Advertisement

ಗಂಗೊಳ್ಳಿ: ಅಕ್ರಮ ದನ ಸಾಗಾಟ,ಇಬ್ಬರ ಸೆರೆ, ವಾಹನ ವಶ

12:14 AM Nov 12, 2022 | Team Udayavani |

ಗಂಗೊಳ್ಳಿ: ಹೊಸಾಡು ಗ್ರಾಮದ ಅರಾಟೆ ಬಸ್‌ ನಿಲ್ದಾಣದ ಬಳಿಯ ರಾ.ಹೆ. 66ರಲ್ಲಿ ನ. 11ರಂದು ಎಸ್‌ ಐ ವಿನಯ್‌ ಕೊರ್ಲಹಳ್ಳಿ ನೇತೃತ್ವದ ಗಂಗೊಳ್ಳಿ ಪೊಲೀಸರ ತಂಡ ತಪಾಸಣೆ ನಡೆಸುತ್ತಿದ್ದಾಗ ಪಿಕಪ್‌ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಉಸ್ಮಾನ್‌ ಮತ್ತು ಜೋಸೆಫ್ ಡಿ’ಸೋಜಾ ಬಂಧಿತರು. ಶೇಖರ ಶೆಟ್ಟಿ ಪರಾರಿಯಾಗಿದ್ದಾರೆ. ಮೊವಾಡಿಯಿಂದ ಕುಂದಾಪುರಕ್ಕೆ ಅಕ್ರಮವಾಗಿ ಎರಡು ದನಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next