ಗಂಗೊಳ್ಳಿ: ಕುಂದಬಾರಂದಾಡಿ ಗ್ರಾಮದ ಕೊಳೂರು ಕ್ರಾಸ್ನ ಯುನಿಟಿ ಕ್ರಷರ್ ಬಳಿಯ ಸರಕಾರಿ ಹಾಡಿಯಲ್ಲಿ ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಎಸ್ಐ ಬಸವರಾಜ ಕನಶಟ್ಟಿ ಹಾಗೂ ಸಿಬಂದಿ ಸ್ಥಳೀಯರಾದ ಪ್ರವೀಣ (35), ಮಹಾದೇವ (49), ಸುಧಾಕರ (38), ಪ್ರಶಾಂತ್ (36), ಬಾಲ (58), ದಿನೇಶ್ (29) ಹಾಗೂ ವಿಕ್ರಮ (27) ಅವರನ್ನು ವಶಕ್ಕೆ ಪಡೆದಿದ್ದಾರೆ.
ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.