ಗಂಗಾವತಿ; ದಾಖಲಾತಿ ಇಲ್ಲದೆ ಅಕ್ರಮವಾಗಿ ಖಾಸಗಿ ಬಸ್ ನಲ್ಲಿ ಹಣ ಸಾಗಿಸುತ್ತಿದ್ದ ಪ್ರಕರಣವನ್ನು ಗ್ರಾಮೀಣ ಪೊಲೀಸರು ಪತ್ತೆ ಮಾಡಿದ್ದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು 60.50 ಲಕ್ಷ ರೂಗಳನ್ನು ಪೊಲೀಸ್ ವಶಕ್ಕೆ ಪಡೆದ ಪ್ರಕರಣ ಮಂಗಳವಾರ ಮಧ್ಯರಾತ್ರಿ ವಿದ್ಯಾನಗರದ ಪೊಲೀಸ್ ಚೆಕ್ಪೋಸ್ಟ್ ಹತ್ತಿರ ಜರುಗಿದೆ.
ಖಾಸಗಿ ಬಸ್ ನಲ್ಲಿ ವಿಜಯಕುಮಾರ್ ಕಲಬುರಗಿ ಎನ್ನುವ ವ್ಯಕ್ತಿ ದಾಖಲೆಯಿಲ್ಲದ 60. 50 ಲಕ್ಷ ರೂಗಳನ್ನು ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ಗ್ರಾಮೀಣ ಠಾಣೆಯ ಪೊಲೀಸರು ವಿದ್ಯಾನಗರದ ಚೆಕ್ ಪೋಸ್ಟ್ ಹತ್ತಿರ ಮಂಗಳವಾರ ಮಧ್ಯರಾತ್ರಿ ಒಂದು ಗಂಟೆಗೆ ಸುಮಾರು ನಲ್ಲಿ ಖಾಸಗಿ ಬಸ್ಸನ್ನು ತಡೆದು ತಪಾಸಣೆ ಮಾಡಿದಾಗ ಕಲಬುರ್ಗಿಯ ವಿಜಯಕುಮಾರ್ ಎಂಬ ವ್ಯಕ್ತಿ ದಾಖಲೆದ ಹಣವನ್ನು ದಾಖಲೆ ಇಲ್ಲದ ಹಣವನ್ನು ಅಕ್ರಮವಾಗಿ ಸಾಧಿಸುತ್ತಿರುವ ಕುರಿತು ಗೊತ್ತಾಗಿದೆ. ಕೂಡಲೇ ಹಣದ ಸಮೇತ ವಿಜಯ ಕುಮಾರನನ್ನು ಪೊಲೀಸರು ವರ್ಷಕ್ಕೆ ಪಡೆದಿದ್ದಾರೆ.ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ರೇವಣಸಿದ್ದಪ್ಪ ಎಂಬುವ ವ್ಯಕ್ತಿ 6.40 ಲಕ್ಷ ರೂಪಾಯಿ ಗಳನ್ನು ಶ್ರೀರಾಮ ನಗರದಲ್ಲಿ ಗ್ರಾಮೀಣ ಪೋಲೀಸರು ಪತ್ತೆ ಮಾಡಿ ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಸ್ಪಿ ಎಸ್ .ಶೇಖರಪ್ಪ ,ಸಿಪಿಐ ಮಂಜುನಾಥ್ ಮತ್ತು ಚುನಾವಣಾ ಕರ್ತವ ನಿವೃತ್ತ ಅಧಿಕಾರಿಗಳು ಇದ್ದರು.
ಇದನ್ನೂ ಓದಿ: Congress ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಶೆಟ್ಟರ್, ನಟಿ ರಮ್ಯಾ, ಸಾಧು ಕೋಕಿಲ