Advertisement

ಗ್ಯಾಂಗ್‌ಸ್ಟರ್‌ ಟಿಲ್ಲು ಹತ್ಯೆ: 7 ಮಂದಿ ಪೊಲೀಸರ ಅಮಾನತು

12:55 AM May 09, 2023 | Team Udayavani |

ಹೊಸದಿಲ್ಲಿ: ಇಲ್ಲಿನ ತಿಹಾರ್‌ ಜೈಲಿನಲ್ಲಿ ಗ್ಯಾಂಗ್‌ಸ್ಟರ್‌ ಟಿಲ್ಲು ತಾಜ್‌ಪುರಿಯಾನನ್ನು ಸಹಕೈದಿಗಳು ಇರಿದು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ವಿಶೇಷ ಪೊಲೀಸ್‌ ಪಡೆಯ ಏಳು ಸಿಬಂದಿಯನ್ನು ಅಮಾನತುಗೊಳಿಸಲಾಗಿದೆ.

Advertisement

ಘಟನೆ ನಡೆದ ವೇಳೆ ಈ ಏಳು ಮಂದಿ ಪೊಲೀಸ್‌ ಸಿಬಂದಿ ಜೈಲಿನ ಭದ್ರತೆಯ ಕರ್ತ ವ್ಯದಲ್ಲಿದ್ದರು. ಇವರ ಕಣ್ಣೆದುರೇ ಟಿಲ್ಲು ತಾಜ್‌ಪುರಿಯಾನ ಮೇಲೆ ಸಹಕೈದಿಗಳು ಹಲ್ಲೆ ನಡೆಸುತ್ತಿದ್ದರೂ ಇವರು ಮೂಕಪ್ರೇಕ್ಷಕರಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇವರನ್ನು ಅಮಾನತುಗೊಳಿಸಿ ತಮಿಳುನಾಡಿಗೆ ಕಳುಹಿಸಿಕೊಡಲಾಗಿದೆ.

ಹೈಕೋರ್ಟ್‌ ಆಕ್ರೋಶ: ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳ ವಿರುದ್ಧ ದಿಲ್ಲಿ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜೈಲಿನ ಆವರಣದಲ್ಲಿ ನಾಲ್ಕು ಚಾಕುಗಳು ಪತ್ತೆಯಾಗಿರುವ ಸಂಬಂಧ ಕಳವಳ ವ್ಯಕ್ತಪಡಿಸಿರುವ ನ್ಯಾಯಾಧೀಶರು ಜೈಲಿನ ಅವ್ಯವಸ್ಥೆಗಳ ಬಗೆಗೆ ಅಚ್ಚರಿ ವ್ಯಕ್ತಪಡಿಸಿದೆ. ಬೆಟ್ಟು ಮಾಡಿದೆ. ಟಿಲ್ಲು ತಾಜ್‌ಪುರಿಯಾನ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಮನವಿ ಮಾಡಿ ಆತನ ತಂದೆ ಮತ್ತು ಸಹೋದರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ ನ ಪೀಠ ದಿಲ್ಲಿಯ ಕಾರಾಗೃಹ ಇಲಾಖೆಯ ಡಿಜಿ, ದಿಲ್ಲಿ ಸರಕಾರ ಮತ್ತು ದಿಲ್ಲಿ ಪೊಲೀಸ್‌ ಆಯುಕ್ತರಿಗೆ ನೋಟಿಸ್‌ನ್ನು ಜಾರಿಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next