ಗಂಗಾವತಿ : ಕ್ಷುಲ್ಲಕ ಕಾರಣಕ್ಕೆ ಐವರು ಯುವಕರ ತಂಡವೊಂದು ಇಬ್ಬರು ಯುವಕರ ಮೇಲೆ ಬಿಯರ್ ಬಾಟಲಿಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ರವಿವಾರ ರಾತ್ರಿ ನಗರದ ಸ್ವಾಗತ ಬಾರ್ ಬಳಿ ನಡೆದಿದೆ.
ಘಟನೆಯಲ್ಲಿ ರಾಘು ಮತ್ತು ವೆಂಕೋಬ ಗಾಯಗೊಂಡಿದ್ದು ಅದರಲ್ಲಿ ವೆಂಕೋಬ ತಿಮ್ಮಣ್ಣ ಕೊಂಡೇಕರ್ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ ಸಂಬಂಧ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಘಟನೆ ನಡೆದ ಇಪ್ಪತ್ತನಾಲ್ಕು ಗಂಟೆಗಳ ಒಳಗಾಗಿ ಆರೋಪಿಗಳಾದ ಕುಮಾರ್ , ಹುಸೇನ್ ಗಂಗಾವತಿ, ಮಣಿ ಸಂಗಾಪುರ, ಕುಮಾರ ಕಾಮದೊಡ್ಡಿ ಗಂಗಾವತಿ, ರೇಣುಕರಾಜ್ ಕಂಪ್ಲಿ ಸಾ. ಗಂಗಾವತಿ ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : ಏಷ್ಯಾಕಪ್ ಹಾಕಿ : ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಡ್ರಾ