ಸ್ಯಾನ್ ಸಾಲ್ವಡಾರ್: 33 ಕೊಲೆಗಳು ! 9 ಕೊಲೆಯ ಸಂಚು ಹಾಗೂ ಹಲವಾರು ಕ್ರಿಮಿನಲ್ ಪ್ರಕರಣಗಳ ಅಪರಾಧಿಯೊಬ್ಬನಿಗೆ ಮಧ್ಯ ಅಮೆರಿಕದ ಎಲ್ ಸಾಲ್ವಡಾರ್ ರಾಷ್ಟ್ರದಲ್ಲಿ 1,310 ವರ್ಷಗಳ ಶಿಕ್ಷೆ ವಿಧಿಸಿರುವ ಘಟನೆ ವರದಿಯಾಗಿದೆ.
ವಿಲ್ಮರ್ ಸೆಗೋವಿಯಾ ಎನ್ನುವ ಕುಖ್ಯಾತ ಗ್ಯಾಂಗ್‌ಸ್ಟರ್‌ಗೆ ಈ ರೀತಿ ದೀರ್ಘಕಾಲದ ಶಿಕ್ಷೆ ವಿಧಿಸಲಾಗಿದೆ. ಈತನೊಂದಿಗೆ ಮಿಗುಯೆಲ್ ಏಂಜೆಲ್ ಪೋರ್ಟಿಲೋ ಎನ್ನುವ ಮತ್ತೊಬ್ಬ ಅಪರಾಧಿಗೂ 945 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ.
ದೇಶದಲ್ಲಿ ಗ್ಯಾಂಗ್‌ಸ್ಟರ್‌ಗಳ ಸೆದೆಬಡಿಯುವ ಉದ್ದೇಶದಿಂದ ಅಧ್ಯಕ್ಷ ನಯೀಬ್ ಬುಕೆಲೆ ಬೃಹತ್ ಅಭಿಯಾನ ಆರಂಭಿಸಿ, ಗ್ಯಾಂಗ್‌ಸ್ಟರ್‌ಗಳನ್ನು ಶಿಕ್ಷೆಗೆ ಗುರಿಪಡಿಸುತ್ತಿದ್ದು, ಅವರನ್ನು ಇತ್ತೀಚೆಗಷ್ಟೇ ನಿರ್ಮಿಸಲಾದ ಬೃಹತ್ ಜೈಲಿಗೆ ದೂಡಲಾಗುತ್ತಿದೆ.