Advertisement

ಗಂಗಾವತಿ-ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ

07:44 AM Jun 04, 2019 | Suhan S |

ಗಂಗಾವತಿ: ದೇಶದ ಪ್ರಮುಖ ನಗರಗಳ ಸಂಪರ್ಕ ಕಲ್ಪಿಸುವ ರೈಲು ಪ್ರಗತಿಯ ಸಂಕೇತವಾಗಿದ್ದು, ಒಂದು ವರ್ಷದೊಳಗೆ ಸಿಂಧನೂರು ಮತ್ತು ಬೆಂಗಳೂರಿಗೆ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆಂದು ಸಂಸದ ಕರಡಿ ಸಂಗಣ್ಣ ಹೇಳಿದರು.

Advertisement

ಸೋಮವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಗಂಗಾವತಿ-ಹುಬ್ಬಳ್ಳಿ ಎಕ್ಸಪ್ರಸ್‌ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು, 23 ವರ್ಷಗಳ ಹಿಂದೆ ರೈಲ್ವೆ ಮಾರ್ಗದ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ನರೇಂದ್ರ ಮೋದಿ ಪ್ರಧಾನಿಯಾಗಿ ಕಾಮಗಾರಿ ತ್ವರಿತವಾಗಿ ನಡೆಸಿ ಗಿಣಿಗೇರಾದಿಂದ ಗಂಗಾವತಿ 40ಕಿ.ಮೀ. ಕಾಮಗಾರಿ ಪೂರ್ಣಗೊಳಿಸಿ ರೈಲು ಸಂಚಾರ ಆರಂಭವಾಗಿದೆ. ಮುಂದಿನ ಒಂದು ವರ್ಷದಲ್ಲಿ ಸಿಂಧನೂರು ಹಾಗೂ ಬೆಂಗಳೂರಿಗೆ ರೈಲು ಸಂಚಾರ ಆರಂಭಿಸಲು ರಾಜ್ಯ ಹಾಗೂ ಕೇಂದ್ರ ಸರಕಾರ ಜತೆ ಸಂಪರ್ಕ ಸಾಧಿಸಲಾಗುತ್ತದೆ. ಗಂಗಾವತಿ ರೈಲು ನಿಲ್ದಾಣಕ್ಕೆ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸ್‌ ನಿಯೋಜಿಸಲು ಈಗಾಗಲೇ ರೈಲ್ವೆ ಇಲಾಖೆ ಹಿರಿಯ ಅಧಿ ಕಾರಿಗಳಿಗೆ ಪತ್ರ ಬರೆಯಲಾಗಿದೆ. ಗಂಗಾವತಿ ನಗರ ಹಾಗೂ ಪ್ರಮುಖ ಗ್ರಾಮಗಳಿಂದ ಈಶಾನ್ಯ ಸಾರಿಗೆ ಬಸ್‌ಗಳನ್ನು ರೈಲ್ವೆ ನಿಲ್ದಾಣದವರೆಗೆ ರೈಲು ಸಮಯಕ್ಕೆ ಓಡಿಸಲು ಸೂಚನೆ ನೀಡಲಾಗಿದೆ. ಈ ವರ್ಷದ ಕೇಂದ್ರದ ಬಜೆಟ್‌ನಲ್ಲಿ 140 ಕೋಟಿ ಗಿಣಿಗೇರಾ ಮಹೆಬೂಬ ನಗರ ರೈಲ್ವೆ ಕಾಮಗಾರಿಗೆ ಮೀಸಲಿರಿಸಿದ್ದು, ನೂತನವಾಗಿ ಕೇಂದ್ರದ ರೈಲ್ವೆ ಸಚಿವರಾಗಿರುವ ಸುರೇಶ ಅಂಗಡಿ ಅವರನ್ನು ಭೇಟಿ ಮಾಡಿ ರಾಯಚೂರುವರೆಗೆ ಮಾರ್ಗ ಶೀಘ್ರ ಪೂರ್ಣಗೊಳಿಸಲು ಇನ್ನಷ್ಟು ಹಣ ಮಂಜೂರು ಮಾಡುವಂತೆ ಕೋರಲಾಗಿದೆ. ಗದಗ-ವಾಡಿ ರೈಲ್ವೆ ಕಾಮಗಾರಿ ಭರದಿಂದ ನಡೆಯುತ್ತಿದ್ದು ಅದಕ್ಕೂ ಹಣ ಮೀಸಲಿರಿಸಲು ಕೋರಲಾಗಿದೆ ಎಂದರು.

ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್‌, ಮಾಜಿ ಶಾಸಕರಾದ ದೊಡ್ಡನಗೌಡ, ಕೆ. ಶರಣಪ್ಪ, ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಬಿಜೆಪಿ ಮುಖಂಡರಾದ ತಿಪ್ಪೇರುದ್ರಸ್ವಾಮಿ, ಎಚ್.ಗಿರೇಗೌಡ, ತಮ್ಮಿನೀಡಿ ಸತ್ಯನಾರಾಯಣ, ಕೊಮರಿನ್‌ ಸತ್ಯನಾರಾಯಣ, ಮರಿವಾಡ ಸತ್ಯನಾರಾಯಣ, ರವಿ ಬಸಾಪಟ್ಟಣ, ಆನಂದರಾವ್‌, ದೇವಪ್ಪ ಕಾಮದೊಡ್ಡಿ, ಪಂಪಾಪತಿ ಸಿಂಗನಾಳ, ಈಳಿಗೇರ್‌ ರಾಮಕೃಷ್ಣ, ಬಿಚ್ಚಾಲಿ ಮಲ್ಲಿಕಾರ್ಜುನ, ಅಜಯ್‌ ಬಿಚ್ಚಾಲಿ, ವಾಸುದೇವನವಲಿ ರೈಲ್ವೆ ಇಲಾಖೆ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next