Advertisement

ಗಂಗಾವತಿ: ನವಬೃಂದಾವನ ಕ್ಷೇತ್ರದಲ್ಲಿ ಯತಿದ್ವಾದಶಿ ಆಚರಣೆ

02:19 PM Sep 22, 2022 | Team Udayavani |

ಗಂಗಾವತಿ: ತಾಲೂಕಿನ ಆನೆಗೊಂದಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಯತಿದ್ವಾದಶಿ ಪ್ರಯುಕ್ತ ನವಬೃಂದಾವನ ಕ್ಷೇತ್ರದಲ್ಲಿ ವಿಶೇಷವಾಗಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

Advertisement

ನವಬೃಂದಾವನ ಕ್ಷೇತ್ರದಲ್ಲಿನ ಶ್ರೀಪದ್ಮನಾಭ ತೀರ್ಥರ, ಶ್ರೀಜಯತೀರ್ಥರ ಮೂಲ ವೃಂದಾವನ ಸೇರಿದಂತೆ ಎಲ್ಲಾ ಒಂಬತ್ತು ವೃಂದಾವನಕ್ಕೆ ವಿಶೇಷವಾಗಿ ನಿರ್ಮಲ್ಯ, ಪಂಚಾಮೃತಾಭಿಷೇಕ, ವಸ್ತ್ರ ಅಲಂಕಾರ, ಹೂವಿನ ಅಲಂಕಾರ, ಹಸ್ತೋದಕ ನೆರವೇರಿಸಲಾಯಿತು. ನಂತರ ಬ್ರಾಹ್ಮಣರ ಅಲಂಕಾರ ಜರಗಿತು. ಪಂಡಿತರಿಂದ ಉಪನ್ಯಾಸ, ಭಜನೆ ನಡೆಯಿತು.

ಈ ಸಂದರ್ಭದಲ್ಲಿ ಆನೆಗೊಂದಿ ಮಠದ ವಿಚಾರಣಕರ್ತ ಡಾ.ಮಧುಸೂದನ, ವ್ಯವಸ್ಥಾಪಕ ಸುಮಂತ ಕುಲಕರ್ಣಿ, ಪಂಡಿತರಾದ ಸುಳಾದಿ ಹನುಮೇಶ್ ಆಚಾರ್ಯ, ಸಂತೆಕೆಲೂರ್ ಶೇಷಗಿರಿರಾಜ, ಬಾಲ ಗೋಪಾಲದಾಸರು, ಸಿಂಧನೂರು ದೇಸಾಯಿ ರಾಘವೇಂದ್ರ, ಅನಂತ ಪದ್ಮನಾಭ, ನರಸಿಂಹ ಆಚಾರ್ಯ, ವಿಜಿಯಾಚಾರ್ಯ, ಸ್ವಾಮಿರಾವ್ ಸಂತೆಕೆಲೂರ್, ಗುರುರಾಜ್, ರಾಮಾಚಾರ್ಯ, ವೆಂಕಟೇಶ್ ಜೋಷಿ, ಶ್ರೀನಿವಾಸ ಆಚಾರ್ಯ ಹಾಗೂ ಸುತ್ತಮುತ್ತಲಿನ ಭಕ್ತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next