ನವದೆಹಲಿ: ಕೆನಡಾ ಮೂಲದ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ಮೈಂಡ್ ಎಂದು ತಿಳಿದು ಬಂದಿದೆ.
ಈ ವರ್ಷದ ಆರಂಭದಲ್ಲಿ ಹತ್ಯೆಯನ್ನು ಕಾರ್ಯಗತಗೊಳಿಸಲು ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್ ಮತ್ತು ಜಗ್ಗು ಭಗವಾನ್‌ಪುರಿಯಾ ಮತ್ತು ಇತರರೊಂದಿಗೆ ಸಮನ್ವಯ ಸಾಧಿಸಿದ್ದ ಎಂದು ಪಂಜಾಬ್ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ತಿಳಿಸಲಾಗಿದೆ.
ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಮೇ 28 ರಂದು ಮೂಸೆವಾಲಾ ಅವರ ಭದ್ರತೆಯನ್ನು ಹಿಂಪಡೆಯುವ ಸುದ್ದಿಯನ್ನು ಶೂಟರ್‌ಗಳಿಗೆ ನೀಡಿದ್ದರು ಮತ್ತು ಚಾರ್ಜ್ ಶೀಟ್ ಪ್ರಕಾರ ಕೂಡಲೇ ಹತ್ಯೆ ಗೈಯುವಂತೆ ಸೂಚನೆ ನೀಡಿದ್ದ ಎಂದು ಚಾರ್ಜ್ ಶೀಟ್‌ನಲ್ಲಿ ತಿಳಿಸಲಾಗಿದೆ.
ಮೇ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆವಾಲಾ ಎಂದು ಜನಪ್ರಿಯರಾಗಿದ್ದ ಶುಭದೀಪ್ ಸಿಂಗ್ ಸಿಧು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ದೆಹಲಿ ಪೊಲೀಸರ ವಿಶೇಷ ಸೆಲ್ ಹತ್ಯೆಯಲ್ಲಿ ಭಾಗಿಯಾಗಿದ್ದ ಪ್ರಿಯವ್ರತ್ ಫೌಜಿ, ಕಾಶಿಶ್ ಮತ್ತು ಅಂಕಿತ್ ಸೆರ್ಸಾ ರನ್ನು ಬಂಧಿಸಿದ್ದು. ರೂಪಾ ಮತ್ತು ಮನ್‌ಪ್ರೀತ್‌ರನ್ನು ಪಂಜಾಬ್ ಪೊಲೀಸರು ಹತ್ಯೆಗೈದಿದ್ದು, ದೀಪಕ್ ಮುಂಡಿ ಇನ್ನೂ ತಲೆಮರೆಸಿಕೊಂಡಿದ್ದಾನೆ.