Advertisement
ಘಟನೆ ವಿವರಗಂಗೊಳ್ಳಿಯ ತಾಕಿಯಾ ಮೌಲಾ ನಿವಾಸಿ, ಮಸೀದಿಯಲ್ಲಿ ಕಾರ್ಯ ನಿರ್ವಹಿಸುವ ನಯೀಂ ಮನೆ ಮುಂದೆ ನಿಲ್ಲಿಸಲಾದ ಆ್ಯಕ್ಟಿವಾ ಹೋಂಡಾ ಸ್ಕೂಟರ್‌ಗೆ ಬೆಂಕಿ ಹಚ್ಚಿ ಗುರುರಾಜ್ ಓಡಿ ಹೋಗುತ್ತಿರುವು ದನ್ನು ಸ್ಥಳೀಯ ರೋರ್ವರು ನೋಡಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತತ್‌ಕ್ಷಣ ಕಾರ್ಯ ಪ್ರವೃತ್ತರಾದ ಗಂಗೊಳ್ಳಿ ಠಾಣೆ ಪ್ರಭಾರ ಎಸ್‌ಐ ಸುಬ್ಬಣ್ಣ ಹಾಗೂ ಸಿಬಂದಿ, ದಾಕುಹಿತ್ಲಿನಲ್ಲಿರುವ ಗುರುರಾಜ್ ಮನೆಗೆ ತೆರಳಿ ಅಲ್ಲಿಂದ ಆತನನ್ನು ವಶಕ್ಕೆ ಪಡೆದರು. ಘಟನೆ ಸಂಭವಿಸಿದ ಒಂದೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದು, ಸಾರ್ವಜನಿಕರು ನೆಮ್ಮದಿ ಪಡುವಂತಾಗಿದೆ.
ಈ ಹಿಂದೆ ಎರಡು ದ್ವಿಚಕ್ರ ವಾಹನ ಗಳಿಗೆ ಬೆಂಕಿ ಹಚ್ಚಲಾಗಿತ್ತು. ಬಳಿಕ ಗಂಗೊಳ್ಳಿ ಉದ್ವಿಗ್ನಗೊಂಡಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡ ಲಾಗಿತ್ತು. ಪರಿಸ್ಥಿತಿ ಬಹುತೇಕ ಶಾಂತ ಸ್ಥಿತಿಗೆ ಬಂದಿದೆ ಎನ್ನುವಾಗ ಮತ್ತೂಂದು ಪ್ರಕರಣ ನಡೆದಿದೆ. ಸೂಕ್ಷ್ಮ ಪ್ರದೇಶವಾದ ಗಂಗೊಳ್ಳಿ ಯಲ್ಲಿ ಮತ್ತೆ ಉದ್ವಿಗ್ನವಾಗದಂತೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.