Advertisement

ಟೋಲ್ ವಸೂಲಿ ಮಾಡಿ ಸೌಲಭ್ಯ ನೀಡದ ಜಿಕೆಸಿ ಕಂಪನಿ ವಿರುದ್ಧ ಜನರ ಆಕ್ರೋಶ

06:10 PM Sep 11, 2021 | Team Udayavani |

ಗಂಗಾವತಿ:ಗಿಣಿಗೇರಾ ರಾಯಚೂರು ಟೋಲ್ ರಸ್ತೆಯು ತೀರಾ ಹದಗೆಟ್ಟಿದ್ದು ನಿತ್ಯವೂ ಅಪಘಾತ ಸಂಭವಿಸಿ ಹಲವರು ಗಾಯಗೊಂಡು, ಹಲವರು ಸಾವನ್ನಪ್ಪುತ್ತಿದ್ದಾರೆ. ಈ ರಸ್ತೆಯ ಕಾಮಗಾರಿ ಮತ್ತು ಟೋಲ್ ಸಂಗ್ರಹಣೆ ಗುತ್ತಿಗೆ ಪಡೆದಿರುವ ಜಿ ಕೆ ಸಿ ಕಂಪನಿ ಕಳೆದ 13ವರ್ಷಗಳಿಂದ ಈ ರಸ್ತೆ ಕಾಮಗಾರಿ ಮತ್ತು ನಿರ್ವಹಣೆ ಮತ್ತು ಟೋಲ್ ವಸೂಲಿಗಾಗಿ ಗುತ್ತಿಗೆ ಪಡೆದಿದೆ.

Advertisement

ಗಿಣಿಗೇರಾದಿಂದ ರಾಯಚೂರುವರೆಗೆ ನೂರಾರು ಗ್ರಾಮಗಳು ರಸ್ತೆಯ 2 ಬದಿಯಲ್ಲಿದ್ದ ಗ್ರಾಮಗಳಲ್ಲಿ ಸಿಗ್ನಲ್ ಲೈಟ್ ಹಾಗೂ ಅಪಘಾತ ರಹಿತವಾಗಿ ವಾಹನ ಚಾಲನೆಯ ಆಗುವಂತಹ ಯಾವುದೇ ಸಿಗ್ನಲ್ ಗಳನ್ನು ಅಳವಡಿಸಿಲ್ಲ ಇದರಿಂದಾಗಿ ನಿತ್ಯವೂ ಹಗಲು ರಾತ್ರಿ ಬೈಕ್  ಇತರೆ ವಾಹನಗಳು ಮಧ್ಯೆ  ಅಪಘಾತ ಸಂಭವಿಸಿ ಹಲವಾರು ಜನರು ಸಾವನ್ನಪ್ಪಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಸುರಿಯುತ್ತಿರುವ ಮಳೆಗೆ ಗಿಣಗೇರಾದಿಂದ ಗಂಗಾವತಿ ತಾಲ್ಲೂಕಿನ ಗಡಿಭಾಗದವರೆಗೂ ರಸ್ತೆ ತೀರ ಹದಗೆಟ್ಟಿದ್ದು ವಾಹನಗಳನ್ನು ಚಾಲನೆ ಮಾಡಲು ಸವಾರರು ಪರದಾಡುತ್ತಿದ್ದಾರೆ.

ತಾಲ್ಲೂಕಿನ ಹೇಮಗುಡ್ಡ ಮತ್ತು ಮರಳಿ ಬಳಿ 2ಟೋಲ್ ಸಂಗ್ರಹ ಮಾಡುವ ಕೇಂದ್ರಗಳಿದ್ದು ಇಲ್ಲಿ ಪ್ರಯಾಣಿಕರಿಗೆ ಮತ್ತು ವಾಹನಗಳ ಚಾಲಕರಿಗೆ ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳನ್ನು  ಕಲ್ಪಿಸುವಲ್ಲಿ ಖಾಸಗಿ ಕಂಪನಿ ಜಿಕೆಸಿ ವಿಫಲವಾಗಿದೆ.

