Advertisement

ಸಂಬಂಧಿಕರಿಂದಲೇ ಕೊಲೆಯಾಗಿದ್ದ ಗಂಗಿವಾಳ ಗ್ರಾ.ಪಂ ಸದಸ್ಯನ ಪತ್ನಿ ಆತ್ಮಹತ್ಯೆಗೆ ಶರಣು

07:56 AM Sep 29, 2022 | Team Udayavani |

ಹುಬ್ಬಳ್ಳಿ: ಪತ್ನಿಯ ಸಂಬಂಧಿಗಳಿಂದಲೇ ಭೀಕರ ಕೊಲೆಯಾಗಿದ್ದ ಗಂಗಿವಾಳ ಗ್ರಾಪಂ ಸದಸ್ಯ ದೀಪಕ ಪಟದಾರಿ ಅವರ ಪತ್ನಿ ಪುಷ್ಪಾ ಪಟದಾರಿ ಬುಧವಾರ ರಾತ್ರಿ ತಮ್ಮ ಇಲ್ಲಿನ ನವನಗರದ ಸಿಟಿ ಪಾರ್ಕ್ ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ಆತ್ಮಹತ್ಯೆಗೆ ಶರಣಾದ ತಾಲೂಕಿನ ರಾಯನಾಳದ ಪುಷ್ಪಾ ಗಂಗಿವಾಳದ ದೀಪಕರನ್ನು ಕುಟುಂಬದವರ ತೀವ್ರ ವಿರೋಧದ ನಡುವೆ ಪ್ರೀತಿಸಿ ಮದುವೆ ಆಗಿದ್ದರು. ದೀಪಕರನ್ನು ಕೊಲೆ ಮಾಡಲಾಗಿತ್ತು. ಈಗ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಎಪಿಎಂಸಿ-ನವನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಸರಕಾರ ದೀಪಕ ಕೊಲೆ ಪ್ರಕರಣವನ್ನು ಪತ್ನಿ ಹಾಗೂ ಅವರ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 3-4 ದಿನಗಳ ಹಿಂದಷ್ಟೇ ಸಿಐಡಿಗೆ ವಹಿಸಿ ಆದೇಶಿಸಿತ್ತು. ಆರು ಜನರುಳ್ಳ ತಂಡ ಪ್ರಕರಣದ ಕುರಿತು ತನಿಖೆ ನಡೆಸಿತ್ತು. ಅಷ್ಟರಲ್ಲಿಯೇ ದೀಪಕನ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಇದು ಮೆಸ್ಸಿ, ರೊನಾಲ್ಡೊ ಸ್ಟೋರಿ ಅಲ್ಲ…ನಮ್ಮ ಸುನೀಲ್‌ ಚೆಟ್ರಿ ಯಶೋಗಾಥೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next