Advertisement

ಪಂಪಾಸರೋವರದ ರಸ್ತೆಗೆ ಅಳವಡಿಸಿದ್ದ ಸೋಲಾರ್ ದೀಪಗಳ ಕಳವು: 1 ತಿಂಗಳಲ್ಲಿ ಎರಡು ಬಾರಿ ಕಳ್ಳತನ

01:07 PM Sep 07, 2022 | Team Udayavani |

ಗಂಗಾವತಿ : ತಾಲ್ಲೂಕಿನ ಐತಿಹಾಸಿಕ ಪಂಪಾಸರೋವರದ ರಸ್ತೆಗಳಿಗೆ ಮತ್ತು ಕಂಪನಿಯವರು ಸುತ್ತಲು ಅಳವಡಿಸಿದ್ದ ಸೋಲಾರ್ ದೀಪಗಳನ್ನು ಕಳ್ಳರು ಕಳ್ಳತನ ಮಾಡಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

2020-21 ರಲ್ಲಿ ಗಂಗಾವತಿ ಮುನಿರಾಬಾದ್ ಮುಖ್ಯ ರಸ್ತೆಯಿಂದ ಪಂಪಾಸರೋವರದ ವರೆಗೆ ಒಂದೂವರೆ ಕಿ. ಮೀ. ವರೆಗೆ ಹಾಗೂ ಪಂಪಾ ಸರೋವರದ ಸುತ್ತಲೂ ಅಳವಡಿಸಿದ್ದ ಸೋಲಾರ್ ದೀಪಗಳ ಪೈಕಿ 11 ಸೋಲಾರ್ ದೀಪಗಳು ಮತ್ತು ಪ್ಯಾನಲ್ ಗಳನ್ನು ಅಳವಡಿಸಲಾಗಿತ್ತು . ಒಂದು ತಿಂಗಳ ಅವಧಿಯಲ್ಲಿ 2 ಬಾರಿ ಕಳ್ಳತನ ಪ್ರಕರಣ ನಡೆದಿದ್ದು 11 ಸೋಲಾರ್ ದೀಪಗಳು ಮತ್ತು ಬ್ಯಾನರ್ ಗಳನ್ನು ಕಳ್ಳತನ ಮಾಡಲಾಗಿದೆ.

ಕಂದಾಯ ಅಧಿಕಾರಿ ಮಂಜುನಾಥ್ ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ಮಾಲಾಶ್ರೀ ಮಾಲಾ ಹಾಗೂ ಸಚಿವ ಶ್ರೀರಾಮುಲು ಆಪ್ತ ಗಂಗಾಧರ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ : ಕತ್ತಿ – ಜಾರಕಿಹೊಳಿ ಕುಟುಂಬ ವಿದ್ಯಾ ಜೀವನದಿಂದಲೂ ಕೂಡಿ ಬಂದಿದೆ : ರಮೇಶ ಜಾರಕಿಹೊಳಿ

 

Advertisement
Advertisement

Udayavani is now on Telegram. Click here to join our channel and stay updated with the latest news.

Next