Advertisement

ಗಂಗಾವತಿ: ಬೆಳ್ಳಂಬೆಳಿಗ್ಗೆ ಪೊಲೀಸ್ ವಾಕಿಂಗ್; ಜನರಿಗೆ ಶಾಂತಿಯ ಸಂದೇಶ

10:15 AM Oct 07, 2022 | Team Udayavani |

ಗಂಗಾವತಿ: ಶುಕ್ರವಾರ ಬೆಳ್ಳಂಬೆಳಿಗ್ಗೆ ಗಂಗಾವತಿ ನಗರದ ಓಣಿ ಸಂದುಗಳಲ್ಲಿ ಪೋಲಿಸ್ ವಾಕಿಂಗ್ ಜರುಗಿತು. ಡಿ.ಎಸ್.ಪಿ. ರುದ್ರೇಶ್ ಉಜ್ಜನಕೊಪ್ಪ ನೇತೃತ್ವದಲ್ಲಿ ನಗರದ ಪೊಲೀಸ್ ಠಾಣೆಯಿಂದ ಆರಂಭವಾದ ಪೋಲಿಸ್ ವಾಕಿಂಗ್ ಕಿಲ್ಲಾ ಏರಿಯಾ, ಗುಂಡಮ್ಮ ಕ್ಯಾಂಪ್, ಬಸವಣ್ಣ ಸರ್ಕಲ್, ಗಾಂಧಿ ಸರ್ಕಲ್, ಮಹಾವೀರ ಸರ್ಕಲ್, ಇಂದಿರಾನಗರ, ಪಂಪಾನಗರ, ಎಸ್ಸಾರೆಸ್ ಸರ್ಕಲ್, ಮುಜಾವರ ಕ್ಯಾಂಪ್, ಇಸ್ಲಾಂಪುರ ಭಾಗದಲ್ಲಿ ಜರುಗಿತು.

Advertisement

ಈ ಸಂದರ್ಭದಲ್ಲಿ ಡಿ.ಎಸ್.ಪಿ. ರುದ್ರೇಶ್ ಉಜ್ಜನಕೊಪ್ಪ ಉದಯವಾಣಿ ಜತೆ ಮಾತನಾಡಿ, ಪ್ರತಿ ಶುಕ್ರವಾರ ತಾಲ್ಲೂಕು ಕ್ರೀಡಾಂಗಣದಲ್ಲಿ ಪೊಲೀಸ್ ಕವಾಯತು ನಡೆಯುತ್ತದೆ. ಮಳೆಯ ಪರಿಣಾಮ ಕ್ರೀಡಾಂಗಣದಲ್ಲಿ ಮಳೆ ನೀರು ನಿಂತಿರುವ ಕಾರಣ ಪೋಲಿಸ್ ಕವಾಯತು ಬದಲಾಗಿ ಎಸ್ಪಿಯವರ ಸೂಚನೆಯಂತೆ ನಗರದ ಪ್ರಮುಖ ಓಣಿಗಳಲ್ಲಿ ಪೊಲೀಸ್ ವಾಕಿಂಗ್ ನಡೆಸಲಾಯಿತು. ಪೊಲೀಸ್ ಮತ್ತು ಜನರ ಮಧ್ಯೆ ಯಾವುದೇ ಅಂತರ ಇರಬಾರದು. ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ಜನರಲ್ಲಿ ಶಾಂತಿ ಮತ್ತು ವಿಶ್ವಾಸದ ಭಾವನೆ ಮೂಡಿಸಲು ಈ ವಾಕಿಂಗ್ ನಡೆಸಲಾಗಿದೆ ಎಂದರು.

ಪೊಲೀಸ್ ಅಧಿಕಾರಿಗಳಾದ ಟಿ. ವೆಂಕಟಸ್ವಾಮಿ, ಮಂಜುನಾಥ್ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ವರ್ಗದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next