ಗಂಗಾವತಿ: ಹಂದಿ ಫಾರಂ ಮಾಲಿಕನಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸುವ ವೇಳೆ, ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ತಾಲ್ಲೂಕಿನ ಮುಸ್ಟೂರು ಬಳಿ ಮೇಲೆ ಶುಕ್ರವಾರ ನಡೆದಿದೆ.
ಆರೋಪಿಗಳಾದ ಅಶೋಕ ಬೆಳ್ಳಟ್ಟಿ ಮತ್ತು ಶಂಕರ್ ಸಿಂಧನೂರು ಗಾಯಗೊಂಡಿದ್ದಾರೆ.
ಘಟನೆ ವಿವರ: ಬೆಂಗಳೂರು ಕೊಡಗಲಿ ಹತ್ತಿರ ಜುಲೈ 16 ರಂದು ಹಂದಿ ಫಾರ್ಮ್ ನಲ್ಲಿ 90 ಹಂದಿ ಕದಿಯಲು ಯತ್ನಿಸಿದ್ದು, ಆಕ್ಷೇಪ ಮಾಡಿದ ಫಾರಂ ಮಾಲಿಕ ರಾಮಕೃಷ್ಣ ಎಂಬವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಕುರಿತು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು, ಬೆಲೂರು ಗಂಗಾವತಿ ತಾಲ್ಲೂಕಿನ ಬಳಿ ಬುಲೇರೋ ವಾಹನದಲ್ಲಿ ತೆರಳುತ್ತಿದ್ದ ಆರೋಪಿಗಳನ್ನು ತಡೆದು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಪೇದೆ ಬಸವರಾಜ ನಾಯಕ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾರೆ. ಚಿಕ್ಕ ಜಾಲಹಳ್ಳಿ ಪೋಲಿಸ್ ಠಾಣೆಯ ಪಿಐ ಪ್ರವೀಣ್ ಪರಾರಿಯಾಗಲು ಯತ್ನಿಸಿದವರ ಮೇಲೆ ಫೈರೀಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸೋನಿಯಾ ಗಾಂಧಿ ಮೇಲೆ ಸುಳ್ಳು ಆರೋಪ ಮಾಡಿ ಕಿರುಕುಳ ನೀಡುತ್ತಿದೆ: ರಮಾನಾಥ ರೈ
ಆರೋಪಿಗಳಾದ ಅಶೋಕ ಬೆಳ್ಳಟ್ಟಿ ಮತ್ತು ಶಂಕರ್ ಸಿಂಧನೂರು ಗಾಯಗೊಂಡಿದ್ದು ಇವರನ್ನು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅರೋಪಿಗಳ ಪೈಕಿ ಇನ್ನು ಮೂವರನ್ನು ಪೊಲೀಸರು ಬಂಧಿಸಿದ್ದು, ಎಎಸ್ಪಿ ಅರುಣಾಂಗ್ಶು ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಾದ ರುದ್ರೇಶ ಉಜ್ಜನಕೊಪ್ಪ, ಮಂಜುನಾಥ್, ಚಿಕ್ಕ ಜಾಲಹಳ್ಳಿ ಪಿ ಪ್ರವೀಣ್ ಸೇರಿ ಇತರ ಅಧಿಕಾರಿಗಳು ಇದ್ದರು.