Advertisement
ಅಗ್ನಿ ದುರಂತ ಸಂಭವಿಸಿದ ಗಂಗೊಳ್ಳಿಯ ಮ್ಯಾಂಗನೀಸ್ ವಾರ್ಫ್ ಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮೀನುಗಾರರ ಜತೆ ಸಮಾಲೋಚನೆ ನಡೆಸಿದರು.
ಬಂದರಿನ ಹೂಳೆತ್ತುವಿಕೆ ನಾಳೆಯೇ ಆರಂಭವಾಗಲಿದೆ. ಜೆಟ್ಟಿ ಕುಸಿತಕ್ಕೆ ಸಂಬಂಧಿಸಿ ಹಿಂದಿನ ಮೀನುಗಾರಿಕೆ ಇಲಾಖೆ ನಿರ್ದೇಶಕರ ನೇತೃತ್ವದ ಸಮಿತಿಯ ವರದಿ ಬಂದಿದ್ದು, ಸರಕಾರಕ್ಕೆ ಸಲ್ಲಿಸಲಾಗುವುದು. 12 ಕೋ. ರೂ. ವೆಚ್ಚದ ಪುನರ್ ನಿರ್ಮಾಣದಲ್ಲಿ ಬಾಕಿ ಉಳಿದಿರುವ 73 ಲಕ್ಷ ರೂ. ವೆಚ್ಚದ ಕಾಮಗಾರಿ ನಡೆಸಲು ಮತ್ತು ಕುಸಿದು ಬಿದ್ದಿರುವ ಜೆಟ್ಟಿಯ ಅವಶೇಷ ತೆರವಿಗೆ ಅನುಮತಿಗೆ ಮನವಿ ಮಾಡಲಾಗಿದೆ. ಬಾಕಿ ಕಾಮಗಾರಿಯ ಅಂದಾಜು ಪಟ್ಟಿಗೆ ಸೂಚಿಸಲಾಗಿದೆ ಎಂದರು.
Related Articles
ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಸುಮಾರು 22 ಕೋ. ರೂ. ವೆಚ್ಚದಲ್ಲಿ ಬಂದ ರಿನ ಪುನರ್ ನವೀಕರಣ ಕಾಮಗಾರಿಗೆ ಮಂಜೂರಾತಿ ದೊರೆತಿದ್ದು, ಶೀಘ್ರ ಅನುದಾನ ಬಿಡುಗಡೆಯಾಗ ಬಹುದು. 2 ಹರಾಜು ಕೊಠಡಿ, ವಿಶ್ರಾಂತಿ ಕೊಠಡಿ, ಸಾರ್ವಜನಿಕ ಶೌಚಾಲಯ, ಓವರ್‌ಹೆಡ್ ಟ್ಯಾಂಕ್, ಆವರಣ ಗೋಡೆ ನಿರ್ಮಾಣ, ಸಿಸಿ ಕೆಮರಾ ಅಳವಡಿಕೆ ಸಹಿತ ಅನೇಕ ಕಾಮ ಗಾರಿಗಳು ನಡೆಯಲಿದೆ ಎಂದರು.
Advertisement
ಭರವಸೆ ಇಡಬಹುದೇ?ದುರಂತ ಸಂಭವಿಸಿ 15 ದಿನ ಕಳೆದರೂ ಸರಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ. ಸಚಿವರು, ಶಾಸಕರು, ಅಧಿಕಾರಿಗಳೆಲ್ಲ ಬಂದ ರೂ ಏನೂ ಆಗಿಲ್ಲ. ಹೊಸ ಬೋಟ್‌ಗೆ ಸುಮಾರು 1 ಕೋಟಿ ರೂ. ಬೇಕು. ನಾವೆಲ್ಲ ಮೊದಲೇ ಸೋತಿದ್ದೇವೆ. ಇಂತಹ ಸಂದರ್ಭದಲ್ಲಿ ಸರಕಾರ ದಿಂದ ಪರಿಹಾರ ದೊರೆಯುವ
ಬಗ್ಗೆ ಭರವಸೆ ಇಟ್ಟುಕೊಳ್ಳ ಬಹುದೇ ಎಂದು ಮೀನು ಗಾರ ಮುಖಂಡ ರಮೇಶ್ ಕುಂದರ್ ಮತ್ತು ವಿಕ್ರಮ್ ಪ್ರಶ್ನಿಸಿದರು. ಕೆಎಫ್‌ಡಿಸಿ ಆಡಳಿತ ನಿರ್ದೇಶಕ ಗಣೇಶ ಕೆ., ಅಪರ ನಿರ್ದೇಶಕ ಹರೀಶ್ ಕುಮಾರ್, ಜಂಟಿ ನಿರ್ದೇಶಕರಾದ ವಿವೇಕ ಆರ್., ಸಿದ್ಧಯ್ಯ, ಅಧಿಕಾರಿ ಗಳಾದ ಅಂಜನಾದೇವಿ, ಸಂಜೀವ ಅರಕೇರಿ, ಸುಮಲತಾ, ದಿವಾಕರ ಖಾರ್ವಿ, ರೆನಿಟಾ ಡಿ’ಸೋಜಾ, ಎಂಜನಿಯರ್‌ಗಳಾದ ಶೋಭಾ ಕೆ., ಜಯರಾಜ್, ಗಂಗೊಳ್ಳಿ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕರಾದ ಚಂದ್ರ ಖಾರ್ವಿ, ರಾಜೇಶ ಸಾರಂಗ್, ಮುಖಂಡರಾದ ರಾಘವೇಂದ್ರ ಮೇಸ್ತ, ರಾಘವೇಂದ್ರ ಮಡಿವಾಳ ಉಪಸ್ಥಿತರಿದ್ದರು.