ಇದನ್ನೂ ಓದಿ:ಗುಜರಾತ್ ಸಿಎಂ ಸ್ಥಾನಕ್ಕೆ ರೂಪಾನಿ ರಾಜೀನಾಮೆ; ಜಿಗ್ನೇಶ್ ಮೇವಾನಿ ಟ್ವೀಟ್ ನಲ್ಲಿ ಏನಿದೆ?

Advertisement

ಗಿಣಿಗೇರಾದಿಂದ ಸಿಂಧನೂರುವರೆಗಿನ ರಸ್ತೆಯುದ್ದಕ್ಕೂ ಹೆಚ್ಚು ಅಪಘಾತ ಸಂಭವಿಸುತ್ತವೆ ಇದರಲ್ಲಿ ತುರ್ತು ಚಿಕಿತ್ಸೆಗಾಗಿ ಜಿ ಕೆ ಸಿ ಕಂಪೆನಿ ಯಾವುದೇ ಅಂಬುಲೆನ್ಸ್ ಹಾಗೂ ಇತರ ಚಿಕಿತ್ಸೆ ಕಲ್ಪಿಸುವಲ್ಲಿ ಜಿಕೆಸಿ ಕಂಪೆನಿ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ರಮಕ್ಕೆ ಮುಂದಾಗಲು ಒತ್ತಾಯ:ಗಿಣಿಗೇರಾದಿಂದ ರಾಯಚೂರುವರೆಗೆ ರಸ್ತೆಯ ಕಾಮಗಾರಿ ಮತ್ತು ಟೋಲ್ ಸಂಗ್ರಹಣೆ ಗುತ್ತಿಗೆ ಪಡೆದಿರುವ ಜಿ ಕೆ ಸಿ ಕಂಪೆನಿ  ಸವಾರರಿಗೆ ಮತ್ತು ಚಾಲಕರಿಗೆ ರಸ್ತೆಯಲ್ಲಿ ಚಲಿಸುವ ಸವಾರರಿಗೆ ಮತ್ತು ಪ್ರಯಾಣಿಕರಿಗೆ ಚಾಲಕರಿಗೆ ಶೌಚಾಲಯ ಸೇರಿ ಮೂಲ ಭೂತ ಸೌಕರ್ಯ ಕಲ್ಪಿಸುವಲ್ಲಿ ಕಂಪೆನಿ ವಿಫಲವಾಗಿದೆ ಆದ್ದರಿಂದ ಕೊಪ್ಪಳ ರಾಯಚೂರು ಜಿಲ್ಲೆಗಳ ಜಿಲ್ಲಾಡಳಿತಗಳು ಜಿಕೆಸಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೆಕು.ರಸ್ತೆಯ ದುರಸ್ತಿ ಮತ್ತು ಟೋಲ್ ವಿಷಯವಾಗಿ ಗ್ರಾಮೀಣ ಜನರು ಸಂಘ ಸಂಸ್ಥೆಯವರು ವಕೀಲರುಗಳು ಟೋಲ್ ಸಿಬ್ಬಂದಿ ಗಳಿಗೆ  ಮನವಿ ಸಲ್ಲಿಸಲು ತೆರಳಿದರೆ ಸಿಸಿ ಕ್ಯಾಮೆರಾದಲ್ಲಿ ಚಿತ್ರೀಕರಿಸಿ ಪೊಲೀಸ್ ಠಾಣೆಗೆ ದೂರು ನೀಡುವ ದುಸ್ಸಾಹಸ ಮಾಡುತ್ತಿದ್ದಾರೆಂದು  ಜಂಗಮರ ಕಲ್ಗುಡಿಯ ಪ್ರಗತಿಪರ ರೈತ ಮತ್ತು ಕಾಂಗ್ರೆಸ್ ಮುಖಂಡ ವಿ. ಪ್ರಸಾದ್ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next