Advertisement

ನಿಯಮ ಉಲ್ಲಂಘನೆ : ಬೀಜ ಸಂಸ್ಕರಣಾ ಘಟಕಗಳಿಗೆ ಅಧಿಕಾರಿಗಳಿಂದ ನೋಟೀಸ್

07:47 PM Nov 30, 2021 | Team Udayavani |

ಗಂಗಾವತಿ : ಕೃಷಿ ಇಲಾಖೆಯ ಬೀಜ ಸಂಸ್ಕರಣ ನಿಯಮ ಉಲ್ಲಂಘಿಸಿ ಬೀಜ ಸಂಸ್ಕರಣೆ ಮಾಡಿ ಮಾರಾಟ ಮಾಡುತ್ತಿದ್ದ 3 ಘಟಕಗಳ ಮೇಲೆ ಕೃಷಿ ಮಾರಾಟ ಜಾಗೃತ ದಳದ ಬೆಳಗಾವಿ ವಿಭಾಗದ ಅಧಿಕಾರಿಗಳ ತಂಡ ದಾಳಿ ಮಾಡಿ ನೋಟಿಸ್ ಜಾರಿ ಮಾಡಿದೆ.

Advertisement

ಕಳಪೆ ಬೀಜ ಮತ್ತು ಗೊಬ್ಬರ ಮಾರಾಟ ಮಾಡುವ ದೂರುಗಳ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಜಾಗೃತ ದಳದ ಬೆಳಗಾವಿ ವಿಭಾಗದ ತಂಡದ ಅಧಿಕಾರಿಗಳಾದ ಜಿಲಾನಿ ಮೊಕಾಶಿ, ಮಹಾಂತೇಶ ಕಿಣಗಿ, ಮಂಜುನಾಥ ಕುಲಕರ್ಣಿ, ಕೆ ಕುಮಾರಸ್ವಾಮಿ ಹಾಗೂ ಲಿಂಗಪ್ಪ ನಾಯಕ ಹಾಗೂ ಗಂಗಾವತಿ ಕೊಪ್ಪಳ ಯಲಬುರ್ಗಾ ಕುಷ್ಟಗಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ತಂಡ ಹಿರೇ ಬೆಣಕಲ್ ಲಿನಲ್ಲಿರುವ ಮೇ।। ವಿಜಯಲಕ್ಷ್ಮಿ ಆಗ್ರೋ ಏಜೆನ್ಸಿ , ಹೊಸ್ಕೇರಾ ಕ್ಯಾಂಪಿನ ಶ್ರೀರಾಮ ಸೀಡ್ಸ್ , ಶ್ರೀ ಸಾಯಿ ಕೃಷ್ಣ ಆಗ್ರೋ ಕಂಪನಿಯ ಮಾಲೀಕರು ಬೀಜತಯಾರಿಕಾ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ವೆಸಗಿರುವ ಕುರಿತು ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಕೃಷಿ ಜಾಗೃತ ಕೋಶದ ಅಧಿಕಾರಿಗಳು ಬೀಜ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆ ಮಾಡಿ ನಿಯಮ ಉಲ್ಲಂಘಿಸಿದ್ದಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ.

ಮುಂದಿನ ಆದೇಶ ಬರುವ ತನಕ ಬೀಜ ತಯಾರಿಕೆ ಮತ್ತು ಬೀಜಗಳನ್ನು ಮಾರಾಟ ಮಾಡದಂತೆ ನೋಟಿಸ್ ನಲ್ಲಿ ಸೂಚನೆ ನೀಡಲಾಗಿದೆ.

ಇದನ್ನೂ ಓದಿ : ಕಿಷ್ಕಿಂದಾ ಅಂಜನಾದ್ರಿ ಕಾಣಿಕೆ ಹುಂಡಿ ಎಣಿಕೆ:  23.50 ಲಕ್ಷ ರೂ. ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next