Advertisement

ಹೇಮಗುಡ್ಡ ದಸರಾ : ವೈಭವದ ಆನೆ ಮೇಲೆ ಅಂಬಾರಿ ದುರ್ಗಾಪರಮೇಶ್ವರಿ ಮೆರವಣಿಗೆ

09:34 AM Oct 05, 2022 | Team Udayavani |

ಗಂಗಾವತಿ :ನಾಡಹಬ್ಬ ದಸರಾ ನವರಾತ್ರಿ ಮಹೋತ್ಸವದ ನಿಮಿತ್ತ ತಾಲ್ಲೂಕಿನ ಹೇಮಗುಡ್ಡದಲ್ಲಿ ಆನೆಯ ಮೇಲೆ ಅಂಬಾರಿ ದುರ್ಗಾಪರಮೇಶ್ವರಿಯ ಮೆರವಣಿಗೆ ವೈಭವ ಮತ್ತು ಶ್ರದ್ಧೆಯಿಂದ ಜರುಗಿತು ಮೆರವಣಿಗೆಗೆ ಮಾಜಿ ಸಂಸದ ಹಿರಿಯ ಮುಖಂಡ ಎಚ್ ಜಿ ರಾಮುಲು ,ಸಂಸದ ಕರಡಿ ಸಂಗಣ್ಣ , ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.

Advertisement

ಹೇಮಗುಡ್ಡದಲ್ಲಿ 9ದಿನಗಳ ಕಾಲ ಶ್ರೀ ದೇವಿಯ ಪುರಾಣ ನಡೆದು ಬುಧವಾರ ಬೆಳಿಗ್ಗೆ ಉಚಿತ ಸಾಮೂಹಿಕ ಜರುಗಿ ಸಂಜೆ ಆನೆಯ ಮೇಲೆ ಅಂಬಾರಿಯಲ್ಲಿ ದುರ್ಗಾಪರಮೇಶ್ವರಿಯ ನ ಮೆರವಣಿಗೆ ಮಾಡಲಾಗುತ್ತದೆ .ಮೆರವಣಿಗೆಯಲ್ಲಿ ನಾಡಿನ ವಿವಿಧ ಜನಪದ ಕಲಾತಂಡಗಳು ಮತ್ತು ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯ ಸೌರಭವನ್ನು ಹೆಚ್ಚಿಸಿದವು.

ದಸರಾ ಆನೆ ಅಂಬಾರಿ ಮೆರವಣಿಗೆ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದಿಂದ 3ಕಿಲೋಮೀಟರ್ ಸಾಗಿ ಬಸವಣ್ಣ ಗುಡಿ ಹತ್ತಿರ ಕೊನೆಗೊಂಡಿತು .
ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹೇಮಗುಡ್ಡ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು .

ಈ ಸಂದರ್ಭದಲ್ಲಿ ಮಾಜಿ ಸಂಸದ ಎಚ್ .ಜಿ. ರಾಮುಲು,ಮಾಜಿ ಸಚಿವ ಶಿವರಾಜ್ ತಂಗಡಗಿ , ಸಂಸದ ಕರಡಿ ಸಂಗಣ್ಣ ,ಶಾಸಕ ಪರಣ್ಣ ಮುನವಳ್ಳಿ ಹಾಗೂ ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ ಬಿಜೆಪಿ ಮುಖಂಡರಾದ ತಿಪ್ಪೇರುದ್ರಸ್ವಾಮಿ,ಸಿಂಗನಾಳ ವಿರುಪಾಕ್ಷಪ್ಪ ಸೇರಿದಂತೆ ಸುತ್ತಮುತ್ತಲಿನ ತಾಲ್ಲೂಕಿನ ಜನತೆ ಹೇಮಗುಡ್ಡದ ಸಭೆಯಲ್ಲಿ ಪಾಲ್ಗೊಂಡಿದ್ದರು .

ಇದನ್ನೂ ಓದಿ : ಎಲ್‍ಇಡಿ ಟಿವಿ ಸ್ಫೋಟಗೊಂಡು ಬಾಲಕ ಸಾವು, ಸ್ಫೋಟದ ಭೀಕರತೆಗೆ ಮನೆಯ ಗೋಡೆಯೇ ಛಿದ್ರ

Advertisement
Advertisement

Udayavani is now on Telegram. Click here to join our channel and stay updated with the latest news.

Next