Advertisement

ಗಂಗೊಳ್ಳಿ ಕಿರು ಬಂದರು: ಹೂಳೆತ್ತದಿರುವುದೇ ಸಮಸ್ಯೆ

06:00 AM Aug 17, 2018 | Team Udayavani |

ವಿಶೇಷ ವರದಿ- ಗಂಗೊಳ್ಳಿ: ಸುಮಾರು 3 ಕೋ.ರೂ. ವೆಚ್ಚದಲ್ಲಿ ಗಂಗೊಳ್ಳಿಯ ಕಿರು ಬಂದರು ನಿರ್ಮಾಣವಾಗಿ 4-5 ವರ್ಷಗಳಾದರೂ ಅಲ್ಲಿರುವ ಹೂಳು ಹಾಗೂ ಕಲ್ಲು ತೆಗೆಯದ ಕಾರಣ ಅದು ಈವರೆಗೆ ಮೀನುಗಾರರ ಪ್ರಯೋಜನಕ್ಕೆ ಬಾರದೇ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. 

Advertisement

ಯಾಂತ್ರೀಕೃತ ಮೀನುಗಾರಿಕೆ  ಋತು ಈಗಾಗಲೇ ಆರಂಭವಾಗಿ ದ್ದರೂ, ಭಾರೀ ಮಳೆಯಿಂದಾಗಿ ಕಡಲಬ್ಬರ ಹೆಚ್ಚಾಗಿರುವುದರಿಂದ ಇನ್ನು ಕೆಲವು ದಿನಗಳ ಕಾಲ ಮೀನುಗಾರಿಕೆ ನಡೆಯುವುದು ಅನುಮಾನವೆನಿಸಿದೆ. 

ಗಂಗೊಳ್ಳಿ ಮೀನುಗಾರಿಕಾ ಬಂದರಿನ ಹಳೆಯ ಜೆಟ್ಟಿ, ಗಂಗೊಳ್ಳಿ- ಕೋಡಿ ನಡುವಿನ ಅಳಿವೆ, ಮ್ಯಾಂಗನೀಸ್‌ ವಾರ್ಫ್‌, ಬ್ರೇಕ್‌ ವಾಟರ್‌ ಇಕ್ಕೆಲಗಳಲ್ಲಿ ಹೂಳು ಆವ‌ರಿಸಿದ್ದು, ಆದರೆ ಇಷ್ಟೊತ್ತಿಗಾಗಲೇ ತೆರವು ಮಾಡಬೇಕಿತ್ತು. ಬೋಟುಗಳು ಜೆಟ್ಟಿಯಲ್ಲಿ ನಿಲ್ಲಲು ಹಾಗೂ ಅಳಿವೆ ಮೂಲಕ ಸಾಗಲು ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಜೆಟ್ಟಿ ಹಾಗೂ ಅಳಿವೆ ಪ್ರದೇಶಗಳಲ್ಲಿ ಹೂಳೆತ್ತಲು ಸರಕಾರ ಕ್ರಮ ವಹಿಸಬೇಕಿದೆ. 

50 ಬೋಟುಗಳು ನಿಲ್ಲಬಹುದು
ಕಿರು ಬಂದರಿನ ಹೂಳು ಹಾಗೂ ಬೋಟುಗಳ ಸಂಚಾರಕ್ಕೆ ಅಡ್ಡಿಯಾಗಿರುವ ಕಲ್ಲುಗಳನ್ನು ತೆರವು ಮಾಡಿದರೆ ಸುಮಾರು 50 ರಿಂದ 60 ಬೋಟುಗಳು ಅಲ್ಲಿ ನಿಲ್ಲಬಹುದು. ಇದರಿಂದ ಗಂಗೊಳ್ಳಿ ಬಂದರಿನಲ್ಲಿ ಬೋಟುಗಳ ನಿಲುಗಡೆಗೆ ಇರುವ ಸ್ಥಳಾವಕಾಶದ ಸಮಸ್ಯೆ ಸ್ವಲ್ಪ ಮಟ್ಟಿಗೆ ನೀಗಲಿದೆ. 

ಸಚಿವರಿಗೂ ಮನವಿ
ಈ ಸಂಬಂಧ ಇತ್ತೀಚೆಗೆ ಗಂಗೊಳ್ಳಿ ಬಂದರಿಗೆ ಭೇಟಿ ನೀಡಿದ್ದ ಮೀನುಗಾರಿಕಾ ಸಚಿವ ವೆಂಕಟರಾವ್‌ ನಾಡಗೌಡ ಅವರಿಗೆ ಇಲ್ಲಿನ ಮೀನುಗಾರರು ಹೂಳೆತ್ತಲು ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರು. ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ
ಅವರು ಕೂಡ ಸಚಿವರನ್ನು ಒತ್ತಾಯಿಸಿದ್ದರು. 

Advertisement

ದುರಸ್ತಿಯಾಗದ ಮೇಲ್ಛಾವಣಿ
ಬಂದರಿನಲ್ಲಿರುವ ಎರಡು ಮೀನು ಗಾರಿಕಾ ಹರಾಜು ಪ್ರಾಂಗಣದ ಪೈಕಿ 1ನೇ ಪ್ರಾಂಗಣದ ಮೇಲ್ಛಾವಣಿಯ ಸಿಮೆಂಟ್‌ ಶೀಟು ಕಳೆದ ಜೂನ್‌ನಲ್ಲಿ ಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋಗಿದೆ. ಆದರೆ ಈವರೆಗೆ ಅದರ ದುರಸ್ತಿ ಮಾತ್ರ ಆಗಿಲ್ಲ. 

