Advertisement

ಗಂಗಾವತಿ : ಭೀಮಾ ಕೋರೆಗಾಂವ್ ಯುದ್ಧ ವಿಜಯೋತ್ಸವ ಆಚರಣೆ

03:28 PM Jan 01, 2023 | Team Udayavani |

ಗಂಗಾವತಿ :ಭೀಮಾ ಕೋರೆಗಾವ್ ಯುದ್ಧದ ವಿಜಯೋತ್ಸವ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿತ್ತು.

Advertisement

ಸಂಘಟನೆಗಳ ಮುಖಂಡ ಮರಿಯಪ್ಪ ಕುಂಟೋಜಿ ಮಾತನಾಡಿ, ಎಸ್ಸಿ ಎಸ್ಟಿ ಹಿಂದುಳಿದ ಮತ್ತು ಶೋಷಿತರ ಶೌರ್ಯದ ಸಂಕೇತವೇ ಕೋರೆಗಾಂವ್ ಯುದ್ಧವಾಗಿದೆ. ಮೇಲ್ವರ್ಗದವರು ಮಾತ್ರ ಆಡಳಿತ ಹಾಗೂ ಯುದ್ಧ ಮಾಡಲು ಯೋಗ್ಯರು. ಕೆಳವರ್ಗದವರು ಮೇಲ್ವರ್ಗದವರ ಸೇವೆ ಮಾಡಲು ಮಾತ್ರ ಕೆಳವರ್ಗದವರ ಕರ್ತವ್ಯ ಎಂಬ ರೀತಿಯಲ್ಲಿ ಪೇಶ್ವೆಗಳ ಆಡಳಿತ ಮಹರ್ ಜನಾಂಗವನ್ನು ನಡೆಸಿಕೊಳ್ಳುತ್ತಿತ್ತು. ಮಹರ್ ಜನಾಂಗದ ಮಕ್ಕಳಿಗೆ ಶಿಕ್ಷಣ ಮೂಲಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರೂ ನಿರ್ಲಕ್ಷ್ಯ ತೋರಿದ್ದರಿಂದ ಇಂಗ್ಲಿಷ್ ಆಡಳಿತ ಮಹರ್ ಸೇರಿ ಶೋಷಿತರ ಪರವಾಗಿ ಶಿಕ್ಷಣ ಮೂಲಸೌಕರ್ಯ ಕಲ್ಪಿಸಿ ಸೇನೆಯಲ್ಲಿ ಅವಕಾಶ ಕಲ್ಪಿಸಿ ಸ್ವಾಭಿಮಾನ ಮತ್ತು ಶೌರ್ಯ ಕಲ್ಪಿಸಲು ಒಪ್ಪಿದ್ದರಿಂದ ಭೀಮಾ ನದಿ ದಡದಲ್ಲಿ ಪೇಶ್ವೆಯವರ ಸೇನೆ ಹಾಗೂ ಇಂಗ್ಲೀಷ್ ಸೈನಿಕರ ಮಧ್ಯೆ ನಡೆದ ಯುದ್ದದಲ್ಲಿ 24 ಗಂಟೆಯಲ್ಲಿ 5 ಸಾವಿರ ಪೇಶ್ವೆಗಳ ಸೈನಿಕರನ್ನು ಐನೂರು ಮಹರ್ ಸೈನಿಕರು ಕೊಲ್ಲಿ ಶೌರ್ಯ ಮೆರೆದಿದ್ದಾರೆ.ಇದನ್ನು ಈ ದೇಶದ ಮೇಲ್ವರ್ಗದ ಪರವಾಗಿರುವ ಇತಿಹಾಸಕಾರರು ಮರೆಮಾಚಿದ್ದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಕೇಂಬ್ಡಿಜ್ ವಿವಿ ಮ್ಯೂಜಿಯಂ ಇತಿಹಾಸದಲ್ಲಿ ಬರೆದು ಸಂಗ್ರಹಿಸಲಾಗಿತ್ತು. ಇದನ್ನು ಓದಿದ ಅಂಬೇಡ್ಕರ್ ಅವರು ಭಾರತಕ್ಕೆ ಮರಳಿ ಭೀಮಾ ನದಿ ದಡದಲ್ಲಿರುವ ಕೋರೆಗಾಂವ್ ಯುದ್ಧ ನಡೆದ ಸ್ಥಳವನ್ನು ಪರಿಶೀಲಿಸಿ ಉತ್ಖನನ ಮಾಡಿ ಮಹರ್ ಜನಾಂಗದ ಸೈನಿಕರ ಶೌರ್ಯ ಸ್ಥೂಪವನ್ನು ನಿರ್ಮಿಸಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಿದರು.

ಅಲ್ಲಿಂದ ಪ್ರತಿ ಜನವರಿ 01 ರಂದು ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವವನ್ನು ದೇಶದಾದ್ಯಂತ ಶೋಷಿತ ಸಮುದಾಯಗಳು ಆಚರಣೆ ಮಾಡುತ್ತಿವೆ.ಇಂದಿಗೂ ಕೂಡ ಶೋಷಿತ ಹಿಂದುಳಿದ ಎಸ್ ಸಿ ಎಸ್ ಟಿ ಹಾಗೂ ಹಿಂದುಳಿದ ವರ್ಗದವರ ಮೇಲೆ ಶೋಷಣೆ ದೌರ್ಜನ್ಯ ನುರಂತರವಾಗಿದ್ದು ಅಂಬೇಡ್ಕರ್ ಅವರು ಶೋಷಿತರಿಗೆ ಹಲವು ಹಕ್ಕುಗಳನ್ನು ನೀಡಿದ್ದು ಈಗಿನ ಸರಕಾರ ಸಂವಿಧಾನವನ್ನು ಬದಲಾಯಿಸುವ ಮಾತನಾಡುತ್ತಿದೆ .ಇಂತಹ ಮತಿಹೀನರಿಗೆ ಶೋಷಿತರು ಬುದ್ಧಿ ಕೆಲಸ ಬೇಕು ಶೋಷಿತ ಜನಾಂಗವು ಭೀಮ ಕೋರೆಗಾವ್ ಉದ್ದ ವಿಜಯೋತ್ಸವದಲ್ಲಿ ಸಂಘಟನೆಗೊಂಡು ಪ್ರಜಾಪ್ರಭುತ್ವ ಸಂವಿಧಾನ ಉಳಿಸುವ ಕಾರ್ಯ ಮಾಡಬೇಕಿದೆ. ಪ್ರತಿ ಗ್ರಾಮದಲ್ಲಿ ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವದ ಕುರಿತು ಯುವ ಜನರಿಗೆ ಮಾಹಿತಿ ನೀಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಹಂಪೇಶ ಅರಿಗೋಲು, ತಿಮ್ಮಣ್ಣ, ಯಮನೂರಪ್ಪ ನಾಯಕ, ಮಾಗಿ ಹುಲುಗಪ್ಪ ,ಪರಂದಾಮ, ವಸಂತ ,ಬಸವರಾಜ್ ಪೂಜಾರಿ ,ಹುಲುಗಪ್ಪ ಮಾಸ್ತರ್ ,ತಿಮ್ಮಣ್ಣ ಹಂಚಿನಾಳ್, ವಿರೇಶ್ ಆರತಿ,ರವಿಬಾಬು, ವೆಂಕಟೇಶ್ ಚಲವಾದಿ ಕಂಟೆಪ್ಪ ಹಣವಾಣ,ಯಮನೂರ ಅನೇಕರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next