್ತು ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಇರುಸು ಮುರುಸಾಗಿತ್ತು. ಇಲ್ಲೇನೋ ದೊಡ್ಡ ರಾಜಕೀಯ ನಡೆಯುತ್ತಿದೆ ಎಂದು ಕ್ರಿಕೆಟ್ ಅಭಿಮಾನಿಗಳಿಗೆ ಅರ್ಥವಾಗಿತ್ತು.
ಮೂಲವೊಂದರ ಪ್ರಕಾರ, ಆಗಲೇ ವಿರಾಟ್ ಕೊಹ್ಲಿ ಅವರಿಗೆ ಸೌರವ್ ಗಂಗೂಲಿ ಶೋಕಾಸ್ ನೋಟಿಸ್ ಜಾರಿಗೊಳಿಸಲು ನಿರ್ಧರಿಸಿದ್ದಾಗಿ ತಿಳಿದು ಬಂದಿದೆ. ಆದರೆ ಮಂಡಳಿ ಕಾರ್ಯದರ್ಶಿ ಜಯ್ ಶಾ ಇದನ್ನು ತಡೆದದ್ದಾಗಿಯೂ ವರದಿಯಾಗಿದೆ.
ಇದನ್ನೂ ಓದಿ:ಪ್ರೊ ಕಬಡ್ಡಿ: ದಬಾಂಗ್ ಡೆಲ್ಲಿ ವಿರುದ್ಧ ಹರ್ಯಾಣಗೆ ಗೆಲುವು
ದಕ್ಷಿಣ ಆಫ್ರಿಕಾದಂಥ ಮಹತ್ವದ ಹಾಗೂ ಸವಾಲಿನ ಸರಣಿ ಮುಂದಿರುವಾಗ ಇಂಥದೊಂದು ಅವಸರದ ಹೆಜ್ಜೆ ಇಡುವುದು ಬೇಡ, ಇದರಿಂದ ತಂಡದ ಸಾಧನೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಶಾ ಸೂಚಿಸಿದರೆಂದು ತಡವಾಗಿ ತಿಳಿದು ಬಂದಿದೆ.