Advertisement

Uttar Pradesh;1991ರ ಅವಧೇಶ್‌ ರಾಯ್‌ ಹತ್ಯೆ ಪ್ರಕರಣ: ಪಾತಕಿ ಅನ್ಸಾರಿಗೆ ಜೀವಾವಧಿ

12:47 AM Jun 06, 2023 | Team Udayavani |

ವಾರಣಾಸಿ: 1991ರ ಅವಧೇಶ್‌ ರಾಯ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪಾತಕಿ, ಮಾಜಿ ಶಾಸಕ ಮುಖ್ತಾರ್‌ ಅನ್ಸಾರಿ ತಪ್ಪಿತಸ್ಥ ಎಂದು ವಾರಾಣಸಿಯ ಜನಪ್ರತಿಧಿಗಳ ನ್ಯಾಯಾಲಯ ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ ಆತನಿಗೆ 1 ಲಕ್ಷ ರೂ. ದಂಡ ವಿಧಿಸಿದೆ.

Advertisement

ಅನ್ಸಾರಿ ವಿರುದ್ಧ ದಾಖಲಾಗಿರುವ 61 ಕ್ರಿಮಿನಲ್‌ ಪ್ರಕರಣಗಳ ಪೈಕಿ, ಇದುವರೆಗೆ ಆರು ಪ್ರಕರಣಗಳಲ್ಲಿ ಆತ ಶಿಕ್ಷೆಗೆ ಒಳಗಾಗಿದ್ದಾನೆ. ಉತ್ತರ ಪ್ರದೇಶದ ವಿವಿಧ ನ್ಯಾಯಾಲಯಗಳಲ್ಲಿ ಇತರ 20 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
ಅವಧೇಶ್‌ ರಾಯ್‌ ಅವರು ಕಾಂಗ್ರೆಸ್‌ ನಾಯಕ, ಮಾಜಿ ಶಾಸಕ ಅಜಯ್‌ ರಾಯ್‌ ಅವರ ಸಹೋದರರಾಗಿದ್ದಾರೆ. 1991ರ ಆ.3ರಂದು ಅವರನ್ನು ವಾರಾಣಸಿಯ ಅಜಯ್‌ ರಾಯ್‌ ಅವರ ಮನೆಯ ಎದುರು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ರಾಜಕೀಯ ದ್ವೇಷದಿಂದ ಈ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅನ್ಸಾರಿ, ಭೀಮ್‌ ಸಿಂಗ್‌, ಮಾಜಿ ಶಾಸಕ ಅಬ್ದುಲ್‌ ಕಲೀಂ ಮತ್ತು ಇತರ ಇಬ್ಬರ ವಿರುದ್ಧ ಎಫ್ಐಆರ್‌ ದಾಖಲಾಗಿತ್ತು.

ತೀರ್ಪನ್ನು ಸ್ವಾಗತಿಸಿರುವ ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ ಹಾಲಿ ಪ್ರಾದೇಶಿಕ ಅಧ್ಯಕ್ಷ ಅಜಯ್‌ ರಾಯ… “32 ವರ್ಷಗಳ ನಮ್ಮ ಕಾಯುವಿಕೆ ಕೊನೆಗೊಂಡಿದೆ. ನಾನು, ನನ್ನ ಪೋಷಕರು, ಅವಧೇಶ್‌ ಮಗಳು ಸಹಿತ ಕುಟುಂಬದ ಸದಸ್ಯರೆಲ್ಲ ನ್ಯಾಯಕ್ಕಾಗಿ ತಾಳ್ಮೆಯಿಂದ ಕಾದೆವು. ಹಲವು ಸರಕಾರಗಳು ಬಂದವು, ಹೋದವು. ಅನ್ಸಾರಿ ಬಲಿಷ್ಠವಾ ಗುತ್ತಲೇ ಹೋದ. ಅಂತಿಮವಾಗಿ ನ್ಯಾಯಾಲ ಯದಲ್ಲಿ ಅನ್ಸಾರಿ ತಪ್ಪಿತಸ್ಥನೆಂದು ಸಾಬೀತಾ ಗಿದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next