Advertisement
ಈ ಹಿಂದೆ ಡ್ರಗ್ಸ್ ಚಟುವಟಿಕೆಯಲ್ಲಿ ಭಾಗಿಯಾದವರು ಹಾಗೂ ಪ್ರಸ್ತುತ ಪೆಡ್ಲರ್‌ಗಳಾಗಿರುವವರ ಮಾಹಿತಿ ಸಂಗ್ರಹಕ್ಕೆ ಗುಪ್ತಚರ ಇಲಾಖೆ, ಸೆನ್ ಪೊಲೀಸ್, ಸ್ಥಳೀಯ ಪೊಲೀಸ್ ಠಾಣೆಗಳು ಹಾಗೂ ವಿಶೇಷ ತಂಡಕ್ಕೆ ಜವಾಬ್ದಾರಿ ನೀಡಲಾಗಿದೆ.
ಡ್ರಗ್ಸ್ ವ್ಯಸನಿಗಳಾಗಿರುವವರು ಅಥವಾ ಡ್ರಗ್ಸ್ ಆಮಿಷಕ್ಕೆ ಒಳಗಾಗಿರುವ 15ರಿಂದ 40 ವರ್ಷದವರನ್ನು ಗುರಿಯಾಗಿಟ್ಟುಕೊಂಡು ಮುಖ್ಯವಾಗಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟು ಅಭಿಯಾನ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಚಟುವಟಿಕೆ, ವರ್ತನೆ ಮೇಲೆ ನಿರಂತರ ನಿಗಾ ಇಟ್ಟು ಸಂದೇಹಗಳು ಡ್ರಗ್ಸ್ ಸೇವನೆ ಬಗ್ಗೆ ಸಂದೇಹಗಳುಂಟಾದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಪ್ರಾಂಶುಪಾಲರು, ಅಧ್ಯಾಪಕರಿಗೆ ಸೂಚಿಸಲಾಗಿದೆ. ಮಾಹಿತಿ ಆಧಾರದಲ್ಲಿ ಸಂಶಯಾಸ್ಪದ ನಡವಳಿಕೆಯ ಎಲ್ಲ ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್‌ಗೆ ಒಳಪಡಿಸಲಾಗುವುದು. 2 ವಾರದಲ್ಲಿ 11 ವಿದ್ಯಾರ್ಥಿಗಳು
ಡ್ರಗ್ಸ್ ಸೇವಿಸುತ್ತಿರುವ ಸಂಶಯ ವಿದ್ದವ ರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು ಕಳೆದ 2 ವಾರದಲ್ಲಿ 150ಕ್ಕೂ ಅಧಿಕ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. 11 ಮಂದಿ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ. ಇದು ಸರಳವಾದ ತಪಾಸಣೆ ಪ್ರಕ್ರಿಯೆಯಾಗಿದ್ದು 24 ಗಂಟೆಗಳಲ್ಲಿ ವರದಿ ಲಭ್ಯವಾಗುತ್ತದೆ.
Related Articles
Advertisement
ಪೆಡ್ಲರ್‌ಗಳ ಪತ್ತೆಗೆ ಪ್ರತೀ ಠಾಣೆಗೂ ಗುರಿತಾಲೂಕು ಆಸ್ಪತ್ರೆಗಳಿಗೆ ಮೊದಲ ಹಂತದಲ್ಲಿ ಒಟ್ಟು 200 ಕಿಟ್‌ಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯವಿರುವ ಕಿಟ್‌ಗಳನ್ನು ಖರೀದಿಸುವಂತೆ ಸೂಚಿಸಲಾಗಿದೆ. ಈ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ ಡ್ರಗ್ಸ್ ಪರೀಕ್ಷೆ ಮಾಡಿಸಿಕೊಳ್ಳಬೇಕಿತ್ತು. ಈಗ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ತಪಾಸಣೆ ಮಾಡಲಾಗುತ್ತಿದೆ.
– ಕಿಶೋರ್ ಕುಮಾರ್, ಆರೋಗ್ಯ-ಕುಟುಂಬ ಕಲ್ಯಾಣಾಧಿಕಾರಿ, ದ.ಕ. ಜಿಲ್ಲೆ ಶಾಲಾ ಕಾಲೇಜುಗಳಲ್ಲಿ ವ್ಯಾಪಕ ಜಾಗೃತಿ, ವ್ಯಸನಿಗಳಿಗೆ ಕೌನ್ಸೆಲಿಂಗ್, ಡಿ-ಎಡಿಕ್ಷನ್ ಸೆಂಟರ್ ವ್ಯವಸ್ಥೆಯ ಜತೆಗೆ ಡ್ರಗ್ಸ್ ಮಾರಾಟಗಾರರನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದು ಕೂಡ ಅಗತ್ಯವಾಗಿದೆ. ಡ್ರಗ್ಸ್ ಮಾರಾಟಗಾರರ ಮೇಲೆ ಗೂಂಡಾ ಕಾಯಿದೆ ಹಾಕಿ ಗಡೀಪಾರು ಮಾಡುವ ಪ್ರಕ್ರಿಯೆಯನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು. ಇದಕ್ಕಾಗಿ ಪ್ರತ್ಯೇಕ ತಂಡ ನಿಯೋಜಿಸಲಾಗಿದೆ. ಡ್ರಗ್ಸ್ ಚಟುವಟಿಕೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ ಟೋಲ್ ಫ್ರೀ ಸಂಖ್ಯೆ ಆರಂಭಿಸುವ ಚಿಂತನೆಯೂ ಇದೆ. – ಸಿ.ಬಿ. ರಿಷ್ಯಂತ್, ಎಸ್‌ಪಿ, ದ.ಕ.