ಗಂಗಾವತಿ: ದೊಡ್ಡಗಾತ್ರದ ಮರವೊಂದು ನೆಲಕ್ಕುರುಳಿದ ಪರಿಣಾಮ 12ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಜಖಂಗೊಂಡು ಮಹಾತ್ಮ ಗಾಂಧಿ ರಸ್ತೆ ಸಂಚಾರ ಅಸ್ತವ್ಯಸ್ತವಾದ ಘಟನೆ ಮಂಗಳವಾರ ಸಂಜೆ ನಡೆಯಿತು.
Advertisement
ನಗರದ ಮಲ್ಲೇಶ್ವರಂ ಪೋಟೋ ಸ್ಟುಡಿಯೋ ಹತ್ತಿರ ಈ ಸಂಭವಿಸಿದೆ. ಸುಮಾರು 50 ವರ್ಷದ ಮರ ಇದಾಗಿದ್ದು, ರಸ್ತೆ ಬದಿಯ ಅಂಗಡಿಗಳಿಗೆ ನೆರಳಾಗಿತ್ತು. ಮರದ ಬಡ್ಡಿಯಲ್ಲಿ ಮಣ್ಣಿನ ಕೊರತೆಯಾಗಿತ್ತು. ಇತ್ತೀಚೆಗೆ ಹಲವು ತಿಂಗಳು ಮಳೆ ಸುರಿದ ಪರಿಣಾಮವಾಗಿ ಮರದ ಬುಡ ಸಡಿಲವಾಗಿತ್ತು. ಮರ ಬಿದ್ದ ಪರಿಣಾಮ 3 ಘಂಟೆಗಳ ಕಾಲ ಸುತ್ತಲಿನ ನೂರಾರು ಮನೆಗಳ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.