Advertisement
ಕೆಲವು ತಿಂಗಳಿಂದ ಗಂಗೆಯ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಬಿಡಾರದಲ್ಲೇ ಚಿಕಿತ್ಸೆ ನೀಡಲಾಗುತಿತ್ತು. ಕಳೆದ ಎರಡು ವಾರದಿಂದ ಆರೋಗ್ಯ ಮತ್ತಷ್ಟು ಬಿಗಡಾಯಿಸಿತ್ತು. ಇಂದು ಉಸಿರು ಚೆಲ್ಲಿದೆ.
Related Articles
Advertisement
ಗಂಗೆಯು ಹೆಣ್ಣಾನೆಗಳಲ್ಲಿ ಸ್ಪುರದ್ರೂಪಿ ಎನ್ನುವ ಹೆಗ್ಗಳಿಕೆ ಪಡೆದಿತ್ತು. ಅಲ್ಲದೆ ಖೆಡ್ಡಾ ಕಾರ್ಯಾಚರಣೆಯಲ್ಲಿ ನೈಪುಣ್ಯ ಹೊಂದಿತ್ತು. ರಾಜ್ಯದ ವಿವಿಧೆಡೆ ಪುಂಡಾನೆಗಳನ್ನು ಖೆಡ್ಡಾಗೆ ಕೆಡವುವ ಕಾರ್ಯಾಚರಣೆಯಲ್ಲಿ ಗಂಗೆ ಪಾಲ್ಗೊಂಡು ಯಶಸ್ವಿಯಾಗಿದೆ. ಕಾರ್ಯಾಚರಣೆ ವೇಳೆ ಗಂಗೆಯನ್ನು ಕಂಡು ಪುಂಡಾನೆಗಳು ಬಳಿಗೆ ಬರುತ್ತಿದ್ದವು. ಈ ವೇಳೆ ಅವುಗಳನ್ನು ಖೆಡ್ಡಾಗೆ ಕೆಡವಿಕೊಳ್ಳಲಾಗುತಿತ್ತು.
ಬಿಡಾರದ ಹಿರಿಯಜ್ಜಿಯಾಗಿದ್ದ ಗಂಗೆ
ಗಂಗೆಯು ಸಕ್ರೆಬೈಲು ಬಿಡಾರದ ಹಿರಿಯಜ್ಜಿಯಾಗಿದ್ದಳು. ಈಕೆಯ ಆರು ಮರಿಗಳು ಇದೆ ಬಿಡಾರದ ಸದಸ್ಯರು. ಅಲ್ಲದೆ ಈ ಬಿಡಾರದಲ್ಲಿ ಯಾವುದೆ ಆನೆ ಮರಿ ಹಾಕಿದರೂ ಆರೈಕೆಗೆ ಗಂಗೆಯನ್ನು ಬಿಡಲಾಗುತಿತ್ತು. ಅಲ್ಲದೆ ತಾಯಿ ಆನೆಯಿಂದ ಮರಿಯನ್ನು ಬೇರ್ಪಡಿಸುವ ವೀನಿಂಗ್ ಪ್ರಕ್ರಿಯೆ ಸಂದರ್ಭದಲ್ಲೂ ಗಂಗೆ ಪ್ರಮುಖ ಪಾತ್ರ ವಹಿಸುತ್ತಿದ್ದಳು.
ಗಂಗೆ ಆನೆಯನ್ನು ಕಳೆದುಕೊಂಡು ಸಕ್ರೆಬೈಲು ಬಿಡಾರ ದುಃಖದಲ್ಲಿದೆ. ಗಂಗೆಗೆ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ.