Advertisement
ಈಗಾಗಲೇ ಕಡಲ ಕೊರೆತದ ರಭಸಕ್ಕೆ ತಂಗಿನ ತೋಟಗಳು, ಆಸ್ತಿ ಪಾಸ್ತಿ ಹಾನಿಗೊಳಗಾಗಿದ್ದು ಕುಟುಂಬಗಳು ನಷ್ಟ ಅನುಭವಿಸಿವೆ. ಕುಟುಂಬಗಳು ಪ್ರತಿದಿನ ರಾತ್ರಿ ನಿದ್ದೆ ಮಾಡದೇ ಆತಂಕದಿಂದ ಬದುಕುವಂತಾಗುತಿದೆ ಎಂದು ಕುಟುಂಬದ ಹಿರಿಯ ಜೀವಗಳು ನಿಯೋಗದ ಜತೆ ತಮ್ಮ ಅಳಲು ತೋಡಿಕೊಂಡರು. ಕಡಲು ಕೊರೆತ ತಡೆಗಟ್ಟಲು ಶಾಶ್ವತ ಪರಿಹಾರಕ್ಕಾಗಿ ಸರಕಾರ ಶೀಘ್ರ ಕ್ರಮ ವಹಿಸಲು ಒತ್ತಾಯಿಸಿ ಸ್ಥಳೀಯರಿಂದ ಸಹಿ ಸಂಗ್ರಹಿಸಿ ಜಿಲ್ಲಾಧಿಕಾರಿ ಬಳಿ ನಿಯೋಗ ತೆರಳುವುದಕ್ಕೆ ತೀರ್ಮಾನಿಸಲಾಯಿತು.ನಿಯೋಗದಲ್ಲಿ ಸಿಪಿಎಂ ಬೆ„ಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಮುಖಂಡರಾದ ವೆಂಕಟೇಶ್ ಕೋಣಿ, ಸ್ಥಳೀಯ ಮುಖಂಡರಾದ ಚಿಕ್ಕ ಮೋಗವೀರ, ಅರುಣ್ ಕುಮಾರ್ ಗಂಗೊಳ್ಳಿ, ಸುಶೀಲ, ವಿವೇಕ್, ಅಭಿನಂದನ್ ಇದ್ದರು.ಜಿಲ್ಲಾಡಳಿತ ಶೀಘ್ರ ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ನಿಯೋಗ ಹೇಳಿದೆ.