Advertisement

ಗಂಗೊಳ್ಳಿ: ಮಾದಕ ವ್ಯಸನ ವಿರೋಧಿಸಿ ಬೃಹತ್‌ ಜಾಥಾ

01:00 AM Feb 24, 2019 | Harsha Rao |

ಗಂಗೊಳ್ಳಿ: ಉಡುಪಿ ಜಿಲ್ಲಾ ಎಸ್‌ಐಒ ಗಂಗೊಳ್ಳಿ ಪೊಲೀಸ್‌ ಠಾಣೆ ಹಾಗೂ ಕೋಸ್ಟಲ್‌ ಮಿರರ್‌ ಸಹಭಾಗಿತ್ವದಲ್ಲಿ ಶನಿವಾರ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪ.ಪೂ. ಕಾಲೇಜಿನ ಆವರಣದಲ್ಲಿ  ಮಾದಕ ವ್ಯಸನದ ವಿರುದ್ದ ಕಾಲ್ನಡಿಗೆ ಜಾಥಾ ಹಾಗೂ ಸಾರ್ವಜನಿಕ ಜನಜಾಗೃತಿ ಕಾರ್ಯಕ್ರಮ ನಡೆಯಿತು.  

Advertisement

ತೌಹೀದ್‌ ಇನ್ಸ್ಟಿಟ್ಯೂಟ್‌ನ ಅಕ್ತರ್‌ ಅಹಮದ್‌ ಖಾನ್‌ ಜಾಥಾಕ್ಕೆ ಜಾಲನೆ ನೀಡಿದರು.  ಗಂಗೊಳ್ಳಿಯ ತೌಹೀದ್‌ ಆಂಗ್ಲ ಮಾಧ್ಯಮ ಶಾಲೆಯಿಂದ ಹೊರಟ ಕಾಲ್ನಡಿಗೆ ಜಾಥಾವು ನಗರದ ವಿವಿಧ ಪ್ರಮುಖ ಭಾಗಗಳಲ್ಲಿ ಸಂಚರಿಸಿ, ಗಂಗೊಳ್ಳಿಯ ಎಸ್‌.ವಿ. ಪ.ಪೂ. ಕಾಲೇಜಿನಲ್ಲಿ ಸಮಾಪನಗೊಂಡಿತು. ಜಾಥಾದಲ್ಲಿ ಗಂಗೊಳ್ಳಿಯ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು. 

ಕಾರ್ಯಕ್ರಮ ಉದ್ಘಾಟಿಸಿದ ಉಡುಪಿಯ ಮನೋವೈದ್ಯ ಡಾ| ಪಿ.ವಿ. ಭಂಡಾರಿ , ವಿದ್ಯಾರ್ಥಿಗಳು ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ, ತಮ್ಮ ಉಜ್ವಲ ಜೀವನ  ರೂಪಿಸುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.  

ಎಸ್‌.ವಿ. ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು.  
ಗಂಗೊಳ್ಳಿ ಪೊಲೀಸ್‌ ಠಾಣೆಯ ಎಎಸ್‌ಐಗಳಾದ ಜಯರಾಮ್‌, ರಘುರಾಮ್‌, ಬಿಆರ್‌ಪಿ ಸುಷ್ಮಾ, ಜಮಾತೆ ಇಸ್ಲಾಮಿ ಹಿಂದ್‌ ಗಂಗೊಳ್ಳಿ ಮಾಜಿ ಅಧ್ಯಕ್ಷ ಮನ್ಸೂರ್‌, ಎಸ್‌ಐಓ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ರಿಯಾನ್‌ ಉಡುಪಿ, ಜಿಲ್ಲಾ ಕ್ಯಾಂಪಸ್‌ ಕಾರ್ಯದರ್ಶಿ ಡಾ| ಫಹೀಮ್‌ ಹೂಡೆ ಉಪಸ್ಥಿತರಿದ್ದರು. 

ಎಸ್‌ಐಒ  ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹಮ್ಮದ್‌ ಶಾರೂಕ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಸ್ಟಲ್‌ ಮಿರರ್‌ನ ಪ್ರಶಾಂತ್‌ ವಂದಿಸಿದರು. ಸುಜೇಂದ್ರ ಹಂದೆ  ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next