ಗಂಗಾವತಿ: ಹಾವೇರಿಯಲ್ಲಿ ಆಯೋಜಿಸಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜನಜಾಗೃತಿಗಾಗಿ ರಾಜ್ಯಮಟ್ಟದಲ್ಲಿ ಆಯೋಜಿಸಿರುವ ಕನ್ನಡ ರಥಯಾತ್ರೆಗೆ ನಗರದ ಶ್ರೀ ಚನ್ನಬಸವಸ್ವಾಮಿ ವೃತ್ತದಲ್ಲಿ ಕಸಾಪ ಪದಾಧಿಕಾರಿಗಳು, ಸಾಹಿತಿಗಳು ಕನ್ನಡಪರ ಮತ್ತು ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು ಕನ್ನಡಾಭಿಮಾನಿಗಳು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಹೇರೂರು ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಕನ್ನಡ ರಥ ರಾಜ್ಯಾದ್ಯಂತ ಪರ್ಯಾಟನೆ ನಡೆಸಿದ್ದು, ಬುಧವಾರ ಭತ್ತದ ಕಣಜ ಗಂಗಾವತಿಗೆ ಆಗಮಿಸಿದೆ. 78ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿ ಮಾಡಿದ ಶ್ರೇಯಸ್ಸು ಗಂಗಾವತಿ ಜನತೆಗಿದ್ದು, ಈ ಬಾರಿಯೂ ಸಾವಿರಾರು ಕನ್ನಡ ಪ್ರೇಮಿಗಳು ಹಾವೇರಿಗೆ ತೆರಳಲಿದ್ದಾರೆಂದರು.
ಕಸಾಪ ಪದಾಧಿಕಾರಿಗಳು ಸೇರಿ ಅನೇಕರಿದ್ದರು.