ಸ್ಲಾÂಬ್‌ ಕುಸಿತ
ಸುಮಾರು 400 ಮೀಟರ್‌ ಉದ್ದದ ಜೆಟ್ಟಿ ಪ್ರದೇಶದಲ್ಲಿ ಸುಮಾರು 150 ಮೀ. ಜೆಟ್ಟಿ ಪ್ರದೇಶದ ಸ್ಲಾéಬ್‌ ಕುಸಿದಿದ್ದು, ಮೀನುಗಾರರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ. ದಕ್ಷಿಣ ದಿಕ್ಕಿನಲ್ಲಿ ಸ್ಲಾÂಬ್‌ ಕುಸಿದು ಆರೇಳು ತಿಂಗಳು ಕಳೆದಿ ದ್ದರೂ ಅದನ್ನು ದುರಸ್ತಿ§ಪಡಿಸಿಲ್ಲ. ಈಗ ಇದಕ್ಕೆ ತಾಗಿಕೊಂಡಿರುವ ಸ್ಲಾÂಬ್‌ಗಳು ಕುಸಿತದ ಭೀತಿಯಲ್ಲಿದ್ದು, ಈ ಬಗ್ಗೆ ಕೂಡಲೇ ಸೂಕ್ತ ಕ್ರಮಕೈಗೊಳ್ಳುವಂತೆ ಮೀನುಗಾರರು ಆಗ್ರಹಿಸಿದ್ದಾರೆ. 

ಕಳೆದ ಸಾಲಿನ ಮೀನುಗಾರಿಕಾ ಋತು ನಿರಾಸೆಯಲ್ಲಿ ಅಂತ್ಯಗೊಂಡಿದ್ದು, ಈ ಬಾರಿಯ ಮಳೆಗಾಲದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಯೂ ಕೆಲವು ದಿನಗಳು ಮಾತ್ರನಡೆದಿರುವುದು ಮೀನುಗಾರರಲ್ಲಿ ನಿರಾಸೆ ಮೂಡಿಸಿದೆ. ಹೊಸ ಭರವಸೆಯೊಂದಿಗೆ ಕಡಲಿಗಿಳಿಯಲು ಸಿದ್ಧರಾಗಿರುವ ಮೀನುಗಾರರ ಬೇಡಿಕೆ ಈಡೇರಿಸಲು ಆಳುವ ವರ್ಗ ಮನಸ್ಸು ಮಾಡಬೇಕಿದೆ. 

 ಈವರೆಗೆ ಪ್ರಯೋಜನಕ್ಕಿಲ್ಲ
4 ವರ್ಷಗಳ ಹಿಂದೆ ನಿರ್ಮಿಸಿದ್ದ ಕಿರು ಬಂದರು, ಈವರೆಗೆ ನಮ್ಮ ಉಪಯೋಗಕ್ಕೆ ಬಂದಿಲ್ಲ. ಹೂಳೆತ್ತದೇ ಇರುವುದರಿಂದ ಮೀನುಗಾರಿಕೆಗೆ ತೊಂದರೆಯಾಗಲಿದೆ. ಸಚಿವರು ಬಂದಿದ್ದಾಗ ಅವರ ಗಮನಕ್ಕೂ ತರಲಾಗಿದೆ. 
– ರಮೇಶ್‌ ಕುಂದರ್‌
ಅಧ್ಯಕ್ಷರು, ಪರ್ಸಿನ್‌ ಮೀನುಗಾರರ ಸ್ವಸಹಾಯ ಸಂಘ

ಕೂಡಲೇ ಹೂಳೆತ್ತುವ ಕಾರ್ಯ
ಹೊಸ ಜೆಟ್ಟಿ, ಕೋಡಿ ಭಾಗದಲ್ಲಿ ಹೂಳು ತುಂಬಿ ಮೀನುಗಾರಿಕೆ ದೋಣಿಗಳ ಸಂಚಾರಕ್ಕೆ ತೊಂದರೆಯಾಗಲಿದ್ದು, ಮಳೆ ಕಡಿಮೆಯಾದ ತತ್‌ಕ್ಷಣ ಹೂಳೆತ್ತುವ ಕಾರ್ಯ ಆಗಲಿದೆ. ಈಗ ಬಾರ್ಜ್‌ ಮಲ್ಪೆಯಲ್ಲಿದ್ದು, ಕಡಲಬ್ಬರಕ್ಕೆ ಅಲ್ಲಿಂದ ಗಂಗೊಳ್ಳಿಗೆ ಕೊಂಡೊಯ್ಯುವುದು ಕಷ್ಟ. ಮಳೆ ಕಡಿಮೆಯಾದ ಅನಂತರ ಹೂಳೆತ್ತಲಾಗುವುದು. 
– ನಾಗರಾಜ್‌
ಎಂಜಿನಿಯರ್‌, ಬಂದರು ಮತ್ತು ಮೀನುಗಾರಿಕಾ ಇಲಾಖೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next