ಗಂಗಾವತಿ: ನೆರಕ್ಕುರುಳಿ ಅನಾಹುತ ಸಂಭವಿಸುವ ಮುನ್ನ ಸಾರ್ವಜನಿಕರ ಒತ್ತಾಯಕ್ಕೆ ಮಣಿದ ತಾಲೂಕು ಆಡಳಿತ ಕಲ್ಮಠದ ಬಳಿ ಇದ್ದ ಬೃಹತ್ ಮರವನ್ನು ನೆಲಸಮ ಮಾಡಿದೆ.
Advertisement
ಕಲ್ಮಠದ ಬಳಿ ಸುಮಾರು 50 ವರ್ಷದ ಬೃಹತ್ ಎರಡು ಮರಗಳಿದ್ದು, ಕಳೆದ ವಾರ ಒಂದು ಮರ ಏಕಾ ಏಕಿ ನೆಲಕ್ಕುರುಳಿದ್ದರಿಂದ 12 ಬೈಕ್ ಹಾಗೂ ಒರ್ವ ವ್ಯಕ್ತಿಗೆ ತೀವ್ರ ಗಾಯವಾಗಿತ್ತು. ಆ ನಂತರ ಮತ್ತೊಂದು ಮರ ಮಂಗಳವಾರ ನೆಲಕ್ಕುರುಳುವ ಹಂತದಲ್ಲಿತ್ತು. ಕೂಡಲೇ ಮರವನ್ನು ಸುರಕ್ಷತಾ ಕ್ರಮಗಳೊಂದಿಗೆ ನೆಲಕ್ಕುರುಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದು, ಬುಧವಾರ ಸಾರ್ವಜನಿಕರ ಒತ್ತಾಯದ ಮೇರೆಗೆ ತಾಲೂಕು ಆಡಳಿತ ಮರವನ್ನು ಕಡಿದು ನೆಲಕ್ಕುರುಳಿಸಿದೆ.