ಗಂಗಾವತಿ: ರಾಜ್ಯದ ಗಮನ ಸೆಳೆದಿದ್ದ ಗಂಗಾವತಿ ನಗರಸಭೆಗೆ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಅಧಿಕಾರ ಹಿಡಿಯಲು ಕಾಂಗ್ರೆಸ್ ಬಿಜೆಪಿ ತೀವ್ರ ಪೈಪೋಟಿ ನಡೆಸಿದ್ದವು. ಅಧ್ಯಕ್ಷ ರಾಗಿ ಮಾಲಾಶ್ರೀ ಸಂದೀಪ್ ಉಪಾಧ್ಯಕ್ಷರಾಗಿ ಸುಧಾಸೋಮನಾಥ ಕಂಪ್ಲಿ ಚುನಾಯಿತರಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಾಲಾಶ್ರೀ ಗೆ 19 ಬಿಜೆಪಿಯ ಜಯಶ್ರೀ ಸಿದ್ದಾಪುರ 18 ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಸುಧಾಸೋಮನಾಥ 20 ಮತಗಳು ಬಿಜೆಪಿಯ ಹೀರಾಬಾಯಿಸಿಂಗ್ 17 ಮತಗಳು ಲಭಿಸಿದ್ದು ಒಬ್ಬ ಸದಸ್ಯ ಉಪಾಧ್ಯಕ್ಷ ಚುನಾವಣೆಯಲ್ಲಿ ತಟಸ್ಥರಾಗಿದ್ದರು.
ತೀವ್ರ ಕುತೂಹಲ ಮೂಡಿಸಿದ್ದ ನಗರಸಭೆ ಚುನಾವಣೆಗೂ ಮುಂಚೆ ಬಿಜೆಪಿ ಸದಸ್ಯೆ ಸುಧಾಸೋಮನಾಥ ಕಾಂಗ್ರೆಸ್ ಪಾಳೆಯಕ್ಕೆ ಜಂಪ್ ಆಗಿದ್ದರು. ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ ಅವರನ್ನು ಕಿಡ್ನಾಪ್ ಮಾಡಿ ಹಳಿಯಾಳದಲ್ಲಿ ಪೊಲೀಸರ ಕೈ ಗೆ ಸಿಕ್ಕು ಹಾಕಿಕೊಂಡಿದ್ದಾರೆ. ನಂತರ ಬಿಜೆಪಿ ಕಾಂಗ್ರೆಸ್ ಮುಖಂಡರು ಪರಸ್ಪರ ದೂರು ದಾಖಲಿಸಿದ್ದರು. ಇದರಿಂದ ಗಂಗಾವತಿ ಬಿಗುವಿನ ವಾತಾವರಣ ಉಂಟಾಗಿತ್ತು.
ಇದನ್ನೂ ಓದಿ:ಗುರುಮಠಕಲ್ ಪುರಸಭೆ ಜೆಡಿಎಸ್ ತೆಕ್ಕೆಗೆ! 12 ಸದಸ್ಯ ಬಲ ಹೊಂದಿದ್ದರೂ ಕೈಗೆ ಮುಖಭಂಗ
ಅಧ್ಯಕ್ಷ ಉಪಾಧ್ಯಕ್ಷರ ಚುನಾವಣಾಧಿಯಾಗಿ ಸಹಾಯಕ ಆಯುಕ್ತ ನಾರಾಯಣ ರೆಡ್ಡಿ ಕನಕರೆಡ್ಡಿ ಕಾರ್ಯ ನಿರ್ವಹಿಸುದರು.
ಯಾವುದೇ ಅಹಿತಕರ ಘಟನೆಯಾಗದಂತೆ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.